ಕರ್ನಾಟಕ

karnataka

ETV Bharat / state

ಸಿದ್ದಾರ್ಥ್​ಗೆ ಕಿರುಕುಳ ಆರೋಪ: ತನಿಖೆಗೆ ಎಂ.ಪಿ ಕುಮಾರಸ್ವಾಮಿ ಒತ್ತಾಯ - ಸಿದ್ದಾರ್ಥ ನಾಪತ್ತೆ ಪ್ರಕರಣ

ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರು ಕಾಣೆಯಾಗಿರೋದು ಬೇಸರದ ಸಂಗತಿ, ಅವರು ಬರೆದ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಐಟಿ ಡಿಜಿ ಹಿಂಸೆ ಕೊಟ್ಟರು ಅಂತ ಆರೋಪ ಮಾಡಿದ್ದಾರೆ. ಅವರಿಗೆ ತೊಂದರೆ ಆಗಿದ್ದರೆ ಆ ಡಿಜಿಯೇ ಕಾರಣ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ಎಂ.ಪಿ ಕುಮಾರಸ್ವಾಮಿ

By

Published : Jul 30, 2019, 5:13 PM IST

ಬೆಂಗಳೂರು:ಉದ್ಯಮಿ ಸಿದ್ದಾರ್ಥ್​ಗೆ ಕಿರುಕುಳ ಕೊಡಲಾಗಿದೆ ಎನ್ನುವ ಮಾಹಿತಿ ಬಂದಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸಿದ್ದಾರ್ಥ್​ ಅವರು ಕಾಣೆಯಾಗಿರೋದು ಬೇಸರದ ಸಂಗತಿ. ಅವರು ಬರೆದ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಐಟಿ ಡಿಜಿ ಹಿಂಸೆ ಕೊಟ್ಟರು ಅಂತ ಆರೋಪ ಮಾಡಿದ್ದಾರೆ. ಅವರಿಗೆ ತೊಂದರೆ ಆಗಿದ್ದರೆ ಆ ಡಿಜಿಯೇ ಕಾರಣ. ಅಧಿಕಾರಿ ವಿರುದ್ಧ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಂ.ಪಿ ಕುಮಾರಸ್ವಾಮಿ

ಸಿದ್ದಾರ್ಥ್​ ಸಾಮಾನ್ಯ ವ್ಯಕ್ತಿ ಅಲ್ಲ. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದರು. ಎಸ್.ಎಂ‌.ಕೃಷ್ಣ ಅವರ ಮನೆತನದವರಿಗೆ ಹೀಗೆ ಮಾಡಬಾರದಿತ್ತು. ಎಷ್ಟು ಹಿಂಸೆ ಕೊಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ABOUT THE AUTHOR

...view details