ಕರ್ನಾಟಕ

karnataka

ETV Bharat / state

ಮಕ್ಕಳಲ್ಲಿ ಕ್ಯಾನ್ಸರ್: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರಿಂದ ವಿಶೇಷ ಜಾಗೃತಿ - International Children's Cancer Day

ಪ್ರತಿ ವರ್ಷ 0 ರಿಂದ 14 ವರ್ಷ ವಯಸ್ಸಿನ ಸುಮಾರು 2,06,362 ಮಕ್ಕಳಲ್ಲಿ ಕ್ಯಾನ್ಸರ್ ರೋಗ ಪತ್ತೆ ಆಗುತ್ತಿದೆ. ಸಾಮಾನ್ಯವಾಗಿ ಮಕ್ಕಳ ಕ್ಯಾನ್ಸರ್‌ಗಳ ಪೈಕಿ ಲ್ಯುಕೇಮಿಯಾಗಳು, ಲಿಂಫೋಮಾಗಳು ಮತ್ತು ಮಿದುಳಿನ ಕ್ಯಾನ್ಸರ್‌ಗಳು, ನ್ಯೂರೋಲ್ಲಾಸೊಮಾ ಮತ್ತು ವಿಲ್ಸ್ ಟ್ಯೂಮರ್‌ನಂತಹ ಘನ ಗೆಡ್ಡೆಗಳು ಸೇರಿವೆ.

international-childrens-cancer-day
ಕ್ಯಾನ್ಸರ್ ಪೀಡಿತ ಮಕ್ಕಳು

By

Published : Feb 15, 2022, 6:04 PM IST

Updated : Feb 15, 2022, 7:36 PM IST

ಬೆಂಗಳೂರು:ಕ್ಯಾನ್ಸರ್ ಇಂದಿಗೂ ಜನರಲ್ಲಿ ಭಯಭೀತಿ ಉಂಟು ಮಾಡುವ ರೋಗ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕ್ಯಾನ್ಸರ್ ರೋಗ ಪತ್ತೆಯಾಗುತ್ತೆ. ಕ್ಯಾನ್ಸರ್ ಆರಂಭದಲ್ಲೇ ಪತ್ತೆಯಾದರೆ ಗುಣಮುಖ ಮಾಡಬಹುದು. ಆದರೆ, ಬಹಳಷ್ಟು ಮಂದಿ ರೋಗದ ಅಂತಿಮ ಘಟ್ಟದಲ್ಲಿ ಬಂದು ತಪಾಸಣೆ ನಡೆಸುತ್ತಾರೆ. ಹೀಗಾಗಿ, ಕ್ಯಾನ್ಸರ್​ಗೆ ತುತ್ತಾಗುವವರು ಹೆಚ್ಚು. ಇಂದು ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನ ಆಚರಿಸಲಾಗುತ್ತೆ.

ಪ್ರಪಂಚದಾದ್ಯಂತ ಮಕ್ಕಳು ಮತ್ತು ಹದಿಹರೆಯದವರ ಸಾವಿಗೆ ಕ್ಯಾನ್ಸರ್​ವೊಂದು ಪ್ರಮುಖ ಕಾರಣ. ಪ್ರತಿ ವರ್ಷ 0 ರಿಂದ 14 ವರ್ಷ ವಯಸ್ಸಿನ ಸುಮಾರು 2,06,362 ಮಕ್ಕಳಲ್ಲಿ ಕ್ಯಾನ್ಸರ್ ರೋಗ ಪತ್ತೆ ಆಗುತ್ತಿದೆ. ಸಾಮಾನ್ಯವಾಗಿ ಮಕ್ಕಳ ಕ್ಯಾನ್ಸರ್‌ಗಳ ಪೈಕಿ ಲ್ಯುಕೇಮಿಯಾಗಳು, ಲಿಂಫೋಮಾಗಳು ಮತ್ತು ಮಿದುಳಿನ ಕ್ಯಾನ್ಸರ್‌ಗಳು, ನ್ಯೂರೋಲ್ಲಾಸೊಮಾ ಮತ್ತು ವಿಲ್ಸ್ ಟ್ಯೂಮರ್‌ನಂತಹ ಘನ ಗೆಡ್ಡೆಗಳು ಸೇರಿವೆ.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರಿಂದ ವಿಶೇಷ ಜಾಗೃತಿ

