ಕರ್ನಾಟಕ

karnataka

ETV Bharat / state

ಅಧಿವೇಶನದ ಮೊದಲ ದಿನ ಸದನಕ್ಕೆ ಗೈರು... ವಿಪ್ ಉಲ್ಲಂಘಿಸಿದ್ರಾ ಅತೃಪ್ತ ಶಾಸಕರು? - undefined

ಶಾಸಕ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿರುವುದರಿಂದ ವಿಪ್ ತಮಗೆ ಅನ್ವಯವಾಗುವುದಿಲ್ಲ ಎನ್ನುವುದು ಅತೃಪ್ತ ಎಂಎಲ್ಎಗಳ ವಾದವಾಗಿದೆ.

ವಿಪ್ ಉಲ್ಲಂಘಿಸಿದರಾ ಅತೃಪ್ತ ಶಾಸಕರು..?

By

Published : Jul 13, 2019, 2:44 AM IST

Updated : Jul 13, 2019, 2:51 AM IST

ಬೆಂಗಳೂರು:ನಿನ್ನೆ ಆರಂಭಗೊಂಡ ವಿಧಾನಸಭೆಯ ಮಳೆಗಾಲ ಅಧಿವೇಶನದ ಮೊದಲ ದಿನದ ಕಾರ್ಯಕಲಾಪಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 16 ಜನ ಅತೃಪ್ತರು ಗೈರು ಹಾಜರಾಗಿದ್ದರು.

ಶಾಸಕರಿಗೆ ವಿಪ್​ ಜಾರಿ

ಆಡಳಿತ ಪಕ್ಷದ ಎಲ್ಲ ಶಾಸಕರೂ ಅಧಿವೇಶನದ ಆರಂಭದಿಂದ ಹಿಡಿದು 26ರ ವರೆಗೆ ನಡೆಯುವ ಅಧಿವೇಶನದ ಪ್ರತಿ ದಿನದ ಕಾರ್ಯಕಲಾಪಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಯಾವುದೇ ಸಂದರ್ಭದಲ್ಲಿ ಮಂಡನೆಯಾಗುವ ಹಣಕಾಸು ವಿಧೇಯಕಗಳು, ಶಾಸನಗಳು ಹಾಗು ಇತರ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸರ್ಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿಪ್ ನೀಡಲಾಗಿತ್ತು.

ಕಾಂಗ್ರೆಸ್ ರೆಬೆಲ್ ಶಾಸಕರಾದ ರಾಮಲಿಂಗಾರೆಡ್ಡಿ, ರಮೇಶ್ ಜಾರಕಿಹೊಳಿ, ಬಿ.ಸಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಮುನಿರತ್ನ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ರೋಷನ್ ಬೇಗ್, ಎಂಟಿ.ಬಿ ನಾಗರಾಜ್, ಮಹೇಶ್ ಕುಮಟಳ್ಳಿ, ಡಾ. ಸುಧಾಕರ್ ಮತ್ತು ಜೆಡಿಎಸ್ ಪಕ್ಷದ ಹೆಚ್ ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ, ಅವರು ಸದನಕ್ಕೆ ಗೈರು ಹಾಜರಾಗಿದ್ದರು.

ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಿರಬೇಕೆಂದು ಜಾರಿ ಮಾಡಲಾಗಿದ್ದ ವಿಪ್ ಅನ್ನ ಅತೃಪ್ತ ಶಾಸಕರು ಮೊದಲ ದಿನದ ಅಧಿವೇಶನಕ್ಕೆ ಗೈರು ಹಾಜರಾಗುವುದರ ಮೂಲಕ ಉಲ್ಲಂಘಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಮೊದಲ ದಿನದ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಅಂಗೀಕರಿಸುವ ಕಲಾಪ ಹೊರತುಪಡಿಸಿ ಉಳಿದ ಯಾವ ಮಹತ್ವದ ಕಲಾಪ ಇಲ್ಲದೇ ಇರುವುದರಿಂದ ವಿಧಾನಸಭೆ ಮುಖ್ಯ ಸಚೇತಕ ಮತ್ತು ಆಡಳಿತ ಪಕ್ಷಗಳ ನಾಯಕರು ಬಂಡಾಯ ಶಾಸಕರ ಗೈರು ಹಾಜರಿಯನ್ನು ಗಂಭೀರವಾಗಿ ತಗೆದುಕೊಂಡಿಲ್ಲ. ಉಳಿದ ದಿನದ ಅಧಿವೇಶನಕ್ಕೂ ಗೈರು ಹಾಜರಾದರೆ ವಿಪ್​ನಲ್ಲಿ ಎಚ್ಚರಿಸಿದಂತೆ ಬಂಡಾಯ ಶಾಸಕರ ಅನರ್ಹತೆಗೆ ಕ್ರಮ ತಗೆದುಕೊಳ್ಳಲು ಆಡಳಿತ ಪಕ್ಷಗಳು ನಿರ್ಧರಿಸಿವೆ.

