ಕರ್ನಾಟಕ

karnataka

ETV Bharat / state

ಕೊರೊನಾ ಕಂಟಕ: ನಾಳೆಯಿಂದ ಇಸ್ಕಾನ್ ದೇವಾಲಯವೂ ಬಂದ್!​ ​ - Bengaluru ISCON

ಮಹಾಮಾರಿ ಕೊರೊನಾ ಎಲ್ಲೆಲ್ಲೂ ತಲ್ಲಣ ಮೂಡಿಸಿದೆ. ಈ ಹಿನ್ನೆಲೆ ಸರ್ಕಾರ ಮುಂಜಾಗೃತ ಕ್ರಮವಾಗಿ ದೇವಾಲಯ, ಮಠ- ಮಾನ್ಯಗಳು ಸೇರಿದಂತೆ ಸಭೆ ಸಮಾರಂಭಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದೆ. ಇದೀಗ ಪ್ರಸಿದ್ಧ ಇಸ್ಕಾನ್​ ಟೆಂಪಲ್​ ಸಹ ನಾಳೆಯಿಂದ ಬಹುತೇಕ ಬಂದ್​ ಆಗಲಿದೆ.

ISCON temple remain closed
ಕೊರೊನಾ ಸಾಂದರ್ಭಿಕ

By

Published : Mar 17, 2020, 5:26 PM IST

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ನಗರದ ಪ್ರಸಿದ್ಧ ಇಸ್ಕಾನ್ ದೇವಾಲಯ ನಾಳೆಯಿಂದ ಬಂದ್ ಆಗಲಿದೆ.

ದೇವಾಲಯದ ಬಾಗಿಲು ತೆರೆಯದಿರಲು ಇಸ್ಕಾನ್ ಆಡಳಿತ ಮಂಡಳಿ ನಿರ್ಧರಿಸಿದೆ. ರಾಜಾಜಿನಗರದ ಇಸ್ಕಾನ್ ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತರು ಸೇರಿದಂತೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಜನರ ಸುರಕ್ಷತೆ ದೃಷ್ಟಿಯಿಂದ ಕೋವಿಡ್-19 ಹರಡದಂತೆ ಬಂದ್ ಮಾಡಲಾಗುತ್ತಿದೆ. ಅಲ್ಲದೆ ಕನಕಪುರದ ವೈಕುಂಠ ಹಿಲ್ ದೇವಸ್ಥಾನ ಕೂಡಾ ಬಂದ್​​ ಆಗಲಿದೆ. ಆದ್ರೆ ಮೊದಲೇ ಪೂಜೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ದೇವಾಲಯ ಪ್ರವೇಶ ಸಿಗಲಿದೆ.

ಕೊರೊನಾ ಭೀತಿ ಹಿನ್ನೆಲೆ ಇಸ್ಕಾನ್​ ಬಂದ್​

ದೇವಾಲಯಕ್ಕೆ ಕಡಿಮೆ ಸಂಖ್ಯೆಯ ಭಕ್ತರಿಗೆ ಮಾತ್ರ ಬರಲು ಅವಕಾಶವಿದ್ದು, ಶೇಕಡಾ 98 ರಷ್ಟು ಭಕ್ತರಿಗೆ ನಿಷೇಧವಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details