ಬೆಂಗಳೂರು:ಪುಲಕೇಶಿನಗರ ಟ್ರಾಫಿಕ್ ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ಪತ್ತೆಯಾದ ಆತಂಕದ ಬೆನ್ನಲ್ಲೇ ಇಡೀ ಟ್ರಾಫಿಕ್ ಪೊಲೀಸ್ ಸ್ಟೇಷನ್ ಸೀಲ್ ಡೌನ್ ಆಗಲಿದೆಯಾ ಎಂಬ ಆತಂಕ ಮನೆ ಮಾಡಿದೆ.
ಪೇದೆಗೆ ಕೊರೊನಾ: ಸೀಲ್ ಡೌನ್ ಆಗುತ್ತಾ ಪುಲಕೇಶಿನಗರ ಟ್ರಾಫಿಕ್ ಪೊಲೀಸ್ ಸ್ಟೇಷನ್? - bangalore latest news
ಯಲಹಂಕದ ನಿವಾಸಿ ಹಾಗೂ ಪುಲಕೇಶಿ ನಗರ ಸಂಚಾರಿ ಠಾಣೆಯ ಕಾನ್ಸ್ಟೇಬಲ್ಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಇಡೀ ಟ್ರಾಫಿಕ್ ಪೊಲೀಸ್ ಸ್ಟೇಷನ್ ಸೀಲ್ ಡೌನ್ ಆಗಲಿದೆಯಾ ಎಂಬ ಆತಂಕ ಮೂಡಿದೆ.

ಯಲಹಂಕದ ನಿವಾಸಿ ಹಾಗೂ ಪುಲಕೇಶಿ ನಗರ ಸಂಚಾರಿ ಠಾಣೆಯ ಕಾನ್ಸ್ಟೇಬಲ್ಗೆ ಪಾಸಿಟಿವ್ ಎಂದು ವರದಿ ಬಂದಿದ್ದು, ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವರದಿ ಬರುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು, ಕಾನ್ಸ್ಟೇಬಲ್ನನ್ನು ಕೂಡಲೇ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ. ಇವರ ಜೊತೆಯಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ಗೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕೊರೊನಾ ಪರೀಕ್ಷೆ ಮಾಡಿಸಿದ ಬಳಿಕ ಎಲ್ಲೆಲ್ಲಿ ಹೋಗಿದ್ದರು, ಯಾರ ಜೊತೆಯಲ್ಲಿ ಇದ್ದರು ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.
ಸೀಲ್ ಡೌನ್ ಆಗುತ್ತಾ ಟ್ರಾಫಿಕ್ ಪೊಲೀಸ್ ಸ್ಟೇಷನ್? ಕೊರೊನಾ ವೈರಸ್ ಕಾಣಿಸಿಕೊಂಡ ಕಾನ್ಸ್ಟೇಬಲ್ ಹೇಳುವ ಮಾಹಿತಿ ಮೇರೆಗೆ ಸೀಲ್ ಡೌನ್ ಮಾಡುವ ನಿರ್ಧಾರವಾಗಲಿದೆ. ಪೇದೆಯನ್ನು ಮೇ. 20ರಂದು ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ನಿನ್ನೆ ವರದಿಯಲ್ಲಿ ಪಾಸಿಟಿವ್ ಎಂದು ಬಂದಿತ್ತು. ನಿನ್ನೆ ಎಂದಿನಂತೆ ಕೆಲಸಕ್ಕೆ ಬಂದಿದ್ದರು. ಐದಕ್ಕಿಂತ ಹೆಚ್ಚಿನ ಪೊಲೀಸರನ್ನು ಕಾನ್ಸ್ಟೇಬಲ್ ಸಂಪರ್ಕ ಹೊಂದಿದ್ದರೆ ಸೀಲ್ ಡೌನ್ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈಗಾಗಲೇ ಕೆ.ಆರ್.ಪೇಟೆ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆ ಸೀಲ್ ಡೌನ್ ಆಗಿವೆ. ಪುಲಕೇಶಿ ನಗರ ಸಂಚಾರಿ ಠಾಣೆ ಸೀಲ್ ಡೌನ್ ಆಗಲಿದೆಯೇ ಎಂಬುದು ಸದ್ಯದಲ್ಲೇ ತಿಳಿಯಲಿದೆ.