ಭಾರತದಲ್ಲಿ 30,444 ಪ್ರಕರಣಗಳು ಪ್ರತಿ ವರ್ಷವೂ ಪತ್ತೆಯಾಗುತ್ತಿವೆ. ಯಾವುದೇ ನಿಗದಿತ ಸಮಯದಲ್ಲಿ 91,254 ಮಕ್ಕಳ ಕ್ಯಾನ್ಸರ್ ಪ್ರಕರಣಗಳು ಪ್ರಚಲಿತದಲ್ಲಿ ಇರುವುದು ಕಂಡು ಬಂದಿದೆ. ದೆಹಲಿಯಲ್ಲಿ ಬಾಲಕರ ಪೈಕಿ ಪ್ರತಿ ದಶಲಕ್ಷ ಒಂದಕ್ಕೆ 203.1 ಮತ್ತು ಬಾಲಕಿಯರ ಪೈಕಿ ಪ್ರತಿ ದಶಲಕ್ಷ ಒಂದಕ್ಕೆ 125.4 ಅತಿ ಹೆಚ್ಚು ವಯಸ್ಸಿನ - ಹೊಂದಾಣಿಕೆಯ ಸಂಭವಿಸುವ ಪ್ರಮಾಣ (ಎಆರ್‌ ಆರ್) ವರದಿ ಆಗಿದೆ.

ಭಾರತದಲ್ಲಿನ ಎರಡೂ ಲಿಂಗಗಳಿಗೆ ಸಂಬಂಧಿಸಿದಂತೆ ಎಲ್ಲ ಮಕ್ಕಳ ಕ್ಯಾನ್ಸರ್‌ಗಳಲ್ಲಿ ಅರ್ಧದಷ್ಟು ಲ್ಯುಕೇಮಿಯಾ ಕಾರಣವಾಗಿದೆ. (ಶೇಕಡಾ. 46.1 ಬಾಲಕರಲ್ಲಿ ಮತ್ತು ಶೇಕಡಾ. 44.3 ಬಾಲಕಿಯರಲ್ಲಿ ), ಲಿಂಫೋಮಾ ಬಾಲಕರಲ್ಲಿ ಸಾಮಾನ್ಯ ಮಕ್ಕಳ ಕ್ಯಾನ್ಸರ್ ಆಗಿದೆ. (ಶೇ.16.4), ಆದರೆ, ಬಾಲಕಿಯರಲ್ಲಿ, ಮೂಳೆಯ ಕ್ಯಾನ್ಸರ್‌ ಗೆಡ್ಡೆ (ಶೇ.8.9) ಸಾಮಾನ್ಯ ಕ್ಯಾನ್ಸರ್ ಆಗಿದೆ.

ಈ ಕುರಿತು ಮಾತನಾಡಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ಡಾ. ರಾಮಚಂದ್ರ, ಕರ್ನಾಟಕದಲ್ಲಿ ‌87,304 ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ 1323 (ಶೇ.31) ಪ್ರಕರಣಗಳು ಮಕ್ಕಳ ಕ್ಯಾನ್ಸರ್ ಆಗಿದೆ. ಇದರಲ್ಲಿ 679 ಬಾಲಕರು ಮತ್ತು 644 ಬಾಲಕಿಯರು ಇದ್ದಾರೆ. ಬೆಂಗಳೂರಿನ ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ವ್ಯವಸ್ಥೆಯಲ್ಲಿ ಸರಾಸರಿ 192 ಪ್ರಕರಣಗಳು ದಾಖಲಾಗಿವೆ.

ಅದರಲ್ಲಿ 114 ಹುಡುಗರು ಮತ್ತು 78 ಪ್ರಕರಣಗಳು ಎಆರ್‌ಆರ್ 114.2 ಮತ್ತು 82.7 ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಬಾಲಕರು ಮತ್ತು ಬಾಲಕಿಯರಲ್ಲಿ ಕ್ರಮವಾಗಿ ಬಾಲಕಿಯರು, ಲ್ಯುಕೇಮಿಯಾ, ಬ್ರೈನ್ ಟ್ಯೂಮರ್, ಲಿಂಫೋಮಾಸ್ ಮತ್ತು ನ್ಯೂರೋಲ್ಲಾಸೊಮಾ ಎರಡೂ ಲಿಂಗಗಳಲ್ಲಿ ಪ್ರಮುಖ ವರ್ಗ ಅಥವಾ ವಿಧಗಳಾಗಿವೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಮಕ್ಕಳ ಕ್ಯಾನ್ಸರ್‌ನ ಒಟ್ಟು 758 ಪ್ರಕರಣಗಳು ದಾಖಲಾಗಿವೆ. ಅತ್ಯಂತ ಸಾಮಾನ್ಯವಾದ ಒಟ್ಟಾರೆ ಕ್ಯಾನ್ಸರ್‌ಗಳ ಪೈಕಿ ಶೇ.5ರಷ್ಟಿರುವ ಇದು ಲ್ಯುಕೇಮಿಯಾ ಕ್ಯಾನ್ಸರ್ ಆಗಿದೆ ಅಂತ ತಿಳಿಸಿದರು.

