ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಎ 2 ಮತ್ತು ಎ 14 ಆಗಿರುವ ನಟಿ ಮಣಿಯರಾದ ರಾಗಿಣಿ ಮತ್ತು ಸಂಜನಾ ಸದ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಬೆಳಗ್ಗೆಯೇ ಇಲ್ಲಿಗೆ ಆಗಮಿಸಿದ ಸಿಸಿಬಿ ಮಹಿಳಾ ಅಧಿಕಾರಿ ಅಂಜುಮಾಲಾ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದೆ.
ಪದೇ ಪದೇ ಕಿರಿಕ್ ಮಾಡುತ್ತಿರುವ ನಟಿಯರು, ಪೊಲೀಸರ ಮುಂದೆ ಡ್ರಗ್ಸ್ ಲಿಂಕ್ ಆರೋಪದ ಕುರಿತು ಯಾವುದೇ ಮಾಹಿತಿಯನ್ನು ಬಾಯ್ಬಿಡ್ತಿಲ್ಲ. ತಮಗೂ ಡ್ರಗ್ಸ್ ಜಾಲಕ್ಕೂ ನಂಟೇ ಇಲ್ಲ. ನಾವು ಪಾರ್ಟಿಯಲ್ಲಿ ಅಷ್ಟೇ ಭಾಗಿಯಾಗ್ತಿದ್ವಿ ಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ. ಆರೋಪಿಗಳು ಮಹಿಳೆಯರು ಆಗಿರುವುದರಿಂದ ತೀವ್ರವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎನ್ನಲಾಗ್ತಿದೆ. ಹೀಗಾಗಿ ಸಿಸಿಬಿ ಪೊಲೀಸರು ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಕ್ಕೆ ಸಿಕ್ಕಿದೆ ಮಹತ್ತರ ಸಾಕ್ಷಿ:
ಡ್ರಗ್ಸ್ ಜಾಲದ ವಿಚಾರ ತಿಳಿದು ಸಿಸಿಬಿ ಪೊಲೀಸರು ಒಂದು ತಿಂಗಳ ಹಿಂದೆಯೇ ಈ ಬಗ್ಗೆ ಕಣ್ಣಿಟ್ಟಿದ್ದರು. ಮೊದಲು ಡ್ರಗ್ಸ್ ಪೆಡ್ಲರ್ ರವಿಶಂಕರ್ ಮೇಲೆ ನಿಗಾಇಟ್ಟು ರಾಗಿಣಿ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಮತ್ತೊಂದೆಡೆ ಸಂಜನಾ ಆಪ್ತ ರಾಹುಲ್ ಮೇಲೆ ಕಣ್ಣಿಟ್ಟಿದ್ದರು. ಆರೋಪಿಗಳಿಗೆ ಸಿಸಿಬಿ ಪೊಲೀಸರು ತಮ್ಮ ಮೇಲೆ ನಿಗಾ ಇಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ನೇರವಾಗಿ ಡ್ರಗ್ಸ್ ವಿಚಾರ ಮಾತನಾಡದೆ ಕೋಡ್ ವರ್ಡ್ಗಳ ಮೂಲಕ ಮಾತುಕತೆ ನಡೆಸುತ್ತಿದ್ದರು ಎನ್ನಲಾಗ್ತಿದೆ. ಸಾಕ್ಷ್ಯ ಕಲೆ ಹಾಕಿದಾಗ ಈ ವಿಚಾರದ ಬಗ್ಗೆ ಗೊತ್ತಾಗಿದೆ. ಸದ್ಯ ರಾಗಿಣಿ, ರವಿಶಂಕರ್, ರಾಹುಲ್ನ ಮೊಬೈಲ್ ರಿಟ್ರೀವ್ ಆಗಿದೆ. ಇದರಲ್ಲಿ ಪ್ರತಿಯೊಂದು ಆರೋಪಿಗಳು ನಡೆಸಿರುವ ಮಾತುಕತೆಗಳ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗ್ತಿದೆ. ಸಂಜನಾ ಮೊಬೈಲ್ ಇನ್ನೂ ರಿಟ್ರೀವ್ ಆಗಿಲ್ಲ. ಹೀಗಾಗಿ, ರಾಹುಲ್ ಹಾಗೂ ಇತರೆ ಆರೋಪಿಗಳ ಬಳಿ ಸಿಕ್ಕ ಸಾಕ್ಷ್ಯಾಧಾರಗಳ ಮೇರೆಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ನಿನ್ನೆವರೆಗೂ ಅಧಿಕಾರಿಗಳೊಂದಿಗೆ ಕಿರಿಕ್ ಮಾಡುತ್ತಿದ್ದ ನಟಿಮಣಿಯರು ಇಂದು ಫುಲ್ ಸೈಲೆಂಟ್ ಆಗಿದ್ದಾರೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಆರೋಪಿಗಳಿಗೆ ಈಗಾಗಲೇ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ, ಸ್ಯಾಂಪಲ್ಸ್ಗಳನ್ನು ಪರೀಕ್ಷೆ ಕಳುಹಿಸಿದ್ದಾರೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಅರೋಪಿಗಳ ನಿಜ ಬಣ್ಣ ಬಯಲಾಗಲಿದೆ. ಇಂದು ರಾಗಿಣಿ ಮತ್ತು ಆಪ್ತರ ಕಸ್ಟಡಿ ಅಂತ್ಯವಾಗಲಿದ್ದು, ಹೀಗಾಗಿ ಪೊಲೀಸರು ಬೆಳಗ್ಗೆಯಿಂದಲೇ ವಿಚಾರಣೆ ಆರಂಭಿಸಿದ್ದಾರೆ.