ಕರ್ನಾಟಕ

karnataka

ETV Bharat / state

ಮಂಗಳೂರು ಗೋಲಿಬಾರ್​​​​​​​ ಪ್ರಕರಣದ ತನಿಖೆ ಸುಪ್ರೀಂ ನ್ಯಾಯಮೂರ್ತಿಗಳಿಂದ ನಡೆಯಲಿ: ಉಗ್ರಪ್ಪ

ಮಂಗಳೂರು ಗೋಲಿಬಾರ್​​ಗೆ ಇಬ್ಬರು ಬಲಿಯಾದ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

Ugrappa
ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆ ಸುಪ್ರೀಂಕೋರ್ಟಿಗೆ ವಹಿಸಿ : ಉಗ್ರಪ್ಪ

By

Published : Dec 23, 2019, 4:37 PM IST

ಬೆಂಗಳೂರು: ಮಂಗಳೂರು ಗೋಲಿಬಾರ್​​ಗೆ ಇಬ್ಬರು ಬಲಿಯಾದ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆ ಸುಪ್ರೀಂಕೋರ್ಟಿಗೆ ವಹಿಸಿ: ಉಗ್ರಪ್ಪ

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇರೆ ಯಾವ ತನಿಖೆಯಿಂದಲೂ ಸತ್ಯ ಹೊರಗೆ ಬರಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ ಇಂದು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಇಂದಿನ ರಾಜಶಕ್ತಿ ದಾರಿ ತಪ್ಪಿದೆ. ಇದನ್ನ ಸರಿಪಡಿಸೋ ಹೊಣೆ ಜನಶಕ್ತಿ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಇಡೀ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದನ್ನ ತಡೆದುಕೊಳ್ಳೋಕೆ ಬಿಜೆಪಿಯವರಿಗೆ ಆಗ್ತಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಅಮಿತ್ ಶಾ ಎನ್​ಆರ್​ಸಿ ತರುತ್ತೇವೆ ಎಂದಿದ್ದಾರೆ. ಆದರೆ ಮೋದಿ ಎನ್​ಆರ್​ಸಿ ತರಲ್ಲ ಎನ್ನುತ್ತಾರೆ. ಇಬ್ಬರಿಗೂ ತಾಳ ತಪ್ಪಿರೋದು ಇದ್ರಿಂದ ಅರ್ಥವಾಗ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಉಗ್ರಪ್ಪ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲೂ ಸಿಎಂ, ಗೃಹ ಸಚಿವರಿಗೆ ತಾಳಮೇಳವಿಲ್ಲ. ಸಿಎಂ ಒಂದು ಹೇಳಿದ್ರೆ, ಗೃಹ ಸಚಿವರು ಮತ್ತೊಂದು ಹೇಳ್ತಾರೆ. ಕೇರಳದಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಬಂದ್ರು ಅಂತಾರೆ. ಸಿಎಂ ಬಳಿಯೇ ಇಂಟೆಲಿಜೆನ್ಸ್ ಇದೆ. ಕಪ್ಪು ಬಟ್ಟೆ ಧರಿಸಿದವರು ಅವರಿಗೆ ಗೊತ್ತಾಗಲಿಲ್ವಾ? ಕಪ್ಪು ಬಟ್ಟೆ ಕಟ್ಟಿಕೊಂಡವರು ಸಂಘ ಪರಿವಾರದವರೇ? ಯಾಕೆ ಇದರ ಬಗ್ಗೆ ಬಹಿರಂಗಪಡಿಸುತ್ತಿಲ್ಲ. ಸತ್ತವರ ಮೇಲೆಯೇ ವಿಧ್ವಂಸಕ ಕೃತ್ಯ ಅಂತ ಎಫ್ಐ​ಆರ್ ಹಾಕಿದ್ದೀರಿ. ಅವರಿಗೆ 10 ಲಕ್ಷ ಪರಿಹಾರವನ್ನೂ ಕೊಟ್ಟಿದ್ದೀರಾ. ಸತ್ತವರು ಅಮಾಯಕರು ಅನ್ನೋದು ನಿಮಗೂ ಗೊತ್ತಿದೆ. ಈಗ ಸಿಐಡಿ ತನಿಖೆ ಮಾಡಿಸ್ತೇವೆ ಅಂತೀರ. ಹಿಂದೆ ಸಣ್ಣ ಘಟನೆ ನಡೆದ್ರೂ ಸಿಬಿಐ ತನಿಖೆ ಅಂತಿದ್ರಿ. ಈಗ ಇದರ ಬಗ್ಗೆಯೂ ಸಿಬಿಐ ತನಿಖೆ ನಡೆಸಿ. ಸರ್ಕಾರದ ಕುಮ್ಮಕ್ಕಿನಿಂದಲೇ ಈ ಕೃತ್ಯ ನಡೆದಿದೆ. ಮಂಗಳೂರು ಘಟನೆಗೆ ಬಿಜೆಪಿಯೇ ಕಾರಣ ಎಂದು ದೂರಿದರು.

ಮುಸ್ಲಿಮರಿಗೆ ಪೌರತ್ವ ಕೊಡೋಕೆ ಭಾರತ ಧರ್ಮ ಛತ್ರವಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳ್ತಾರೆ. ಡಿಸಿಎಂ ಗೋವಿಂದ ಕಾರಜೋಳ, ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನೊಂದು ರೀತಿ ಹೇಳ್ತಾರೆ. ಸಂವಿಧಾನದ ಬಗ್ಗೆ ಬಿಜೆಪಿಯವರಿಗೆ ಗೌರವವಿಲ್ಲ. ನಿಮಗೆ ತಾಕತ್ತಿದ್ದರೆ ಇದನ್ನ ಒಪ್ಪಿಕೊಳ್ಳಿ. ಹಿಂದುತ್ವದ ತಿರುಳು ಏನು ಅದಾದ್ರು ನಿಮಗೆ ಗೊತ್ತಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಕ್ತ ದೇಶ ಅಂತ ಹೇಳ್ತಿದ್ರು. ಆದ್ರೆ ಈಗ ದೇಶದಲ್ಲಿ ಬಿಜೆಪಿ ಮುಕ್ತವಾಗ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಎಲ್ಲ ಕಡೆ ಕಳೆದುಕೊಂಡಿದ್ದೀರ. ಮಹಾರಾಷ್ಟ್ರ ಕೂಡ ನಿಮ್ಮ ಕೈಬಿಟ್ಟು ಹೋಗಿದೆ. ಕರ್ನಾಟಕ ನಿಮ್ಮ ಮೋಸದಿಂದ ಅಷ್ಟೇ ಉಳಿದುಕೊಂಡಿದೆ. ಈಗ ಜಾರ್ಖಂಡ್ ಕೂಡ ನಿಮ್ಮ ಕೈಯಿಂದ ಜಾರಿದೆ ಎಂದು ಹೇಳಿದರು.

ABOUT THE AUTHOR

...view details