ಕರ್ನಾಟಕ

karnataka

ETV Bharat / state

ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಸಮಾಲೋಚನೆ ನಡೆಸಿದ ಈಶ್ವರ್​​ ಖಂಡ್ರೆ

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಿಂದೆಯೂ ಅವರಿಗೆ ಬೆದರಿಕೆ ಕರೆ ಬಂದಿತ್ತು. ಬೇಹುಗಾರಿಕೆ ‌ಇದ್ದರೂ ಕೇಂದ್ರ ಪತ್ತೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

Irshawar Khandre who visited Khargay Home
ಖರ್ಗೆಯನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ ಈಶ್ವರ ಖಂಡ್ರೆ

By

Published : Jun 10, 2020, 6:13 PM IST

ಬೆಂಗಳೂರು:ಅನಾಮಿಕರಿಂದ ಜೀವ ಬೆದರಿಕೆಗೆ ಒಳಗಾಗಿರುವ ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಇಂದು ವಿವಿಧ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಪ್ರತಿಪಕ್ಷದ ವಿಧಾನಸಭೆ ಮುಖ್ಯ ಸಚೇತಕ ಅಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಿಂದೆಯೂ ಅವರಿಗೆ ಬೆದರಿಕೆ ಕರೆ ಬಂದಿತ್ತು. ಬೇಹುಗಾರಿಕೆ ‌ಇದ್ದರೂ ಕೇಂದ್ರ ಪತ್ತೆ ಮಾಡುವಲ್ಲಿ ವಿಫಲವಾಗಿದೆ. ಯಾರು‌ ಕರೆ ಮಾಡಿದ್ದಾರೆ ಅವರನ್ನ ಬಂಧಿಸಬೇಕು. ಆ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಖರ್ಗೆ ರಾಷ್ಟ್ರೀಯ ನಾಯಕರಾಗಿ ಕೆಲಸ ಮಾಡಿದವರು. ಜ್ವಲಂತ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದರು. ಅವರಿಗೆ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ನಾಮಪತ್ರ ಪರಿಶೀಲನೆ ವಾಡಿಕೆಯಂತೆ ನಡೆಯುತ್ತೆ.

ಡಿಕೆಶಿ ಪದಗ್ರಹಣಕ್ಕೆ ಸರ್ಕಾರದಿಂದ ಅವಕಾಶ ನಿರಾಕರಣೆ ವಿಚಾರವಾಗಿ ಮಾತನಾಡಿದ ಅವರು, ಎರಡು ಬಾರಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿಲ್ಲ. ಈಗಲೂ ಅವಕಾಶ ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಮಾವೇಶಕ್ಕೆ ಅವಕಾಶ ಕೊಡ್ತಾರೆ. ಇಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ಕೊಡಲ್ಲ. ಇದು ರಾಜಕೀಯ ದುರುದ್ದೇಶವಾಗುತ್ತದೆ. ಕೂಡಲೇ ಸರ್ಕಾರ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ಮಾತನಾಡಿ, ಸರ್ಕಾರ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಿದೆ. ಡಿ.ಕೆ.ಶಿವಕುಮಾರ್ ಮಾಡುತ್ತಿರುವ ಕೆಲಸ ಅವರಿಗೆ ಸಹಿಸಲು ಆಗುತ್ತಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಪತ್ರ ಕೊಡಿಸಿ ಕಾರ್ಯಕ್ರಮ ಮಾಡಬಾರದು ಎಂದಿದ್ದಾರೆ. ಇರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಅಪರಿಚಿತರಿಂದ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪ್ರಿಯಾಂಕ್​ ಖರ್ಗೆ ಅಂದೇ ನನ್ನ ಜೊತೆ ಚರ್ಚಿಸಿದ್ರು. ಖರ್ಗೆಯವರು ಪಕ್ಷದಲ್ಲಿ ಹಿರಿಯ ನಾಯಕರು. ಅಂತವರಿಗೆ ಜೀವ ಬೆದರಿಕೆ ಕರೆ ಬಂದರೆ ಹೇಗೆ? ಕೂಡಲೇ ಪೊಲೀಸ್ ಇಲಾಖೆ ಇದರ ಬಗ್ಗೆ ತನಿಖೆ ನಡೆಸಬೇಕು. ಈ‌ ವಿಚಾರ ಸಣ್ಣ ಮಟ್ಟದಲ್ಲ. ಸಿಒಡಿ ತನಿಖೆಗೆ ಇದನ್ನ ವಹಿಸಬೇಕು. ಯಾರು ಮಾಡಿದ್ದಾರೆ ಅನ್ನೋದನ್ನ‌ ಪತ್ತೆ ಹಚ್ಚಬೇಕು. ಈಗ ಎಲ್ಲಾ ಮಾಹಿತಿ ಕೂಡ ಸಿಗಲಿದೆ. ತನಿಖೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ABOUT THE AUTHOR

...view details