ಕರ್ನಾಟಕ

karnataka

ಪೊಲೀಸರ ಮೇಲೆ ಇರಾನಿ ಗ್ಯಾಂಗ್ ದಾಳಿ ವಿಚಾರ: ಡಿಸಿಪಿ ಬಸರಗಿ ಪ್ರತಿಕ್ರಿಯೆ

By

Published : Nov 28, 2020, 7:28 PM IST

ಬೆಂಗಳೂರು ಪೊಲೀಸರ ಮೇಲೆ ಇರಾನಿ ಗ್ಯಾಂಗ್ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ‌ಹು-ಧಾ ಕಮಿಷನರೇಟ್​​ ಡಿಸಿಪಿ ಆರ್.ಬಿ.ಬಸರಗಿ ಪ್ರತಿಕ್ರಿಯಿಸಿ, ಬೆಂಗಳೂರು ಪೊಲೀಸರು ನಮ್ಮ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಅವರೂ ಸಹ ಮಫ್ತಿಯಲ್ಲಿದ್ದರು. ಬೇರೆ ಯಾರೋ ಅಂತ ತಿಳಿದು ದಾಳಿ ಮಾಡಿರಬಹುದು ಎಂದು ಹೇಳಿದ್ದಾರೆ.

DCP R.B. Basaragi
ಡಿಸಿಪಿ ಆರ್.ಬಿ. ಬಸರಗಿ

ಧಾರವಾಡ:ಬೆಂಗಳೂರು ಪೊಲೀಸರ ಮೇಲೆ ಇರಾನಿ ಗ್ಯಾಂಗ್ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ‌ಹು-ಧಾ ಕಮಿಷನರೇಟ್​​ ಡಿಸಿಪಿ ಆರ್.ಬಿ.ಬಸರಗಿ ಪ್ರತಿಕ್ರಿಯಿಸಿದ್ದಾರೆ.

ಧಾರವಾಡದ ಇರಾನಿ ಗ್ಯಾಂಗ್​ನವರು ಬೇರೆ ಕಡೆ ಹೋಗಿ ಕಳ್ಳತನ ಮಾಡಿ ಬರುತ್ತಾರೆ. ಬೆಂಗಳೂರು ಪೊಲೀಸರು ನಮ್ಮ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಅವರೂ ಸಹ ಮಫ್ತಿಯಲ್ಲಿದ್ದರು. ಬೇರೆ ಯಾರೋ ಅಂತ ತಿಳಿದು ದಾಳಿ ಮಾಡಿರಬಹುದು ಎಂದು ಹೇಳಿದರು.

‌ಹು-ಧಾ ಕಮಿಷನರೇಟ್​​ ಡಿಸಿಪಿ ಆರ್.ಬಿ.ಬಸರಗಿ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಭಾಗಿಯಾದವರು ಪರಾರಿಯಾಗಿದ್ದಾರೆ. ಪರಾರಿಯಾದವರ ಪತ್ತೆ ಕಾರ್ಯ ನಡೆದಿದೆ. ಬೇರೆ ಪೊಲೀಸರು ನಮಗೆ ಮಾಹಿತಿ ನೀಡಬೇಕಿತ್ತು. ನಮ್ಮ ಸಹಕಾರ ಪಡೆದಿದ್ದರೆ ಅವರನ್ನು ಮಟ್ಟ ಹಾಕಬಹುದಿತ್ತು. ಪರಾರಿಯಾದವರ ಪತ್ತೆಗೆ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯೋನ್ಮುಖವಾಗಿದ್ದಾರೆ ಎಂದರು.

ABOUT THE AUTHOR

...view details