ಕರ್ನಾಟಕ

karnataka

ETV Bharat / state

11 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ: ಬೆಂಗಳೂರು ಸಿಟಿಗೆ ಮೊದಲ ಬಾರಿಗೆ ಸ್ಪೆಷಲ್‌ ಕಮಿಷನರ್ ಹುದ್ದೆ ಸೃಷ್ಟಿ - ಬೆಂಗಳೂರು ನಗರಕ್ಕೆ ವಿಶೇಷ ಪೊಲೀಸ್ ಆಯುಕ್ತ ಹುದ್ದೆ

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಿದ್ದು, 7 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ, 4 ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಐಪಿಎಸ್ ಅಧಿಕಾರಿಗಳ ವರ್ಗಾವಣೆ

By

Published : Nov 14, 2022, 6:47 PM IST

Updated : Nov 14, 2022, 8:23 PM IST

ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ 11 ಮಂದಿ ಐಪಿಎಸ್ ಅಧಿಕಾರಿಗಳು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌. ಈ ಪೈಕಿ ಏಳು ಅಧಿಕಾರಿಗಳು ವರ್ಗಾವಣೆಯಾದರೆ, ನಾಲ್ಕು ಅಧಿಕಾರಿಗಳು ಮುಂಬಡ್ತಿ ಪಡೆದಿದ್ದಾರೆ.

ಇನ್ನು ವಿಶೇಷವೆಂದ್ರೆ ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ವಿಶೇಷ ಆಯುಕ್ತ ಹುದ್ದೆ ಸೃಷ್ಟಿಸಿ, ಅಬ್ದುಲ್ ಸಲೀಂ ಅವರನ್ನು ಆ ಹುದ್ದೆಗೆ ನೇಮಿಸಲಾಗಿದೆ.

ವರ್ಗಾವಣೆ ಮತ್ತು ಬಡ್ತಿ ಪಡೆದ ಅಧಿಕಾರಿಗಳು:

ಅಬ್ದುಲ್ ಸಲೀಂ - ಎಡಿಜಿಪಿ, ವಿಶೇಷ ಆಯುಕ್ತ, ಬೆಂಗಳೂರು ನಗರ‌ ಟ್ರಾಫಿಕ್

ಉಮೇಶ್ ಕುಮಾರ್ - ಆಡಳಿತ ವಿಭಾಗ, ಎಡಿಜಿಪಿ, ಬೆಂಗಳೂರು ಕೇಂದ್ರ ಕಚೇರಿ

ದೇವಜ್ಯೋತಿ ರೈ - ಐಜಿಪಿ, ಮಾನವ ಹಕ್ಕು ಆಯೋಗ

ರಮಣ ಗುಪ್ತಾ - ಐಜಿಪಿ, ಗುಪ್ತಚರ, ಬೆಂಗಳೂರು ನಗರ

ಡಾ.ಬಿ.ಆರ್.ರವಿಕಾಂತೇಗೌಡ - ಡಿಐಜಿ, ಸಿಐಡಿ

ಬಿ.ಎಸ್.ಲೋಕೇಶ್ ಕುಮಾರ್ - ಡಿಐಜಿ, ಬಳ್ಳಾರಿ ವಲಯ

ಚಂದ್ರಗುಪ್ತ - ಡಿಐಜಿ, ಮಂಗಳೂರು ಪಶ್ಚಿಮ ವಲಯ

ಬಡ್ತಿ‌‌ ಪಡೆದ ಅಧಿಕಾರಿಗಳು:

ಡಾ.ಶರಣಪ್ಪ - ಡಿಐಜಿ, ಸಿಸಿಬಿ ಬೆಂಗಳೂರು

ಡಾ.ಎಂ.ಎನ್.ಅನುಚೇತ್ - ಡಿಐಜಿ, ಬೆಂಗಳೂರು ಟ್ರಾಫಿಕ್ ಕಮಿಷನರ್

ರವಿ ಡಿ ಚೆನ್ನಣ್ಣನವರ್ - ವ್ಯವಸ್ಥಾಪಕ ನಿರ್ದೇಶಕ, ಕಿಯೋನಿಕ್ಸ್

ಬಿ.ರಮೇಶ್ - ಮೈಸೂರು ಕಮಿಷನರ್ ಆಗಿ ಮುಂಬಡ್ತಿ ಪಡೆದಿದ್ದಾರೆ.

(ಓದಿ: ಎಸಿಬಿಯಿಂದ ಲೋಕಾಯುಕ್ತಕ್ಕೆ 352 ಪ್ರಕರಣ ಹಸ್ತಾಂತ)

Last Updated : Nov 14, 2022, 8:23 PM IST

ABOUT THE AUTHOR

...view details