ಕರ್ನಾಟಕ

karnataka

ETV Bharat / state

ರಾಜ್ಯ ರಾಜಕೀಯದಲ್ಲಿ ಮರೆಯಾಗುತ್ತಿದೆಯೇ ನೈತಿಕತೆ? - ಕರ್ನಾಟಕದ ರಾಜಕಾರಣ

ರಾಜ್ಯದ ಅಭಿವೃದ್ಧಿ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಅರಿವು ಮೂಡಿಸಿಕೊಳ್ಳದ ರಾಜಕೀಯ ಪಕ್ಷಗಳ ಟೀಕೆ, ಟಿಪ್ಪಣಿ, ನಾಯಕರ ಕೆಳಮಟ್ಟದ ವಾದ, ಪ್ರತಿವಾದದಲ್ಲೇ ಕಾಲಹರಣ ಮಾಡುತ್ತಿರುವ ಸನ್ನಿವೇಶದಲ್ಲಿ ರಾಜಕೀಯ ವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಸುಲಭವಾಗಿ ಸಾರ್ವಜನಿಕ ವಲಯ ಗ್ರಹಿಸುತ್ತಿದೆ.

Morality
ರಾಜ್ಯ ರಾಜಕೀಯ

By

Published : Mar 30, 2021, 8:13 AM IST

ಬೆಂಗಳೂರು:ತನ್ನದೇ ಆದ ಇತಿಹಾಸ ಹೊಂದಿರುವ ಕರ್ನಾಟಕದ ರಾಜಕಾರಣ ಯಾವ ದಿಕ್ಕಿಗೆ ಹೋಗುತ್ತಿದೆ. ಇಂತಹದೊಂದು ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಆರಂಭವಾಗಿವೆ. ರಾಜಕೀಯ ನಾಯಕರುಗಳ ಇತ್ತೀಚಿನ ನಡವಳಿಕೆಯನ್ನು ಗಮನಿಸಿದಾಗ ರಾಜಕೀಯದಲ್ಲಿ ನೈತಿಕತೆ ಮರೆಯಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

ರಾಜ್ಯದ ಅಭಿವೃದ್ಧಿ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಅರಿವು ಮೂಡಿಸಿಕೊಳ್ಳದ ರಾಜಕೀಯ ಪಕ್ಷಗಳ ಟೀಕೆ, ಟಿಪ್ಪಣಿ, ನಾಯಕರ ಕೆಳಮಟ್ಟದ ವಾದ, ಪ್ರತಿವಾದದಲ್ಲೇ ಕಾಲಹರಣ ಮಾಡುತ್ತಿರುವ ಸನ್ನಿವೇಶದಲ್ಲಿ ರಾಜಕೀಯ ವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಸುಲಭವಾಗಿ ಸಾರ್ವಜನಿಕ ವಲಯ ಗ್ರಹಿಸುತ್ತಿದೆ.

ಹಿಂದೆ ನೇರ, ನಿಷ್ಠುರ ರಾಜಕಾರಣವಿತ್ತು. ಅದೇ ರೀತಿ ರಾಜಕಾರಣಿಗಳೂ ಇದ್ದರು. ತನ್ನ ಮತ್ತು ಪಕ್ಷದ ವರ್ಚಸ್ಸು ಕಾಪಾಡಿಕೊಳ್ಳುವುದರ ಜೊತೆಗೆ ಜನರ ಕಷ್ಟ ಸುಖ, ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸುತ್ತಿದ್ದ ರಾಜಕಾರಣಿಗಳೂ ಇದ್ದರು‌. ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅದು ವಿರಳವಾಗಿದೆ. ಚುನಾವಣಾ ಪದ್ಧತಿಯಲ್ಲಿನ ಲೋಪ, ರಾಜಕಾರಣಿಗಳ ಆರೋಪ, ಪ್ರತ್ಯಾರೋಪಗಳು, ಸದನದಲ್ಲಿ ಸದಸ್ಯರ ನಡವಳಿಕೆ, ವಿಧಾನಮಂಡಲದಲ್ಲಿನ ಚರ್ಚೆಗಳ ಗುಣಮಟ್ಟವನ್ನು ಗಮನಿಸಿದರೆ ರಾಜಕೀಯ ವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಗ್ರಾಸವಾಗುತ್ತದೆ.

