ಕರ್ನಾಟಕ

karnataka

By

Published : Sep 21, 2020, 8:08 PM IST

ETV Bharat / state

ಡ್ರಗ್ಸ್​ ಪ್ರಕರಣ: ನಟ ಯೋಗಿ, ಮಾಜಿ ಕ್ರಿಕೆಟಿಗ ಅಯ್ಯಪ್ಪ ವಿಚಾರಣೆಗೊಳಪಡಿಸಿದ 'ಐಎಸ್​​ಡಿ' ತಂಡ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಇದೀಗ ನಟ ಯೋಗಿ ಸೇರಿ ಇಬ್ಬರ ವಿಚಾರಣೆಗೊಳಪಡಿಸಿದೆ.

actor yogi and ayyappa
actor yogi and ayyappa

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇದರ ಮಧ್ಯೆ ಇದೀಗ ಆಂತರಿಕ ಭದ್ರತಾ ವಿಭಾಗದ(ಐಎಸ್​ಡಿ)ಪೊಲೀಸರು ನಟ ಯೋಗಿ ಆಲಿಯಾಸ್ ಲೂಸ್ ಮಾದ ಹಾಗೂ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ ಅವರನ್ನ ವಿಚಾರಣೆಗೊಳಪಡಿಸಿದರು.

ಡ್ರಗ್ಸ್ ಕೇಸ್​ನಲ್ಲಿ ಫೆಡ್ಲರ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದ ವೇಳೆ ನಟ ಯೋಗೀಶ್ ಹಾಗೂ ಮಾಜಿ ಕ್ರಿಕೆಟಿಗ ಅಯ್ಯಪ್ಪ ಅವರ ಹೆಸರು ಉಲ್ಲೇಖ ಮಾಡಿದ್ದನಂತೆ.ಇದೇ ಆಧಾರದ ಮೇಲೆ ಇಬ್ಬರಿಗೆ ನೋಟಿಸ್​​​​ ನೀಡಿ ಇಂದು ಇಲಾಖೆಗೆ ಕರೆಯಿಸಿಕೊಂಡು ಎಡಿಜಿಪಿ ಭಾಸ್ಕರ್ ರಾವ್ ಅವರು ವಿಚಾರಣೆಗೊಳಪಡಿಸಿ, ತದನಂತರ ವಾಪಸ್​ ಕಳುಹಿಸಿದ್ದಾರೆ.

ನಟ ಯೋಗಿಶ್ ಐಎಸ್​ಡಿ ಕಚೇರಿಗೆ ಹಾಜರಾಗಿದ್ದು, ಡ್ರಗ್ಸ್ ದಂಧೆಗೂ ನನಗೂ ಯಾವುದೇ ಸಂಪರ್ಕವಿಲ್ಲ. ಯಾವುದೇ ಪಾರ್ಟಿಗೂ ಹೋಗುವುದಿಲ್ಲ ಎಂದು ತನಿಖಾಧಿಕಾರಿಗಳ‌ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ 19 ರಂದು ಮಾಜಿ ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆಗೊಳಪಡಿಸಲಾಗಿತ್ತು. ಇವರು ಸಹ ನಾನು ಮಾಜಿ ಕ್ರಿಕೆಟಿಗನಾಗಿದ್ದು, ಬ್ಯಾಂಕ್ ಉದ್ಯೋಗಿಯಾಗಿದ್ದೇನೆ. ನನಗೂ ಡ್ರಗ್ಸ್ ದಂಧೆಗೂ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಂಗಿ ನಟ ಯೋಗಿಶ್​ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details