ಕರ್ನಾಟಕ

karnataka

ETV Bharat / state

27 ಪ್ರಕರಣಗಳಲ್ಲಿ ಬೇಕಾಗಿದ್ದ ಇರಾನಿ ಗ್ಯಾಂಗ್ ಖದೀಮರ ಬಂಧನ - ಧಾರವಾಡದಲ್ಲಿ ಇರಾನಿ ಗ್ಯಾಂಗ್ ಸರಗಳ್ಳರ ಬಂಧನ

18 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 27 ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇರಾನಿ ಗ್ಯಾಂಗ್ ಸರಗಳ್ಳರನ್ನು ರಾಜಧಾನಿ ಪೊಲೀಸರು ಬಂಧಿಸಿದ್ದಾರೆ.

Irani Gang robbers arrested by Bengaluru Police
ಬಂಧಿಸುವ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಖದೀಮರು

By

Published : Dec 29, 2020, 4:23 PM IST

ಬೆಂಗಳೂರು:ಹಲವು ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇರಾನಿ ಗ್ಯಾಂಗ್​ನ ಖದೀಮರನ್ನು ಪತ್ತೆ ಹಚ್ಚುವಲ್ಲಿಕಾಮಾಕ್ಷಿಪಾಳ್ಯ ಮತ್ತು ಮಾಗಡಿ ರೋಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಲೀಂ ಇರಾನಿ, ಅಜಾದ್ ಇರಾನಿ, ಅವ್ನೂ ಇರಾನಿ ಬಂಧಿತರು. ಇವರು, ಬೆಂಗಳೂರು ಮತ್ತು ಧಾರವಾಡ ನಗರಗಳಲ್ಲಿ ಒಂಟಿ ಮಹಿಳೆಯರನ್ನು ಗುರುತಿಸಿಕೊಂಡು. ಗಮನ ಬೇರೆಡೆಗೆ ಸೆಳೆದು ಸರಗಳ್ಳತನ ಮಾಡುತ್ತಿದ್ದರು. ಕೆಲ ಒಂದೆಡೆ ಸರಗ ಎಗರಿಸಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾದ ಕಾರಣ ಆರೋಪಿಗಳ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸರು, ಧಾರವಾಡದ ಬಳಿ ಇರುವ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಆದರೂ ಬಿಡದ ಪೊಲೀಸರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿಸುವ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಖದೀಮರು

18 ಪೊಲೀಸ್​ ಠಾಣೆಗಳಲ್ಲಿ 27 ಪ್ರಕರಣ

ಪೊಲೀಸರು ನೀಡಿರುವ ಮಾಹಿತಿ ಮೇರೆಗೆ, 18 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 27 ಕಳ್ಳತನ ಕೃತ್ಯಗಳಲ್ಲಿ ಇವರು ಭಾಗಿಯಾಗಿದ್ದಾರೆ. ಬಂಧಿತರಿಂದ 50 ಲಕ್ಷ ರೂ. ಬೆಲೆ ಬಾಳುವ 1 ಕೆ.ಜಿ 20 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಓದಿ: ಮೈಸೂರು: ಅಂತರ್‌ರಾಜ್ಯ ಮನೆ ಕಳ್ಳನ ಬಂಧನ

ಆರೋಪಿಗಳು ಮಾಗಡಿ ರಸ್ತೆಯಲ್ಲಿ- 2, ಬ್ಯಾಡರಹಳ್ಳಿಯಲ್ಲಿ-3, ಚಂದ್ರಾಲೇಔಟ್​ನಲ್ಲಿ-2, ವಿಜಯನಗರದಲ್ಲಿ-3, ಜ್ಞಾನಭಾರತಿಯಲ್ಲಿ -1, ಕಾಟನ್ ಪೇಟೆಯಲ್ಲಿ-1, ರಾಮಮೂರ್ತಿ ನಗರದಲ್ಲಿ-3, ಯಲಹಂಕದಲ್ಲಿ-1, ಹೆಣ್ಣೂರಿನಲ್ಲಿ-1, ಸುಬ್ರಮಣ್ಯನಗರದಲ್ಲಿ-1, ಬಾಣಸವಾಡಿಯಲ್ಲಿ -1, ಕೋಡಿಗೆಹಳ್ಳಿಯಲ್ಲಿ-1, ಬೆಳ್ಳಂದೂರಿನಲ್ಲಿ -1, ಬಾಗಲೂರಿನಲ್ಲಿ -1, ಬನಶಂಕರಿಯಲ್ಲಿ -1 , ವಿದ್ಯಾರಣ್ಯಪುರದಲ್ಲಿ -1, ಜೀವನ ಭೀಮಾ ನಗರದಲ್ಲಿ -1, ವಿದ್ಯಾಗಿರಿಯಲ್ಲಿ (ಧಾರವಾಡ) -2 ಸೇರಿ ಒಟ್ಟು 27 ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಹಿಳೆಯರ ಮೂಲಕ ಕದ್ದ ವಸ್ತುಗಳ ವಿಲೇವಾರಿ

ಆರೋಪಿಗಳು ಬೆಂಗಳೂರು ನಗರಕ್ಕೆ ಬಂದು ಸರ ಕಳ್ಳತನ ಮಾಡಿಕೊಂಡು ಧಾರವಾಡಕ್ಕೆ ಹೋಗುತ್ತಿದ್ದರು. ಬಳಿಕ‌ ಆರೋಪಿ ಅವ್ನೂ ಇರಾನಿ, ತನ್ನ ತಾಯಿ ಭಾನು ಇರಾನಿ ಹಾಗೂ ಆತನ ಏರಿಯಾ ನಿವಾಸಿಗಳಾದ ಫಾತಿಮಾ ಅತ್ತರ್ ಮತ್ತು ಗುಲ್ಜಾರ್ ಬೇಗಂ ಮೂಲಕ ಸರದ ವಿಲೇವಾರಿ ಮಾಡಿಸುತ್ತಿದ್ದರು.

ಪೊಲೀಸರಿಗೆ 50 ಸಾವಿರ ಬಹುಮಾನ

ಬಂಧಿತರ ಪೈಕಿ ಎ-1 ಆರೋಪಿ ಸಲೀಂ ಇರಾನಿ ಮೇಲೆ ಆಂಧ್ರ ಪ್ರದೇಶದ ಗುಂಟೂರು ಮತ್ತು ಧಾರವಾಡ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಗಳನ್ನು ಹೆಚ್ವಿನ ವಿಚಾರಣೆಗೆ ಒಳಪಡಿಸಿಲಾಗಿದೆ. ಕಾರ್ಯಾಚರಣೆ ನಡೆಸಿ ಖದೀಮರ ಕೈಗೆ ಕೋಳ ತೊಡಿಸಿದ ಪೊಲೀಸರಿಗೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ 50 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ.

ABOUT THE AUTHOR

...view details