ಬೆಂಗಳೂರು: ಅಮೂಲ್ಯ ದೇಶದ್ರೋಹ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಂಜಸ ಉತ್ತರ ನೀಡದ ಕಾರಣ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾಗೆ ಪೊಲೀಸರು ಮತ್ತೆ ಶಾಕ್ ನೀಡಿದ್ದಾರೆ.
ಪಾಕ್ ಪರ ಘೋಷಣೆ: 100ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಪಾಷಾಗೆ ಸೂಚನೆ! - ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ
ಅಮೂಲ್ಯ ದೇಶದ್ರೋಹ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಂಜಸ ಉತ್ತರ ನೀಡದ ಕಾರಣ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾಗೆ ಪೊಲೀಸರು ಮತ್ತೆ ಶಾಕ್ ನೀಡಿದ್ದಾರೆ.
ತನಿಖಾ ತಂಡ 100 ಕ್ಕೂ ಅಧಿಕ ಪ್ರಶ್ನೆಗಳನ್ನು ತಯಾರು ಮಾಡಿ ಕಾಪಿ ಕಳಿಸಿಕೊಟ್ಟಿದೆ. ಮುಂದಿನ ಬಾರಿ ವಿಚಾರಣೆಗೆ ಹಾಜರಾಗುವಾಗ ಪೊಲೀಸರ ಪ್ರಶ್ನೆಗೆ ಉತ್ತರ ತರುವಂತೆ ಸೂಚನೆ ನಿಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಅಮೂಲ್ಯಳನ್ನ ಯಾರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು? ವೇದಿಕೆ ಮೇಲೆ ಏಕೆ ದೇಶ ವಿರೋಧಿ ಘೋಷಣೆ ಕೂಗಿದಳು? ಆಕೆಯ ಹಲವಾರು ಕಾರ್ಯಕ್ರಮದಲ್ಲಿ ನೀವೂ ಸಹ ಭಾಗಿಯಾಗಿದ್ರಿ, ಹಾಗಾಗಿ ಆಕೆಯ ಪರಿಚಯ ನಿಮಗೆ ಎಷ್ಟು ವರ್ಷದಿಂದ ಇದೆ? ಎಂಬಿತ್ಯಾದಿ ಪ್ರಶ್ನಾವಳಿಗಳನ್ನು ರೆಡಿ ಮಾಡಿ ಪಾಷಾಗೆ ಉತ್ತರಿಸಲು ನೀಡಿದ್ದಾರೆ.
ಅಮೂಲ್ಯಳನ್ನು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದು ನಂತರ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾರನ್ನ ವಿಚಾರಣೆ ನಡೆಸಲಿದ್ದಾರೆ.