ಕರ್ನಾಟಕ

karnataka

ETV Bharat / state

ಅಂತರ ರಾಜ್ಯ ಪ್ರಯಾಣಿಕರಿಗಾಗಿ ವಿಸ್ತೃತ ಮಾರ್ಗಸೂಚಿ: ಅನುಸರಿಸಬೇಕಾದ ಪ್ರಕ್ರಿಯೆ ಏನು?

ಜೂನ್ 8ರ ಬಳಿಕ ಅನ್ ಲಾಕ್-1 ಜಾರಿಗೆ ಬರಲಿದ್ದು, ಅಂತರ ರಾಜ್ಯ ಪ್ರಯಾಣಿಕರು ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ.

interstate traveler process in Karnataka
interstate traveler process in Karnataka

By

Published : Jun 7, 2020, 2:35 AM IST

ಬೆಂಗಳೂರು: ಅನ್ ಲಾಕ್ ಅವಧಿಯಲ್ಲಿ ಅಂತರ ರಾಜ್ಯ ಪ್ರಯಾಣಿಕರ ಆರೋಗ್ಯ ತಪಾಸಣೆ, ಕ್ವಾರಂಟೈನ್ ಮತ್ತು ಟೆಸ್ಟಿಂಗ್ ವೇಳೆ ಅನುಸರಿಸಬೇಕಾದ ಪ್ರಕ್ರಿಯೆ ಬಗ್ಗೆ ಆರೋಗ್ಯ ಇಲಾಖೆ ವಿಸ್ತೃತ ಮರ್ಗಸೂಚಿಯನ್ನು ಹೊರಡಿಸಿದೆ.

ಅಂತರ ರಾಜ್ಯ ಪ್ರಯಾಣಿಕರಿಗಾಗಿ ವಿಸ್ತೃತ ಮಾರ್ಗಸೂಚಿ

ಜೂನ್ 8ರ ಬಳಿಕ ಅನ್ ಲಾಕ್-1 ಜಾರಿಗೆ ಬರಲಿದ್ದು, ಅಂತರ ರಾಜ್ಯ ಪ್ರಯಾಣಿಕರು ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ. ಈಗಾಗಲೇ ಅಂತರ ರಾಜ್ಯ ಪ್ರಯಾಣಿಕರಿಂದಲೇ ರಾಜ್ಯದಲ್ಲಿ ಕೋವಿಡ್​-19 ಪ್ರಕರಣಗಳ ಪ್ರಮಾಣದಲ್ಲಿ ಭಾರಿ ಏರಿಕೆ‌ ಕಾಣುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಅಂತರ ರಾಜ್ಯ ಪ್ರಯಾಣಿಕರ ಸಂಬಂಧ ವಿಸ್ತೃತ ಮಾರ್ಗಸೂಚಿಯನ್ನು ಹೊರಡಿಸಿದೆ.

ಅಂತರ ರಾಜ್ಯ ಪ್ರಯಾಣಿಕರಿಗಾಗಿ ವಿಸ್ತೃತ ಮಾರ್ಗಸೂಚಿ

ಗಡಿ ಸ್ವೀಕಾರ ಕೇಂದ್ರಗಳಲ್ಲಿ ಏನು‌ ಮಾಡಬೇಕು?