ಶಾಸಕ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿರುವುದರಿಂದ ವಿಪ್ ತಮಗೆ ಅನ್ವಯವಾಗುವುದಿಲ್ಲ ಎನ್ನುವುದು ಅತೃಪ್ತ ಎಂಎಲ್ಎಗಳ ವಾದವಾಗಿದೆ. ರಾಜೀನಾಮೆ ಇನ್ನೂ ಅಂಗೀಕಾರ ಆಗದೇ ಇರುವುದರಿಂದ ವಿಪ್ ಪಾಲಿಸಲೇ ಬೇಕೆನ್ನುವುದು ಆಡಳಿತ ಪಕ್ಷದ ಪ್ರತಿವಾದವಾಗಿದೆ. ವಿಪ್ ಜಾರಿ ಪ್ರಕರಣ ಸಹ ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪವಾಗುವ ಸಾದ್ಯತೆ ಇದೆ. ರಾಜೀನಾಮೆ ನೀಡಿದ ಶಾಸಕರಿಗೆ ವಿಪ್ ಅನ್ವಯ ವಾಗುವುದಿಲ್ಲವೆಂದು ಕೋರ್ಟ್ ಅಭಿಪ್ರಾಯ ಪಟ್ಟರೆ ರೆಬೆಲ್ ಶಾಸಕರು ಅನರ್ಹತೆ ಅಪಾಯದಿಂದ ಪಾರಾದಂತೆ.

ಈ ನಡುವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆಂದು ಭಾವಿಸಲಾಗಿದ್ದ ಶಾಸಕರಾದ ಸೌಮ್ಯರೆಡ್ಡಿ, ಅಂಜಲಿ ನಿಂಬಾಳ್ಕರ್, ಸರಕಾರಿ ಮುಖ್ಯಸಚೇತಕ ಗಣೇಶ್ ಹುಕ್ಕೇರಿ, ಬಸವರಾಜ ದದ್ದಲ್, ಬಿಕೆ ಸಂಗಮೇಶ್, ಎಸ್ ಎನ್ ಸುಬ್ಬಾರೆಡ್ಡಿ, ಜೆಡಿಎಸ್ ಪಕ್ಷದ ಶ್ರೀನಿವಾಸ ಗೌಡ, ಅಶ್ವಿನ್ ಕುಮಾರ್, ಮತ್ತಿತರರು ಸದನಕ್ಕೆ ಹಾಜರಾಗಿದ್ದರು. ಶಾಸಕಿ ಸೌಮ್ಯರೆಡ್ಡಿ ಜತೆ ಸದನದೊಳಗೇ ಸಚಿವ ಡಿ ಕೆ ಶಿವಕುಮಾರ್ ಸುಮಾರು ಹೊತ್ತು ಮಾತುಕತೆ ನಡೆಸಿದರು.

ಶಾಸಕರೆಲ್ಲಾ ಕಡ್ಡಾಯವಾಗಿ ಸದನಕ್ಕೆ ಆಗಮಿಸಬೇಕೆಂದು ಆಡಳಿತ ಪಕ್ಷಗಳು ಹಾಗು ಪ್ರತಿ ಪಕ್ಷ ಬಿಜೆಪಿ ವಿಪ್ ಜಾರಿ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಸದನಕ್ಕೆ ಆಗಮಿಸಿದ್ದರು. ಉಳಿದ ಸಂದರ್ಭಗಳಲ್ಲಿ ಕೋರಂಗಾಗಿ ಅಧಿವೇಶನ ಪ್ರಾರಂಭಿಸಲು ಕಾಯಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ ವಿಪ್ ಮಹಿಮೆಯಿಂದ ಸದನ ಶಾಸಕರಿಂದ ಕಂಗೊಳಿಸುತ್ತಿತ್ತು.

Last Updated : Jul 13, 2019, 2:51 AM IST

For All Latest Updates

TAGGED:

ABOUT THE AUTHOR

...view details