ಕರ್ನಾಟಕ

karnataka

ಚರಂಡಿಗಳ ಚಂಬರ್‌ಗೆ ಅಳವಡಿಸಿದ್ದ ಕಬ್ಬಿಣದ ಗ್ರೇಟಿಂಗ್ ಕಳ್ಳತನ: 6 ಮಂದಿ ಬಂಧನ

By

Published : Aug 8, 2021, 10:25 AM IST

ಚರಂಡಿಗಳ ಚಂಬರ್‌ಗೆ ಅಳವಡಿಸಿದ್ದ ಕಬ್ಬಿಣದ ಗ್ರೇಟಿಂಗ್​ಗಳನ್ನು ಕಳವು ಮಾಡುತ್ತಿದ್ದ 6 ಮಂದಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

iron-chamber
ಚರಂಡಿಗಳ ಚಂಬರ್‌

ಬೆಂಗಳೂರು: ಟೆಂಡರ್ ಶ್ಯೂರ್ ಯೋಜನೆಯಡಿಯಲ್ಲಿ ಚರಂಡಿಗಳ ಚಂಬರ್‌ಗೆ ಅಳವಡಿಸಿದ್ದ ಕಬ್ಬಿಣದ ಗ್ರೇಟಿಂಗ್​ಗಳನ್ನು ಕಳವು ಮಾಡುತ್ತಿದ್ದ ಖದೀಮರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಂಜುನಾಥ್, ಲಿಂಗರಾಜು, ಹರಕತ್ ಠಾಕೂರ್, ವಿನೋದ್, ಉದಯ್, ನರಸಿಂಹ ಬಂಧಿತರು.

ಬಂಧಿತ ಆರೋಪಿಗಳು

ಆರೋಪಿಗಳಿಂದ 2.40 ಲಕ್ಷ ರೂ. ಮೌಲ್ಯದ 7 ಕಬ್ಬಿಣದ ಗ್ರೇಟಿಂಗ್ ಕವರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ರಾತ್ರಿ ವೇಳೆ ಕಾಮಗಾರಿ ಸ್ಥಳಕ್ಕೆ ಹೋಗಿ ಗ್ರೇಟಿಂಗ್ ಕವರ್‌ಗಳನ್ನು ಕಳವು ಮಾಡಿ ಆಟೋದಲ್ಲಿ ಕೊಂಡೊಯ್ಯುತ್ತಿದ್ದರು ಎನ್ನಲಾಗ್ತಿದೆ. ಬಳಿಕ ಅವುಗಳನ್ನು ಮಾಗಡಿ ಬಳಿ ಮಾರಾಟ ಮಾಡಿದ್ದರಂತೆ. ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಉಪ್ಪಾರಪೇಟೆ ಠಾಣೆ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ABOUT THE AUTHOR

...view details