ಬೆಂಗಳೂರು: ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಕಡಿಮೆ ಮಾಡಿ, ಕಡಿಮೆ ಸೋಂಕು ಪ್ರಕರಣಗಳನ್ನು ತೋರಿಸಲು ಬಿಬಿಎಂಪಿ ಮುಂದಾಗಿದೆಯೇ? ಎಂಬ ಶಂಕೆ ಮೂಡಿದೆ.
ಇದೀಗ ಕೋವಿಡ್ ಟೆಸ್ಟ್ ಸಂಖ್ಯೆಗಳನ್ನು ಬಿಬಿಎಂಪಿ ಅರ್ಧಕ್ಕೆ ಇಳಿಸಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗ್ತಿದ್ದಂತೆ ಟೆಸ್ಟಿಂಗ್ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ ನಗರದಲ್ಲಿ ಕೇವಲ 32,862 ಮಂದಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 16,747 ಸೋಂಕಿತರು ಪತ್ತೆಯಾಗಿದ್ದಾರೆ. ಪರಿಣಾಮ, ಬೆಂಗಳೂರಿನಲ್ಲಿ ಶೇ 39 ಪಾಸಿಟಿವಿಟಿ ರೇಟ್ ದಾಖಲಾಗಿದೆ.