  • ಸರತಿ ಸಾಲಿನಲ್ಲಿ ಹೋಗಲು ಅನುವಾಗುವಂತೆ ಬ್ಯಾರಿಕೇಡ್​ಗಳನ್ನು ಹಾಕಿ ತಪಾಸಣೆ ಮಾಡಬೇಕು
  • ಸಾಕಷ್ಟು ವೈದ್ಯಕೀಯ ಚೆಕ್ ಅಪ್ ಕೌಂಟರ್ ಮತ್ತು ತಪಾಸಣಾ ಕೌಂಟರ್ ಸ್ಥಾಪನೆ ಮಾಡಬೇಕು
    ಅಂತರ ರಾಜ್ಯ ಪ್ರಯಾಣಿಕರಿಗಾಗಿ ವಿಸ್ತೃತ ಮಾರ್ಗಸೂಚಿ
  • ಸೋಂಕು ಲಕ್ಷಣ ಕಾಣಿಸದವರ ಆರೋಗ್ಯ ಸ್ಥಿತಿ, ಆಸ್ಪತ್ರೆ ಸ್ಥಳವನ್ನು ಆ್ಯಪ್ ನಲ್ಲಿ ನೋಂದಣಿ, ಬಳಿಕ ಅವರನ್ನು ಗಡಿ ಜಿಲ್ಲೆಯ ಆಸ್ಪತ್ರೆಗೆ ಕಳುಹಿಸಬೇಕು
  • ರೋಗ ಲಕ್ಷಣ ಕಾಣಿಸಿದವರನ್ನು ಮಾತ್ರ ಕೋವಿಡ್-19 ಆಸ್ಪತ್ರೆಗೆ ಕಳುಹಿಸಬೇಕು
  • ಕುಟುಂಬದ ಜತೆಗೆ ಪ್ರಯಾಣಿಸುತ್ತಿರುವ ಸೋಂಕು ಲಕ್ಷಣ ಕಾಣಿಸಿದ ಪ್ರಯಾಣಿಕನನ್ನು ಆತನ ತವರು ಜಿಲ್ಲೆಗೆ ಕಳುಹಿಸಬಹುದು. ಅಲ್ಲಿ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಬೇಕು. ಜಿಲ್ಲಾ ಗಡಿ ಕೋವಿಡ್​ ಕೇಂದ್ರಕ್ಕೆ ಮಾಹಿತಿ ನೀಡಿ, ಕೈಗೆ ಸ್ಟಾಂಪ್ ಹಾಕಿಸಬೇಕು
  • ಸೋಂಕು ಲಕ್ಷಣ‌ ಕಾಣಿಸದ‌ ಪ್ರಯಾಣಿಕನಿಗೆ ಹ್ಯಾಡ್ ಸ್ಟಾಂಪ್ ಹಾಕಬೇಕು. ಬಳಿಕ ಸ್ವಯಂ ನೋಂದಣಿ ತಪಾಸಣಾ ಕೇಂದ್ರಕ್ಕೆ ಕಳುಹಿಸಬೇಕು
  • ಸ್ವಯಂ ನೋಂದಣಿ ತಪಾಸಣಾ‌ ಕೇಂದ್ರದಲ್ಲಿ ಉದ್ಯಮಿಗಳಿಗೆ, ರಾಜ್ಯದ ಮೂಲಕ ಹೋಗುವ ಪ್ರಯಾಣಿಕರಿಗೆ ಪ್ರತ್ಯೇಕ ಕೌಂಟರ್ ಸ್ಥಾಪಿಸಬೇಕು
  • ವಲಸೆ ಕಾರ್ಮಿಕರು, ವಿಶೇಷ ವರ್ಗದವರಿಗೆ ಪ್ರತ್ಯೇಕ ಕೌಂಟರ್ ಸ್ಥಾಪಿಸಬೇಕು
  • ಬಿಜಿನೆಸ್ ವಿಸಿಟರ್​ಗಳ ಮೊಬೈಲ್​​ ಒಟಿಪಿ ಮೂಲಕ ತಪಾಸಣೆ
  • ಅವರ ವಿಮಾನ/ರೈಲು ರಿಟರ್ನ್ ಟಿಕೆಟ್ ಪರಿಶೀಲನೆ
  • 2 ದಿನಕ್ಕಿಂತ ಹಳೆಯದಾದ ಕೋವಿಡ್ ಟೆಸ್ಟ್ ವರದಿ ಇರಬಾರದು
  • ಉದ್ಯಮಿ ಹೋಗಬೇಕಾದ ಸ್ಥಳ,ವಿಳಾಸದ ಪರಿಶೀಲನೆ
  • ಮಹಾರಾಷ್ಟ್ರದಿಂದ ಬರುವ ವಿಶೇಷ ವರ್ಗದ ಪ್ರಯಾಣಿಕರ‌ ಮೊಬೈಲ್ ಸಂಖ್ಯೆ ಬದಲಾಗಿದೆಯಾ ಎಂದು ಪರಿಶೀಲಿಸಬೇಕು. ಬಳಿಕ ಅವರನ್ನು ಹೋಂ ಕ್ವಾರೆಂಟೈನ್​ಗೆ ಕಳುಹಿಸಬೇಕು
  • ಮಹಾರಾಷ್ಟ್ರದಿಂದ ಬರುವ ಸಾಮಾನ್ಯ ಪ್ರಯಾಣಿಕರ ಮೊಬೈಲ್ ಸಂಖ್ಯೆ ಬದಲಾಗಿದೆಯೋ ಎಂದು ಪರಿಶೀಲಿಸಬೇಕು. ಬಳಿಕ ಅವರನ್ನು ಜಿಲ್ಲಾ ಸ್ವೀಕಾರ ಕೇಂದ್ರಕ್ಕೆ ಕಳುಹಿಸಬೇಕು.

ಜಿಲ್ಲಾ ಸ್ವೀಕಾರ ಕೇಂದ್ರ ಏನು ಮಾಡಬೇಕು?

  • ಸಾಂಸ್ಥಿಕ ಕ್ವಾರಂಟೈನ್​ಗೆ ಹೋಗುವ ಅಂತರ ರಾಜ್ಯ‌ ಪ್ರಯಾಣಿಕರನ್ನು ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ಸ್ವೀಕರಿಸಬೇಕು. 24*7 ಕಾರ್ಯನಿರ್ವಹಿಸಬೇಕು
  • ಎಲ್ಲ ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರು ಹಾಗೂ ಇತರ ರಾಜ್ಯದಿಂದ ಬಂದ ಸೋಂಕು ಲಕ್ಷಣ ಕಾಣಿಸುವ ಪ್ರಯಾಣಿಕರು ನಿಗದಿತ ಜಿಲ್ಲಾ ಸ್ವೀಕಾರ ಕೇಂದ್ರಕ್ಕೆ ರಿಪೋರ್ಟ್ ಮಾಡಬೇಕು.
  • ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶಿಸಿದ ಪ್ರಯಾಣಿಕ 24 ಗಂಟೆಗಳ ನಂತರವೂ ಜಿಲ್ಲಾ ಸ್ವೀಕಾರ ಕೇಂದ್ರಕ್ಕೆ‌ ರಿಪೋರ್ಟ್ ಮಾಡಿಲ್ಲವಾದರೆ ಕಾನೂನು ಕ್ರಮ

ABOUT THE AUTHOR

...view details