ಬೆಂಗಳೂರು: ಕೋವಿಡ್ಗೆ ತುತ್ತಾಗಿ ಜನರು ಭಯದಿಂದಲೇ ಅರ್ಧ ಕುಗ್ಗಿದ್ದಾರೆ. ವೈರಸ್ಗೆ ತುತ್ತಾದ ಮೇಲೆ ಮನೆಯವರಿಂದ ಮತ್ತು ಜಗತ್ತಿನಿಂದ ದೂರ ಇರುವ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಇಂತಹ ಸಮಯದಲ್ಲಿ ದೇವರ ರೂಪದಲ್ಲಿರುವ ನೆರವಿಗೆ ಬರುತ್ತಿರುವವರೇ ದಾದಿಯರು.
ಆಪತ್ಬಾಂಧವರಂತೆ ಕೋವಿಡ್ ವಾರಿಯರ್ಸ್ ಆದ ನರ್ಸ್ ಗಳು ಕೋವಿಡ್ ಗೆ ತುತ್ತಾದವರಿಗೆ ಆತ್ಮಸ್ಥೈರ್ಯ ತುಂಬಲು ನೆರವಾಗುತ್ತಿದ್ದಾರೆ. ದಾದಿಯರ ಕಷ್ಟ ಅಷ್ಟಿಷ್ಟಿಲ್ಲ. ಆದರೂ ರೋಗಿಗಳ ಬೆನ್ನಿಗೆ ನಿಲ್ಲುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ.
ಓದಿ:ಇಂದಿನಿಂದ 14 ದಿನ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ : ಏನಿರುತ್ತೆ, ಏನಿರಲ್ಲ?
ಕೋವಿಡ್ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿ ಜನರನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಪ್ರತಿಯೊಬ್ಬರನ್ನು ಬಿಟ್ಟು ಬಿಡದಂತೆ ಬಾಧಿಸುತ್ತಿದೆ. ಕೋವಿಡ್ ವಯೋವೃದ್ಧರಿಗೆ, ತಾಯಂದಿರರಿಗೆ, ಮಕ್ಕಳಿಗೆ ಹೀಗೆ ಪ್ರತಿಯೊಬ್ಬರಲ್ಲಿಯೂ ಕೊರೊನಾ ಕಾಣಿಸಿಕೊಂಡು ಕೆಲವರನ್ನ ತನ್ನ ಕುಟುಂಬದಿಂದ ದೂರು ಮಾಡಿ ನರಳಾಡುವಂತೆ ಮಾಡುತ್ತಿದೆ. ಇಂತಹ ಸಮಯದಲ್ಲಿ ಸಂತೈಸಿ ಸಲಹುತ್ತಿರುವವರು ದಾದಿಯರು.
ಮೇ 12ರ ವಿಶ್ವ ದಾದಿಯರ ದಿನಕ್ಕೆ ಈಟಿವಿ ಭಾರತದಿಂದ ಸಲಾಂ ವೈದ್ಯೋ ನಾರಾಯಣ ಹರಿ ಅಂತಾರೆ ಹಾಗೆಯೇ ದಾದಿಯರೂ ಸಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬಗಳನ್ನು ತೊರೆದು ರೋಗಿಗಳ ನೆರವಿಗೆ ನಿಂತಿದ್ದಾರೆ. ಕೋವಿಡ್ಗೆ ತುತ್ತಾದವರ ತುಂಬ ಅತಂಕದಲ್ಲಿದ್ದು, ಅರ್ಧ ಆತ್ಮಸ್ಥೈರ್ಯವನ್ನ ಕಳೆದುಕೊಂಡು ಕುಗ್ಗಿರುತ್ತಾರೆ. ಅಂತಹ ಒಬ್ಬಂಟಿಯಾದವರ ಜೊತೆ ಮಾತನಾಡುವುದಕ್ಕೆ ಧೈರ್ಯ ತುಂಬುವುದಕ್ಕೆ ಯಾರಾದರು ಬೇಕು ಅನ್ನಿಸುತ್ತೆ. ಅಂತಹ ಭಯದ ಸಂದರ್ಭದಲ್ಲಿರುವ ಕೋವಿಡ್ ರೋಗಿಗಳ ಜೊತೆ ನರ್ಸ್ ಮಾತನಾಡುತ್ತ ಚಿಕಿತ್ಸೆ ನೀಡುತ್ತಾರೆ.
ಓದಿ:ವಾಹನಗಳ ಓಡಾಟಕ್ಕೆ ಬ್ರೇಕ್.. ಲಾಕ್‌ಡೌನ್ ಪರಿಹಾರ ಘೋಷಣೆಗೆ ಆಟೋ, ಟ್ಯಾಕ್ಸಿ ಚಾಲಕರ ಸಂಘ ಆಗ್ರಹ
ಕೋವಿಡ್ ಸೆಂಟರ್ನಲ್ಲಿ ಯಾವ ರೀತಿ ಪರಿಸ್ಥಿತಿ ಇರುತ್ತದೆ. ಭಯದ ನಡುವೆ ನರ್ಸ್ಗಳು ಯಾವ ರೀತಿ ಕೆಲಸ ನಿರ್ವಹಿಸುತ್ತಾರೆ ಎಂಬುದನ್ನ ಸ್ವತಃ ದಾದಿಯರೇ ವಿವರಿಸಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲಿ ನರ್ಸ್ಗಳು ರೋಗಿಗಳಿಗೆ ದೇವರಂತೆ ನೆರವಾಗುತ್ತಾ, ಪ್ರಾಣಾಪಾಯದಿಂದ ಪಾರು ಮಾಡುತ್ತಿದ್ದಾರೆ. ಮೇ 12 ರ ದಾದಿಯರ ದಿನಕ್ಕೆ 'ಈಟಿವಿ ಭಾರತ' ಮಾಧ್ಯಮ ಸಂಸ್ಥೆಯಿಂದ ನರ್ಸ್ಗಳ ಸೇವೆಗೊಂದು ದೊಡ್ಡ ಸಲಾಂ ಸಲ್ಲಿಸುತ್ತೇವೆ.