ಕರ್ನಾಟಕ

karnataka

ETV Bharat / state

ನೈಜೀರಿಯನ್ ಮಾದಕ ಸರಬರಾಜುದಾರನ ಜೊತೆ ರಕೀಬ್ ಜಾಕೀರ್ ಸಂಪರ್ಕ: ವಿವರಣೆ ಪಡೆದ ಡಿ.ಜೆ.ಹಳ್ಳಿ ಪೊಲೀಸರು - ಡೇವಿಡ್ ಹಾಗೂ ರಕೀಬ್ ಜಾಕೀರ್ ನಡುವೆ ಫೋನ್ ಸಂಪರ್ಕ

ಡಿ.ಜೆ ಹಳ್ಳಿ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಜಿ‌ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ನನ್ನು ಮತ್ತೆ ನೈಜೀರಿಯಾ ಮೂಲದ ಮಾದಕ ಸರಬರಾಜುದಾರನ ಜೊತೆ ಸಂಪರ್ಕದಲ್ಲಿರುವ ಕುರಿತು ಪೊಲೀಸರು ಆತನ ವಿಚಾರಣೆ ನಡೆಸಿದ್ದಾರೆ.

Former corporator Abdul Rakib Zakir
ಮಾಜಿ‌ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್

By

Published : Feb 1, 2023, 7:32 AM IST

ಬೆಂಗಳೂರು :ನೈಜೀರಿಯಾ ಮೂಲದ ಮಾದಕ ಸರಬರಾಜುದಾರನ ಜೊತೆ ಸಂಪರ್ಕದಲ್ಲಿದ್ದ ಪುಲಿಕೇಶಿ ನಗರ ವಾರ್ಡಿನ ಮಾಜಿ‌ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ನನ್ನು ಡಿ.ಜೆ.ಹಳ್ಳಿ ಠಾಣಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎರಡು ತಿಂಗಳ ಹಿಂದೆ ಶಾಂಪುರ ರೈಲ್ವೇ ಗೇಟ್ ಬಳಿ ನೈಜೀರಿಯಾ ಮೂಲದ ಡೇವಿಡ್ ಒಕೊನ್ಕ್ವೋ ಎಂಬ ಮಾದಕ ದಂಧೆಕೋರನನ್ನು ಬಂಧಿಸಿದ್ದ ಡಿ.ಜೆ.ಹಳ್ಳಿ ಪೊಲೀಸರು 97 ಎಕ್ಸ್ಟೆಸಿ ಪಿಲ್ಸ್ ವಶಕ್ಕೆ ಪಡೆದಿದ್ದರು.

ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಹಾಗೂ ಆತನ ಮೊಬೈಲ್ ಪರಿಶೀಲಿಸಿದಾಗ ಪುಲಿಕೇಶಿ ನಗರದ ಮಾಜಿ ಕಾರ್ಪೊರೇಟರ್ ರಕೀಬ್ ಜಾಕೀರ್ ಜೊತೆ ಸಂಪರ್ಕದಲ್ಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ನೋಟಿಸ್ ನೀಡಿ ಕರೆಸಿಕೊಂಡಿದ್ದ ಡಿ.ಜೆ.ಹಳ್ಳಿ ಠಾಣಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಂಧಿತ ಆರೋಪಿ ಡೇವಿಡ್ ಹಾಗೂ ರಕೀಬ್ ಜಾಕೀರ್ ನಡುವೆ ಫೋನ್ ಸಂಪರ್ಕ ಮೂಲಕ ಮಾದಕ ಪದಾರ್ಥಗಳನ್ನು ತರಿಸಿಕೊಳ್ಳಲಾಗಿದೆ. ಆದರೆ ತಾನು ಮಾದಕ ಪದಾರ್ಥ ಸೇವಿಸುವುದಿಲ್ಲವೆಂದು ರಕೀಬ್ ಹೇಳಿದ್ದು, ಆತನ ಜೊತೆ ಇರುವವರು ತರಿಸಿಕೊಂಡಿರುವ ಸಾಧ್ಯತೆ ಸಹ ಇದೆ. ಸದ್ಯ ತನಿಖೆ ಮಾಡಲಾಗುತ್ತಿದ್ದು‌, ಅಗತ್ಯವಿದ್ದಲ್ಲಿ ಪುನಃ ವಿಚಾರಣೆಗೆ ಕರೆಯಲಿದ್ದೇವೆ ಎಂದು ಡಿ.ಜೆ.ಹಳ್ಳಿ ಪೊಲೀಸರು ತಿಳಿಸಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಪುಲಿಕೇಶಿನಗರದ ಮಾಜಿ ಕಾರ್ಪೊರೇಟರ್ ಆಗಿರುವ ಅಬ್ದುಲ್ ರಕೀಬ್ ಜಾಕೀರ್ ನನ್ನು ಡಿ.ಜೆ ಹಳ್ಳಿ ಕೆ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿಯೂ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಡಿ.ಜೆ. , ಕೆ.ಜಿ. ಹಳ್ಳಿ ಪ್ರಕರಣವೇನು?:2-3 ವರ್ಷಗಳ ಹಿಂದೆ ಡಿ.ಜೆ. ಮತ್ತು ಕೆ.ಜಿ ಹಳ್ಳಿ ಗಲಭೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಅನ್ಯಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್​ ಪ್ರಕಟಿಸಿದ್ದರು ಎಂದು ಹೇಳಿ 500 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರು, ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ 2020 ರ ಆ ಆಗಸ್ಟ್​ 10 ರಂದು ಪೊಲೀಸ್​ ಠಾಣೆ ಮೇಲೆ ದಾಳಿ ನಡೆಸಿದ್ದಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚಿ, ಶ್ರೀನಿವಾಸಮೂರ್ತಿ ಶಾಸಕರ ಮನೆಯ ಮೇಲು ಕೆಲವರು ದಾಳಿ ಮಾಡಿದ್ದರು.

ಅವಹೇಳನಕಾರಿ ಪೋಸ್ಟ್​ ಮಾಡಿದಾತನ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ದಾಳಿ ನಡೆಸಲಾಗಿತ್ತು. ಹೀಗಾಗಿ ಆ ದಿನ ಭಾರಿ ಹಿಂಸಾಚಾರ ನಡೆಸಿದ್ದರು. ಈ ಗಲಭೆಯಲ್ಲಿ 6 ಮನೆ, 10 ಅಂಗಡಿ, 80ಕ್ಕೂ ಹೆಚ್ಚು ವಾಹನ, ಶಾಸಕರ ಕಛೇರಿಗೆ ಹಾನಿಯಾದದಲ್ಲದೇ, 70 ಪೊಲೀಸರೊಂದಿಗೆ 30 ಸಾರ್ವಜನಿಕರೂ ಗಾಯಗೊಂಡಿದ್ದರು.

ಆ ಘಟನೆ ನಂತರ ತಕ್ಷಣವೇ ಪೊಲೀಸರು ಮುಖ್ಯ ಆರೋಪಿಗಳನ್ನು ಅಂದರೆ ಆ ಸಂದರ್ಭದಲ್ಲಿ 150 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಬಂಧಿಸಿದ್ದರು. ಇವರ ಜೊತೆಗೆ ಪೋಸ್ಟ್​ ಮಾಡಿದ್ದಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಇನ್ನು ಮಾಜಿ ಕಾರ್ಪೊರೇಟರ್ ಆಗಿರುವ ಅಬ್ದುಲ್ ರಕೀಬ್ ಜಾಕೀರ್ ನನ್ನು ಇದೇ ಪ್ರಕರಣದಲ್ಲಿ ಬಂಧಿಸಿದ್ದರು. ಇದೀಗ ಆತನನ್ನು ಮಾದಕ ಸರಬರಾಜಿಗೆ ಸಂಬಂಧಸಿ ಮತ್ತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಸ್ವಿಮ್ಮಿಂಗ್​ ಪೂಲ್​ನಲ್ಲಿ ಬಾಲಕರು ಮೃತಪಟ್ಟ ಪ್ರಕರಣ: ಪೋಷಕರು ಇನ್ಸ್​ಪೆಕ್ಟರ್​ ನಡುವೆ ಮಾತಿ‌ನ ಚಕಮಕಿ

ABOUT THE AUTHOR

...view details