ಕರ್ನಾಟಕ

karnataka

By

Published : Aug 23, 2021, 8:44 PM IST

ETV Bharat / state

ಅರಣ್ಯ ಇಲಾಖೆ ಹುದ್ದೆಗಳ ನೇಮಕದಲ್ಲಿ ಗೋಲ್​ಮಾಲ್: ಎಸಿಬಿಗೆ ದೂರು

ದಿನಾಂಕ ಏಪ್ರಿಲ್ 10 2017 ರಂದು ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರು. ಆದರೆ, ಕೆಲವು ಅಧಿಕಾರಿಗಳು ಹಣ ಪಡೆದು ಒಳಗೊಳಗೆ ಅಭ್ಯರ್ಥಿ ಆಯ್ಕೆಯನ್ನು ಮಾಡಿದ್ದಾರೆ. ಸದ್ಯ, ಈ ಪ್ರಕರಣದಲ್ಲಿ ಯಾರು ಶಾಮೀಲಾಗಿದ್ದಾರೆ ಎಂದು ಅಧಿಕಾರಿಗಳ ಸಮೇತ ತನಿಖೆ ನಡೆಯಬೇಕು. ದುಡ್ಡಿನ ಮೂಲವನ್ನು ತನಿಖೆ ಮಾಡಬೇಕು ಎಂದು ಖ್ಯಾತ ವಕೀಲ ಸುರೇಂದ್ರ ಅವರು ಒತ್ತಾಯಿಸಿದರು.

irregularities-in-appointment-of-forest-department-posts
ಖ್ಯಾತ ವಕೀಲ ಸುರೇಂದ್ರ

ಬೆಂಗಳೂರು:ಅರಣ್ಯ ಇಲಾಖೆ ಹುದ್ದೆಗಳ ನೇಮಕಾತಿಯಲ್ಲಿ ಗೋಲ್​​ಮಾಲ್ ನಡೆದಿದೆ. ಹಣ ಪಡೆದು ಬೇಕಾ ಬಿಟ್ಟಿ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ವಕೀಲ ಸುರೇಂದ್ರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರ ನೀಡಿದ್ದಾರೆ.

ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಖ್ಯಾತ ವಕೀಲ ಸುರೇಂದ್ರ ಅವರು, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಎಫ್​ಡಿಎ ಪ್ರಕಾಶ್, ವ್ಯವಸ್ಥಾಪಕ ಉಮಾಶಂಕರ್, ಆಡಳಿತಾಧಿಕಾರಿ ಕೃಪಾನಿಧಿ ಸೇರಿದಂತೆ ಸಿಬ್ಬಂದಿ, ಕೆಲವು ಅಭ್ಯರ್ಥಿಗಳಿಂದ ಹಣ ಪಡೆದ ಮಾಹಿತಿ ಇದೆ. ಪ್ರಕಾಶ್ ಎನ್ನುವವರ ಪತ್ನಿ ಸಿ. ವೀಣಾ ಖಾತೆಗೆ ಹೆಚ್ಚಿನ ಹಣ ಜಮಾವಣೆಯಾಗಿರುವ ದಾಖಲೆ ಇದೆ. ಒಬ್ಬ ಕ್ಲರ್ಕ್​ಗೆ ಆಯ್ಕೆಯಾಗುವ ಅಭ್ಯರ್ಥಿಗಳು ಹಣ ವರ್ಗಾವಣೆ ಮಾಡುತ್ತಾರೆ ಎಂದರೆ ಇದು ಭ್ರಷ್ಟಾಚಾರ ಅಲ್ಲದೇ ಇನ್ನೇನಾಗಿರುತ್ತದೆ ಎಂದು ಕಿಡಿಕಾರಿದರು.

