ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶಾಸಕ ಸಾ ರಾ ಮಹೇಶ್ ಜೊತೆ ಸಂಧಾನಕ್ಕೆ ಹೋಗಿರುವುದು ಏತಕ್ಕಾಗಿ? ಹಾಗಾದರೆ ಏನಾದರೂ ಮುಚ್ಚಿಡುವ ಪ್ರಯತ್ನ ಮಾಡಿದ್ದಾರಾ? ಎಂದು ಐಪಿಎಸ್ ಅಧಿಕಾರಿ ರೂಪಾ ಪ್ರಶ್ನಿಸಿದ್ದಾರೆ.
ಯಾಕೆ ಸಂಧಾನಕ್ಕೆ ಹೋದರು? ಯಾಕೆ ಹೋಗಬೇಕಿತ್ತು?.. ರೋಹಿಣಿ ಸಿಂಧೂರಿಗೆ ಪ್ರಶ್ನೆಗಳನ್ನ ಹಾಕಿರುವ ಡಿ ರೂಪಾ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ 'ನೀವು ಏನು ಕೇಳಬೇಡಿ (ಮಾಧ್ಯಮಗಳಿಗೆ) ನಾನೇ ಎಲ್ಲಾ ಹೇಳುತ್ತೇನೆ. ನಾನು ಹೇಳಿದ್ದು ಪೂರ್ತಿ ತೋರಿಸಿ. ನಾನು ಹೇಳುವುದಕ್ಕೆ ನಾಚಿಕೆ ಮಾಡಿಕೊಳ್ಳುವುದಿಲ್ಲ. ಸಿಂಧೂರಿ ಅವರು ಶಾಸಕ ಸಾ ರಾ ಮಹೇಶ್ ಅವರೊಂದಿಗೆ ರಾಜಿ ಸಂಧಾನ ಮಾಡಿಕೊಂಡಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಇವರು ಯಾಕೆ ಸಂಧಾನಕ್ಕೆ ಹೋದರು? ಯಾಕೆ ಹೋಗಬೇಕಿತ್ತು. ನಾನು ಯಾರ ಜೊತೆಗೂ ಸಂಧಾನಕ್ಕೆ ಹೋಗಿಲ್ಲ. ಇದೇ ಮೊದಲು ಐಎಎಸ್ ಅಧಿಕಾರಿ ಈ ರೀತಿ ಮಾಡಿರೋದು ಎಂದರು.
ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಬ್ಬ ಐಎಎಸ್ ಅಧಿಕಾರಿ ತಾನು ಮಾಡಿರುವ ಕೆಲಸಕ್ಕೆ ಎಂಎಲ್ಎ ಹತ್ತಿರ ಸಂದಾನಕ್ಕೆ ಹೋಗಿರುವುದನ್ನು ನಾನು ಕೇಳುತ್ತಿದ್ದೇನೆ. ಈ ವಿಷಯ ಕೇಳಿ ನನಗೆ ತುಂಬಾ ನೋವಾಯಿತು. ಈ ಮಟ್ಟಿಗೆ ಒಬ್ಬ ಐಎಎಸ್ ಅಧಿಕಾರಿ ಇಳಿದಿದ್ದಾರಾ? ಅಂತ. ಸರ್ಕಾರದ ನಿಯಮದಲ್ಲೇ ಇಲ್ಲ ಇದು. ಹಾಗಾಗಿ ಆ ನಿಟ್ಟಿನಲ್ಲಿ ನಾನು ಕೆಲವೊಂದು ಪಾಯಿಂಟ್ಸ್ಗಳನ್ನು ಬರೆದೆ. ಕೇವಲ ಅಷ್ಟೇ ಬರೆದರೆ ಸರಿಯಾಗಲ್ಲ. ಆ ನಿಟ್ಟಿನಲ್ಲಿ ಇವರ ನಡವಳಿಕೆ ಪ್ರಾರಂಭದಿಂದ ಹೇಗಿತ್ತು? ಎಂಬುದನ್ನು ಬರೆದಿದ್ದೇನೆ. ಕೆಲವರು ಅದನ್ನೂ ಕೇಳಿದ್ದೀರಿ. ಹಿಂದಿನದೆಲ್ಲ ಯಾಕೆ ಸೇರಿಸಿ ಬರೆದಿದ್ದೀರಿ ಅಂತ. ಎಷ್ಟೋ ಹಿಂದಿನ ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಒಬ್ಬ ವ್ಯಕ್ತಿ ಬೆಳೆಯುತ್ತ ಬೆಳೆಯುತ್ತಾ ಗೊತ್ತಾಗುತ್ತದೆ. ನಮ್ಮ ಮನೆಯವರು ಹಾಗೂ ನಾನು ಇವರಿಗೆ ಅನೇಕ ವಿಷಯಗಳಲ್ಲಿ ಡ್ರಾಫ್ಟ್ ಮಾಡಿಕೊಟ್ಟಿದ್ದೇವೆ. ಸಿಂಧೂರಿ ಹಾಸನದಲ್ಲಿದ್ದಾಗ ಸರ್ಕಾರದ ವಿರುದ್ಧ ಸಿಎಟಿಗೆ ಹೋದಾಗ ಅವರಿಗೆ ಡ್ರಾಫ್ಟ್ ಮಾಡಿಕೊಟ್ಟವರು ಇವರೇ ಎಂದರು.