ಬೆಂಗಳೂರು: ರಾಜ್ಯ ಸರ್ಕಾರದ ವರ್ಗಾವಣೆ ಕ್ರಮಕ್ಕೆ ನಿರ್ಗಮಿತ ಅಲೋಕ್ ಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ವರ್ಗಾವಣೆ ಕ್ರಮಕ್ಕೆ ನಿರ್ಗಮಿತ ಬೆಂಗಳೂರು ಕಮಿಷನರ್ ಅಲೋಕ್ ಕುಮಾರ್ ಬೇಸರ - ರಾಜ್ಯ ಸರ್ಕಾರದ ವರ್ಗಾವಣೆ
ತಮ್ಮ ಧಿಡೀರ್ ವರ್ಗವಣೆ ಕುರಿತು ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಇಂದು ನಾಳೆ ಕೋರ್ಟ್ ರಜಾ ಹಿನ್ನೆಲೆ ಸೋಮವಾರ ಸಿಎಟಿ ಮೊರೆ ಹೊಗಲಿದ್ದಾರೆ.
ನೂತನ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಅವರನ್ನ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಹೀಗಾಗಿ ಅಲೋಕ್ ಕುಮಾರ್ ತನ್ನ ಆಪ್ತ ವಲಯದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಹೇಳದೆ ಕೇಳದೇ 45 ದಿನಗಳಲ್ಲಿ ಟ್ರಾನ್ಸ್ಫರ್ ಮಾಡಿದ್ದಾರೆ. ತರಾತುರಿಯಲ್ಲಿ ವರ್ಗಾವಣೆ ಮಾಡಿದ್ರೆ ಬೇಜಾರಾಗಲ್ವಾ..!? ಸರ್ಕಾರ ವರ್ಗಾವಣೆ ಮಾಡ್ಲಿ, ಆದ್ರೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವರ್ಗಾವಣೆ ಮಾಡಬಾರದು. ಯಾವುದೇ ವಿಶೇಷ ಕಾರಣಗಳಿಲ್ಲದೇ, ಒಂದು ವರ್ಷದೊಳಗೆ ವರ್ಗಾವಣೆ ಮಾಡಬಾರದು ಎಂಬ ನಿಯಮವನ್ನ ನೆನಪಿಸಿದರು.
ಸುಮ್ ಸುಮ್ನೆ ತರಾತುರಿಯಲ್ಲಿ ನನ್ನನ್ನ ವರ್ಗಾವಣೆ ಮಾಡೋ ಅವಶ್ಯಕತೆ ಏನಿತ್ತು.. ಹೊಸದಾಗಿ ಬರುವವರಿಗೆ ನಾವು ಅಧಿಕಾರವನ್ನ ಖುಷಿಯಾಗಿ ಕೊಡಬೇಕು ಎಂದು ಅಲೋಕ್ ಕುಮಾರ್ ಬೇಸರ ಹೊರಹಾಕಿದ್ದಾರೆ. ಇದೇ ವೇಳೆ ಅವರು ಈ ಸಂಬಂಧ ಸಿಎಟಿ ಮೊರೆ ಹೋಗಲು ನಿರ್ಧರಿಸಿದ್ದಾರೆ.