ಅರಣ್ಯ ಇಲಾಖೆ ಹುದ್ದೆಗಳ ನೇಮಕಾತಿಯಲ್ಲಿ ಗೋಲ್ ಮಾಲ್ ಆರೋಪ

ದಿನಾಂಕ ಏಪ್ರಿಲ್ 10 2017 ರಂದು ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರು. 240 ಅರಣ್ಯ ರಕ್ಷಕ ಹುದ್ದೆಗಳಿಗೆ, 239 ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆಗೆ ಅಧಿಸೂಚನೆ ಹೊರಡಿಸಿರುತ್ತಾರೆ. ಪರೀಕ್ಷೆಯನ್ನು ನಡೆಸಿ ಜನವರಿ 2019 ರಲ್ಲಿ ಫಲಿತಾಂಶ ಪ್ರಕಟಿಸುತ್ತಾರೆ. 187 ಅರಣ್ಯ ರಕ್ಷಕ ಹುದ್ದೆಗೆ, 250 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿರುತ್ತದೆ.

ನೇಮಕಾತಿ ನಿಯಮಗಳ ಅನುಸಾರ, ಫಲಿತಾಂಶ ಪ್ರಕಟಿಸಬೇಕೆಂದು ಸರ್ಕಾರದಿಂದ ಸ್ಪಷ್ಟ ಸೂಚನೆ ಇದೆ. ಕೊನೆಯದಾಗಿ ಕಾಯುವಿಕೆ ಲಿಸ್ಟ್ ಸಹ ಮುಖ್ಯ ಪಟ್ಟಿಯ ಅವಧಿಯಲ್ಲಿಯೇ ಹೊರಡಿಸಬೇಕು. ಆದರೆ, ಅದನ್ನು ಒಂದು ವರ್ಷದ ನಂತರ ಪ್ರಕಟಿಸಲಾಗುತ್ತದೆ. ಮಾರ್ಕ್ಸ್ ಸಂಬಂಧಪಟ್ಟ ಹಾಗೆ ಮನನೊಂದಂತಹ ಅಭ್ಯರ್ಥಿಗಳು, ಅಂಕದ ಸಂಬಂಧ ನ್ಯಾಯಾಲಯದ ಮೊರೆ ಹೋಗುತ್ತಾರೆ.

ಪಟ್ಟಿಯಲ್ಲಿಲ್ಲ ಯಾವುದೇ ಅಂಕ

ಇನ್ನುಳಿದಂತಹ ಅಭ್ಯರ್ಥಿಗಳ ಹತ್ತಿರ ಅರಣ್ಯ ಭವನದಲ್ಲಿ ಇರುವಂತಹ ಕೆಲ ಅಧಿಕಾರಿಗಳು, ಹಣವನ್ನು ತೆಗೆದುಕೊಂಡು ಪಟ್ಟಿ ಪ್ರಕಟಿಸುತ್ತಾರೆ. ಅರಣ್ಯ ಇಲಾಖೆಯಿಂದ ಪಟ್ಟಿ ಬಿಡುಗಡೆ ಮಾಡಬೇಕಾದರೆ, ತೆಗೆದುಕೊಂಡ ಅಂಕಗಳ ಆಧಾರದಲ್ಲಿ, ಯಾವ ಪ್ರವರ್ಗ, ಯಾವ ಹುದ್ದೆಗೆ ಅರ್ಜಿ ಹಾಕಲಾಗುತ್ತೆ ಎಂಬವುದನ್ನು ಪ್ರಕಟಿಸಬೇಕು. ಆದರೆ, 2ನೇ ಪಟ್ಟಿಯಲ್ಲಿ ಯಾವುದೇ ಅಂಕ ಪ್ರಕಟಿಸಿಲ್ಲ. ಒಂದು ವರ್ಷದ ನಂತರ ಬಿಟ್ಟಂತಹ ಪಟ್ಟಿಯಲ್ಲಿ, ಇದ್ಯಾವುದು ಇರಲಿಲ್ಲ. ಯಾರು ಎಷ್ಟು ಅಂಕ ಪಡೆದರು, ಯಾವ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಯಾವುದೇ ವಿಸ್ತೃತ ಮಾಹಿತಿ ಇರುವುದಿಲ್ಲ. ಇದರಿಂದ ನೊಂದ 23 ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡುತ್ತಾರೆ ಎಂದು ವಕೀಲ ಸುರೇಂದ್ರ ಆರೋಪಿಸಿದರು.

