ಕರ್ನಾಟಕ

karnataka

ETV Bharat / state

ಕ್ರಿಕೆಟ್ ಬೆಟ್ಟಿಂಗ್​​: ಸಿಸಿಬಿಯಿಂದ ಓರ್ವನ ಬಂಧನ - ಸಿಸಿಬಿಯಿಂದ ಓರ್ವನ ಬಂಧನ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್​​​ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿ ಓರ್ವನನ್ನ ಬಂಧಿಸಿದೆ. ಆರೋಪಿಯಿಂದ ನಗದು, ಮೊಬೈಲ್ ವಶಕ್ಕೆ ಪಡೆಯಲಾಗಿದೆ.

accused arrest
ಸಿಸಿಬಿ ದಾಳಿ, ಓರ್ವನ ಬಂಧನ

By

Published : Oct 13, 2020, 2:05 PM IST

ಬೆಂಗಳೂರು:ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿ ಓರ್ವನನ್ನು ಬಂಧಿಸಿದೆ. ಸಂತೋಷ್ ಕುಮಾರ್ ಬಂಧಿತ ಆರೋಪಿ. ಅಕ್ಟೋಬರ್ 11ರಂದು ಮುಂಬೈ ಇಂಡಿಯನ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಫೋನ್ ಮೂಲಕ ಬೆಟ್ಟಿಂಗ್​ ಕಟ್ಟುತ್ತಿದ್ರು ಎನ್ನಲಾಗ್ತಿದೆ.

ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 90 ಸಾವಿರ ರೂಪಾಯಿ ನಗದು, ಮೊಬೈಲ್ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details