ಕರ್ನಾಟಕ

karnataka

ETV Bharat / state

ಐಫೋನ್ 14 ಪ್ರೊ ಮ್ಯಾಕ್ಸ್ ಕಳ್ಳ ಸಾಗಾಣಿಕೆ: ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ - passenger arrested by Bangalore Customs officials

ಐಫೋನ್ 14 ಪ್ರೊ ಮ್ಯಾಕ್ಸ್ ಕಳ್ಳಸಾಗಾಣಿಕೆಗೆ ಯತ್ನಿಸಿದ ಪ್ರಯಾಣಿಕನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

iPhone 14 Pro Max smuggling
ಐಫೋನ್ 14 ಪ್ರೊ ಮ್ಯಾಕ್ಸ್ ಕಳ್ಳಸಾಗಾಣಿಕೆ

By

Published : Oct 1, 2022, 10:01 AM IST

ದೇವನಹಳ್ಳಿ(ಬೆಂಗಳೂರು):ಹೊಚ್ಚ ಹೊಸ ಐಫೋನ್ 14 ಪ್ರೊ ಮ್ಯಾಕ್ಸ್ ಕಳ್ಳಸಾಗಣಿಕೆಗೆ ಯತ್ನಿಸಿದ ಪ್ರಯಾಣಿಕನೋರ್ವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.

ಬಂಧಿತ ಆರೋಪಿಯಿಂದ ವಶಕ್ಕೆ ಪಡೆಯಲಾದ ಐಫೋನ್​ಗಳು

ಸೆ. 29 ರಂದು ಬ್ಯಾಂಕಾಕ್​ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್​​ನ ವಾಯು ಗುಪ್ತಚಾರ ಘಟಕ (AIU) ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಐಪೋನ್​​ ಕಳ್ಳ ಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯಿಂದ ವಶಕ್ಕೆ ಪಡೆಯಲಾದ ಐಫೋನ್​ಗಳು

ಸದ್ಯ ಬಂಧಿತ ಆರೋಪಿಯಿಂದ 16 ಹೊಚ್ಚ ಹೊಸ ಐಫೋನ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ಭಾರತದಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್​ಗೆ 1 ಲಕ್ಷದ 90 ಸಾವಿರ ರೂ. ಬೆಲೆ ಇದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಮಧ್ಯರಾತ್ರಿಯಲ್ಲಿ ಜನರ ಮೇಲೆ ಗುಂಡಿನ ದಾಳಿ.. ಓರ್ವ ಸಾವು, ಮೂವರಿಗೆ ಗಾಯ

ABOUT THE AUTHOR

...view details