ಭ್ರಷ್ಟಾಚಾರ ಆರೋಪ

ಅರಣ್ಯ ಇಲಾಖೆಯಲ್ಲಿ ಯಾರೇ ಪರೀಕ್ಷೆ ಬರೆದರೂ, ಪ್ರವರ್ಗದ, ಅಂಕಗಳ ವಿಚಾರದಲ್ಲಿ ಮೋಸ ಆಗುತ್ತಿದೆ. ಆಯ್ಕೆ ಪ್ರಕ್ರಿಯೆ ಬಗ್ಗೆ ನನಗಿರುವ ಹಿತಾಸಕ್ತಿ ಒಂದೇ, ನೊಂದಿರುವ ಅಭ್ಯರ್ಥಿಗಳು ನನ್ನನ್ನು ಸಂಪರ್ಕಿಸಿದ್ದಾರೆ. ಒಳ್ಳೆಯವರು, ಪರೀಕ್ಷೆ ಬರೆದವರಿಗೆ ಎಲ್ಲ ತರಹದ ಅರ್ಹತೆ ಇರುತ್ತದೆ. ಈ ತರಹ ಭ್ರಷ್ಟಾಚಾರ ನಡೆದಾಗ ಬೇರೆ ಯಾರೋ ಈ ಹುದ್ದೆಗೆ ಬಂದು ಕೂರುತ್ತಾರೆ. ಈ ತರಹ ಭ್ರಷ್ಟಾಚಾರ ಮಾಡುವುದಿದ್ದರೆ, ಪರೀಕ್ಷೆಯೇ ಬೇಡ ಎಂದು ಅಸಮಾಧಾನ ಹೊರಹಾಕಿದರು.

ಅಪರಾಧ ಪತ್ತೆ ದಳಕ್ಕೆ ದೂರು

ಅಪರಾಧ ಪತ್ತೆ ದಳಕ್ಕೆ ಇದೆ ಏಪ್ರಿಲ್ 27 ರಂದು ದೂರು ನೀಡಿದ್ದೇನೆ. ಎಸಿಬಿ ಈ ದೂರಿಗೆ ಸಂಬಂಧಿಸದಂತೆ ಸರ್ಕಾರಕ್ಕೆ ತನಿಖೆ ನೆಡೆಸಲು ಅವಕಾಶ ಕೋರಿ ಪತ್ರ ಬರೆದಿದ್ದಾರೆ. ಅರಣ್ಯ ಇಲಾಖೆಯ ಕಾರ್ಯದರ್ಶಿಗೆ ಕೂಡ ಪತ್ರ ಬರೆಯಲಾಗಿದೆ. ಸರ್ಕಾರದ ಮಟ್ಟದಲ್ಲಿ ಏನು ಆಗುತ್ತದೆ ಕಾದು ನೋಡಬೇಕಿದೆ. ತನಿಖೆ ಹಂತದಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿಯನ್ನು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.

ಅರಣ್ಯ ಇಲಾಖೆ ಮುಖ್ಯಸ್ಥರು ಗೌಪ್ಯತೆ ಕಾಪಾಡದೇ ಇರುವುದು ಗಂಭೀರ ಲೋಪವಾಗಿದೆ. ಯಾರು ಶಾಮೀಲಾಗಿದ್ದಾರೆ ಎಂದು ಅಧಿಕಾರಿಗಳ ಸಮೇತ ತನಿಖೆ ನೆಡೆಯಬೇಕು. ಎಸಿಬಿ ಬಗ್ಗೆ ಈ ಹಂತದಲ್ಲಿ ಯಾವುದೇ ಆರೋಪ ಮಾಡುವುದಿಲ್ಲ. ದುಡ್ಡಿನ ಮೂಲವನ್ನು ತನಿಖೆ ಮಾಡಬೇಕು ಎಂದು ವಿನಂತಿಸಿದರು.

ABOUT THE AUTHOR

...view details