ಆನೇಕಲ್: ನಾಳೆಯಿಂದ ಲಾಕ್ಡೌನ್ ಮೊದಲ ಹಂತದ ಸಡಿಲಿಕೆ ಹಿನ್ನೆಲೆ ಹೊರ ರಾಜ್ಯದಿಂದ ಜನರು ಇಂದಿನಿಂದಲೇ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ತೆರಳಿದ್ದ ವಲಸೆ ಕಾರ್ಮಿಕರು ಮತ್ತೆ ಕರ್ಮ ಭೂಮಿಯತ್ತ ಮರಳುತ್ತಿದ್ದಾರೆ. ಹೀಗಾಗಿ, ಆನೇಕಲ್ ಅತ್ತಿಬೆಲೆ-ತಮಿಳುನಾಡಿನ ಹೊಸೂರು ರಾಷ್ಟ್ರೀಯ ಹೆದ್ದಾರಿ ಗಡಿಯಲ್ಲಿ ಒಂದು ಕಿಲೋಮೀಟರ್ಗೂ ಹೆಚ್ಚು ವಾಹನಗಳು ಸಾಲುಗಟ್ಟಿವೆ. ಅತ್ತಿಬೆಲೆ ಟೋಲ್ನಿಂದ ಅತ್ತಿಬೆಲೆ ಪಟ್ಟಣದ ಮಾರ್ಗವೂ ವಾಹನ ಸಂಚಾರದಿಂದ ನಲುಗಿದೆ.
ಇದನ್ನೂ ಓದಿ:ನೀವ್ ಲಸಿಕೆ ಹಾಕಿಸಿಕೊಂಡ್ರಾ, 20 ಕೆಜಿ ಅಕ್ಕಿ ಕೊಡ್ತಾರಂತೆ ನೋಡಿ ಇಲ್ಲಿ..