ಕರ್ನಾಟಕ

karnataka

ETV Bharat / state

ಶಾಲೆಗಳಿಗೆ ಬಿಸಿಯೂಟ ಯೋಜನೆ ಪುನಾರಂಭ..ಇಸ್ಕಾನ್ ಅಕ್ಷಯ ಪಾತ್ರದಿಂದ ಊಟ ಪೂರೈಕೆ - ಇಸ್ಕಾನ್ ದೇವಾಲಯ

ಇಸ್ಕಾನ್ ದೇವಾಲಯದ ಅಕ್ಷಯ ಪಾತ್ರ ಪ್ರತಿಷ್ಠಾನವು ಇಂದಿನಿಂದ ಮಧ್ಯಾಹ್ನದ ಊಟ (ಎಂಡಿಎಂ) ಯೋಜನೆ ಪುನಾರಂಭಿಸಿದೆ.

ಅಕ್ಷಯ ಪಾತ್ರ
ಅಕ್ಷಯ ಪಾತ್ರ

By

Published : Oct 21, 2021, 10:04 PM IST

ಬೆಂಗಳೂರು: ಕೋವಿಡ್​​ನಿಂದಾಗಿ 18 ತಿಂಗಳಿಂದ ಶಾಲೆ ಮೆಟ್ಟಿಲೇರದ ಮಕ್ಕಳಿಗೆ, ಭೌತಿಕ ತರಗತಿಗಳು ಪುನಾರಂಭವಾಗಿವೆ. ಈ ಹಿನ್ನೆಲೆ ಇಸ್ಕಾನ್ ದೇವಾಲಯದ ಅಕ್ಷಯ ಪಾತ್ರ ಪ್ರತಿಷ್ಠಾನವು ಇಂದಿನಿಂದ ಮಧ್ಯಾಹ್ನದ ಊಟ (ಎಂಡಿಎಂ) ಯೋಜನೆ ಪುನಾರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಿಸಿರುವ ಅಕ್ಷಯ ಪಾತ್ರ ಸಂಸ್ಥೆ, ಮಧ್ಯಾಹ್ನದ ಊಟದ ಕಾರ್ಯಕ್ರಮವು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲಿದೆ. ಅಕ್ಷಯ ಪಾತ್ರ ಯೋಜನೆಯಿಂದ ಮಕ್ಕಳು ಪೌಷ್ಟಿಕಯುಕ್ತ ಆಹಾರ ಸೇವಿಸುತ್ತಾರೆ ಎಂದು ಹೇಳಿದೆ.

ಗುರುವಾರ ರಾಜಾಜಿನಗರ, ವಸಂತಪುರ ಮತ್ತು ಜಿಗಣಿ ಕೇಂದ್ರೀಕೃತ ಅಡುಗೆ ಮನೆಗಳಲ್ಲಿರುವ ನಮ್ಮ ಮೂರು ಅಡುಗೆಮನೆಗಳ ಮೂಲಕ ಬೆಂಗಳೂರು ಮತ್ತು ಸುತ್ತಮುತ್ತಲಿನ 789 ಶಾಲೆಗಳಲ್ಲಿ ಓದುತ್ತಿರುವ 75,000 ಕ್ಕೂ ಹೆಚ್ಚು ಮಕ್ಕಳಿಗೆ ಇಂದಿನಿಂದ ಸೇವೆ ಸಲ್ಲಿಸಲು ನಾವು ಸಂತಸ ವ್ಯಕ್ತಪಡಿಸುತ್ತೇವೆ ಎಂದಿದೆ.

‘ಕೋವಿಡ್ ನಿಯಮ ಪಾಲಿಸಿ ಅಡುಗೆ ತಯಾರಿ’

ಶಾಲೆಯ ಊಟ ಕಾರ್ಯಕ್ರಮವನ್ನು ಸುರಕ್ಷಿತ ರೀತಿಯಲ್ಲಿ ಪುನಾರಂಭಿಸುವ ಅಗತ್ಯವನ್ನು ಪ್ರತಿಷ್ಠಾನವು ಮನಗಂಡಿದೆ. ಸುರಕ್ಷಿತ ಮತ್ತು ಪೌಷ್ಠಿಕ ಆಹಾರ ವಿತರಣೆಗಾಗಿ ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಉದ್ಯೋಗಿಗಳಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ ಮತ್ತು ಮ್ಯಾಪ್ ಮಾಡಿದ ಶಾಲೆಗಳಿಗೆ ಆಹಾರ ತಯಾರಿಕೆ, ಪ್ಯಾಕೇಜಿಂಗ್ ಮತ್ತು ಆಹಾರ ತಲುಪಿಸುವಲ್ಲಿ ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಎಚ್ಚರಿಕೆಯಿಂದ ಅನುಸರಿಸಲು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ವಿಶೇಷ ಮೆನು

18 ತಿಂಗಳ ನಂತರ ಶಾಲೆಗಳನ್ನು ಪುನಾರಂಭಿಸುತ್ತಿರುವುದರಿಂದ ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಮ್, ಆಲೂಗಡ್ಡೆ ಮತ್ತು ಎಲೆಕೋಸು ತುಂಬಿದ ವೆಜ್ ಬಿರಿಯಾನಿ ಮತ್ತು ಮೂಂಗ್ ದಾಲ್ ಪಾಯಸವನ್ನು ಒಳಗೊಂಡ ವಿಶೇಷ ಮೆನುವನ್ನು ತಯಾರಿಸುತ್ತಿದ್ದೇವೆ ಎಂದು ಇಸ್ಕಾನ್ ಅಕ್ಷಯ ಪಾತ್ರ ಪ್ರತಿಷ್ಠಾನದ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ: ನಾಳೆ ತುಮಕೂರು ಬಂದ್​​​ಗೆ ಕರೆ

ABOUT THE AUTHOR

...view details