ಈಗ ರಾಜಕೀಯದ ಪಾವಿತ್ರತೆ ಉಳಿದಿದೆಯೇ?. ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ಚುನಾವಣಾ ವ್ಯವಸ್ಥೆಯಲ್ಲಿ ಯಾವಾಗ ಮತದಾರರನ್ನು ಹಣದ ಆಮಿಷ ತೋರಿಸಲಾಯಿತೋ ಆಗಿನಿಂದಲೇ ರಾಜಕೀಯ ಪಕ್ಷಗಳ ಸ್ಥಿತಿ ಅಧೋಗತಿಗೆ ಇಳಿಯಿತು. ಚುನಾವಣೆ ಗೆಲ್ಲುವುದೊಂದೇ ಎಲ್ಲರ ಅಂತಿಮ ಗುರಿ ಆಗಿರುವುದರಿಂದ ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಎಲ್ಲವೂ ಹಣ ಹಾಗೂ ಜಾತಿಯನ್ನೇ ಅವಲಂಬಿಸಿರುತ್ತದೆ. ಇದಕ್ಕೆ ಯಾವುದೇ ರಾಜಕೀಯ ಪಕ್ಷ ಹೊರತಲ್ಲ. ಕಾರ್ಯಕರ್ತರು ನಾಯಕನನ್ನು ಸೃಷ್ಟಿಸುವ ದಿನಗಳು ದೂರವಾಗಿವೆ. ತಮ್ಮನ್ನು ನಂಬಿ ಆಯ್ಕೆ ಮಾಡಿದ ಜನರಿಗೆ ನಂಬಿಕಸ್ಥರಾಗಿರಬೇಕಾದ ಜನಪ್ರತಿನಿಧಿಗಳು ಯಾವ ಮಟ್ಟಕ್ಕೆ ಹೋಗುತ್ತಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯ ವ್ಯವಸ್ಥೆ ಬಂದು ತಲುಪಿದೆ.

ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿ ಮುಂದಿಟ್ಟುಕೊಂಡು ರಾಜಕೀಯ ವ್ಯವಸ್ಥೆ ಇರುವುದು ದೊಡ್ಡ ದುರಂತ. ಚುನಾವಣೆಯಲ್ಲಿ ಆತ್ಮೀಯವಾಗಿ ಮಾತನಾಡುತ್ತಿದ್ದ ಒಂದೇ ವೇದಿಕೆಯಲ್ಲಿ ಒಬ್ಬರಾದ ನಂತರ ಇನ್ನೊಬ್ಬರು ಪ್ರಚಾರ ಮಾಡುತ್ತಿದ್ದ ದಿನಗಳಿದ್ದವು. ಆದರೆ, ಈಗ ಪರಸ್ಪರ ಟೀಕಿಸುವ ಜಾಲತಾಣಗಳಲ್ಲಿ ಬಳಸುವ ಭಾಷೆಯ ಬಗ್ಗೆ ಪಕ್ಷಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇತ್ತೀಚೆಗೆ ವಿಧಾನಮಂಡಲ ಉಭಯ ಸದನಗಳಲ್ಲಿ ನಡೆದ ಘಟನಾವಳಿಗಳು, ಹಲವರು ಸದನದಲ್ಲಿ ಬಳಸುವ ಭಾಷೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಅಧಿವೇಶನದಲ್ಲಿ ಸಾಮಾಜಿಕ ಸಮಸ್ಯೆಗಳು ಮೂಲಸೌಕರ್ಯಗಳ ಕೊರತೆ, ಅಭಿವೃದ್ಧಿ, ರಾಜ್ಯದ ಬಜೆಟ್, ಆಡಳಿತ, ವಿರೋಧ ಪಕ್ಷಗಳಿಗೆ ಪ್ರಮುಖ ವಿಚಾರ ಇದ್ದರೂ ಕೂಡ ಅಮೂಲ್ಯ ಸಮಯ ಹಾಳುಮಾಡಿ ಐದು ದಿನ ಮೊದಲೇ ಅಧಿವೇಶನ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಡುವಂತೆ ಮಾಡಲಾಯಿತು. ಇತ್ತೀಚೆಗೆ ಜನಪ್ರತಿನಿಧಿಗಳಿಗೆ ಅಧಿವೇಶನಗಳ ಬಗ್ಗೆ ನಿರುತ್ಸಾಹ ಮೂಡಿದೆಯೇ? ಎಂಬ ಪ್ರಶ್ನೆ ಮೂಡಿದೆ.

ರಾಜಕೀಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ. ನೈತಿಕತೆ ಇಂದಿನ ಅಗತ್ಯವಾಗಿದೆ. ಜನಪ್ರತಿನಿಧಿಗಳು ತಮ್ಮ ನಡವಳಿಕೆ ತಿದ್ದಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ABOUT THE AUTHOR

...view details