ಕರ್ನಾಟಕ

karnataka

ETV Bharat / state

ಕಂಠೀರವ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ: ಯೋಗಪಟುಗಳು, ಗಣ್ಯರಿಂದ ಯೋಗಾಭ್ಯಾಸ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಚಿವರು, ಸ್ವಾಮೀಜಿಗಳು ಮತ್ತು ಯೋಗಪಟುಗಳು ಯೋಗಾಭ್ಯಾಸ ನಡೆಸಿದರು.

Yoga day at Kanteerava Stadium
ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು

By

Published : Jun 21, 2021, 8:16 AM IST

ಬೆಂಗಳೂರು: ನಗರದ ಕಂಠೀರವ ಸ್ಟೇಡಿಯಂನಲ್ಲಿ ವಚನಾನಂದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಯೋಗಪಟುಗಳು ಯೋಗಭ್ಯಾಸ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆ ಆಚರಿಸಿದರು. ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸದೆ ಯೋಗಾಸನಗಳನ್ನು ಮಾಡಿದರು. ಸಚಿವರು ಸೇರಿದಂತೆ ಗಣ್ಯರು ಕೂಡ ಯೋಗಾಭ್ಯಾಸ ಮಾಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು

ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಿತ್ತು.

ಡಿಸಿಎಂ ಅಶ್ವತ್ಥ್​ ನಾರಾಯಣ, ಕ್ರೀಡಾ ಖಾತೆ ಸಚಿವ ಡಾ.ಕೆ.ಸಿ ನಾರಾಯಣ ಗೌಡ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕರ್ನಾಟಕ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ.ಗೋವಿಂದರಾಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಯೋಗವು ಯಾವುದೇ ಧರ್ಮಕ್ಕೆ ಸೇರಿದ್ದಲ್ಲ. ಯೋಗ ವಿಜ್ಞಾನ ಈ ದೇಶದ, ಈ ಮಣ್ಣಿನ ಸಂಶೋಧನೆ. ಇಡೀ ವಿಶ್ವಕ್ಕೆ ಯೋಗ ಕೊಟ್ಟ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಬೇರೆ ದೇಶದ ಸಂಶೋಧನೆಯಾದ ಆಮ್ಲಜನಕ ಉಪಯೋಗಿಸದಿದ್ದರೆ ನಮ್ಮ ಜೀವ ಹೋಗುತ್ತದೆ. ಹಾಗೇಯೇ ಪತಂಜಲಿಯವರು ಕೊಟ್ಟ ಯೋಗ ವಿಜ್ಞಾನವೂ ವಿಶ್ವದೆಲ್ಲೆಡೆ ಹಬ್ಬಿದೆ ಎಂದರು.

"ಚಿತ್ತವೃತ್ತಿ ನಿರೋಧಹ ಯೋಗ" ಎಂದು ಹೇಳಬಹುದು. ನಮ್ಮ ದೇಹವನ್ನು ಸರಿಯಾಗಿ ಇಟ್ಟುಕೊಳ್ಳಲು ಆಸನಗಳು, ಪ್ರಾಣಾಯಾಮಗಳು ಮುಖ್ಯ. ಹೀಗಾಗಿ ಇಡೀ ಜಗತ್ತಿಗೆ ನಮ್ಮ ದೇಶದ ಕಾಣಿಕೆ ಯೋಗ. ಎಲ್ಲಾ ಧರ್ಮೀಯರು, ಎಲ್ಲಾ ದೇಶದವರು ಯೋಗವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಶಾಲಾ ಅಳವಡಿಸಬೇಕು ಎಂದು ಹೇಳಿದರು.

ಡಿಸಿಎಂ ಅಶ್ವತ್ಥ್ ನಾರಾಯಣ ಮಾತನಾಡಿ, ಒಳ್ಳೆಯ ಅಭ್ಯಾಸ, ಚಿಂತನೆಗಳನ್ನು ಬೆಳೆಸಿಕೊಂಡಾಗ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಅರ್ಥಪೂರ್ಣ ಜೀವನ ನಡೆಸಲು ಸಾಧ್ಯ. ದೈಹಿಕ, ಮಾನಸಿಕ ದೃಢತೆಗೆ ಯೋಗ ಸಹಕಾರಿ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಯೋಗ ದಿನ ಆಚರಿಸಲು ಕಾರಣಕರ್ತರು ಎಂದರು.

ಇಡೀ ವಿಶ್ವವೇ ಯೋಗ ಆಚರಿಸುತ್ತಿದೆ. ಯೋಗವನ್ನು ಪಠ್ಯಕ್ರಮದಲ್ಲಿ ತರುವ ಬೇಡಿಕೆ ಇದೆ. ಅದರಂತೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗ ಮಾಡಲು ಅವಕಾಶ ಇದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರ ಒಳಗೊಂಡತೆ ರಾಷ್ಟ್ರೀಯ ಶಿಕ್ಷಣ ನೀತಿ ಇದೆ. ಈ ಸುಧಾರಣೆ ಸ್ವಾತಂತ್ರ್ಯ ನಂತರ ಈಗ ಸಿಗುತ್ತಿದೆ. ಇದರಿಂದ ಸಮಾಜದ ಸುಧಾರಣೆ ಸಾಧ್ಯ ಎಂದು ತಿಳಿಸಿದರು.

ಕ್ರೀಡಾ ಖಾತೆ ಸಚಿವ ಡಾ.ಕೆ.ಸಿ ನಾರಾಯಣ ಗೌಡ ಮಾತನಾಡಿ, ಕಳೆದ ಏಳು ವರ್ಷಗಳಿಂದ ವಿಶ್ವ ಯೋಗ ದಿನಾಚರಣೆ ಆಚರಿಸಲಾಗ್ತಿದೆ. ಜಗತ್ತಿನ 177 ದೇಶಗಳು ಯೋಗ ದಿನಾಚರಣೆ ಮಾಡುತ್ತವೆ. ಇದು ನಮ್ಮ ದೇಶದ ಕೊಡುಗೆ ಎಂದರು.

ಇದನ್ನೂಓದಿ : ಯೋಗಾಭ್ಯಾಸ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಲಿ: ಸಿಎಂ ಯಡಿಯೂರಪ್ಪ

ABOUT THE AUTHOR

...view details