ಕರ್ನಾಟಕ

karnataka

ETV Bharat / state

ಗೋವಿಂದಪುರ ಪೊಲೀಸರ ಭರ್ಜರಿ ಬೇಟೆ: ಅಂತಾರಾಷ್ಟ್ರೀಯ ಡ್ರಗ್ಸ್​​ ಪೆಡ್ಲರ್ ಬಂಧನ! - Drug peddler arrest by police in bengalore

ಅಂತಾರಾಷ್ಟ್ರೀಯ ಡ್ರಗ್ಸ್​​ ಪೆಡ್ಲರ್ ಒಬ್ಬನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಸುಮಾರು 2.64 ಲಕ್ಷ ಮೌಲ್ಯದ 10 ಗ್ರಾಂ ಕೊಕೇನ್​ ಮತ್ತು 1.5 ಗ್ರಾಂ ಹೆರಾಯಿನ್​ ವಶಕ್ಕೆ ಪಡೆದಿದ್ದಾರೆ.

international-drug-peddler-arrested-by-govindapura-police
ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್

By

Published : Apr 20, 2021, 3:06 PM IST

ಬೆಂಗಳೂರು: ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಡ್ರಗ್ಸ್​​ ಪೆಡ್ಲರ್ ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತನಿಂದ 2.64 ಲಕ್ಷ ಮೌಲ್ಯದ 10 ಗ್ರಾಂ ಕೊಕೇನ್ ಮತ್ತು 1.5 ಗ್ರಾಂ ಹೆರಾಯಿನ್​ ವಶಕ್ಕೆ ಪಡೆದಿದ್ದಾರೆ.

ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್, ದ್ವಿಚಕ್ರ ವಾಹನ ಹಾಗೂ ಐನೂರು ನಗದು ವಶಕ್ಕೆ ಪಡೆದಿರುವ ಪೊಲೀಸರು, ಫೋಫನ ಚೇಯ್ಕನ (27) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ ಹಾಗೂ ಯಾವುದೇ ದಾಖಲಾತಿ ಪಡೆಯದೆ ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಓದಿ:ತಾತನ ನೆನಪಿಗೆ ಅರಳಿದ ಕಲೆ: ಅಕ್ಕಿ ‌ಕಾಳಿನಲ್ಲಿ ಶ್ರೀರಾಮ ನಾಮ ಜಪಿಸಿದ ಬಾಲಕಿ

ABOUT THE AUTHOR

...view details