ವಯಸ್ಕರ ಕ್ಯಾನ್ಸರ್‌ಗೆ ಹೋಲಿಸಿದರೆ ಎಚ್ಚರಿಕೆ ಸೂಚನೆಗಳು ಕಾಣಿಸುವುದು ಅಪರೂಪವಾಗಿದ್ದು, ಹೆಮಟೊಲಿಂಫಾಯಿಡ್ ಕ್ಯಾನ್ಸರ್ ಗೆಡ್ಡೆಗಳ ಇರುವಿಕೆಯಲ್ಲಿ ಸಾಮಾನ್ಯ ರೋಗಲಕ್ಷಣಗಳು ಹೀಗಿರಲಿದೆ.

- ಕಾರಣವಿಲ್ಲದೇ ಜ್ವರ ಬರುವುದು ಮತ್ತು ಮೂಳೆ ನೋವು ಇರುವುದು, ಆಯಾಸ, ರಕ್ತಸಾವ್ರ ಆಗುವುದು ಅಥವಾ ಸುಲಭವಾದ ಮೂಗೇಟುಗಳಾಗುವುದು.
- ಮೆದುಳಿನ ಗೆಡ್ಡೆ ಹೊಂದಿರುವ ಮಕ್ಕಳಿಗೆ ತಲೆನೋವು ಬರುವುದು, ವಾಂತಿಯಾಗುವುದು.
- ಕೆಲವು ನರಗಳಿಗೆ ಸಂಬಂಧಿಸಿದ ರೋಗ ಲಕ್ಷಣಗಳು ಇದ್ದರೆ ಸಮತೋಲನ ನಷ್ಟವಾಗುವುದು, ನಡೆಯುವಾಗ ವಿಕಾರತೆ ಉಂಟಾಗುವುದು.
- ಘನ ಗೆಡ್ಡೆಗಳು ಉಂಟಾಗಿರುವ ಪ್ರಕರಣಗಳಲ್ಲಿ ರೋಗಲಕ್ಷಣಗಳು,ಮೂಲ ಅಂಗವನ್ನು ಅವಲಂಬಿಸಿ ತೂಕದಲ್ಲಿ ನಷ್ಟವಾಗುವುದು ಮತ್ತು ಊತವಾದಾಗ ಅದು ಹೆಚ್ಚುತ್ತಾ ಸಾಗುವುದು. ಅಸಾಮಾನ್ಯವಾದ ಗೆಡ್ಡೆ ಉಂಟಾಗಿರುವುದು. ಕುತ್ತಿಗೆಯಲ್ಲಿ ಊತ ಕಂಡು ಬರುವುದು ಅಥವಾ ಕಾರಣವಿಲ್ಲದೇ ದೇಹ ತೂಕದಲ್ಲಿ ಇಳಿಕೆ ಆಗುವುದು. ಸುಲಭವಾಗಿ ಪತ್ತೆಯಾಗದ ಗೆಡ್ಡೆಯು ರೆಟಿನೊಲ್ಲಾಮಾ ಆಗಿರಲಿದ್ದು, ತಪಾಸಣೆಯ ಸಮಯದಲ್ಲಿ ಇದು ಪತ್ತೆಯಾಗುತ್ತದೆ. ಅಂತಹ ಮಕ್ಕಳ ಕಣ್ಣಿನಲ್ಲಿ ಬೆಳಕು ಪ್ರತಿಫಲಿಸುವುದನ್ನು ಪೋಷಕರು ಗಮನಿಸಿದಾಗ ಅಥವಾ ಹಠಾತ್ತಾಗಿ ದೃಷ್ಟಿ ನಷ್ಟವಾಗಿ ಕಣ್ಣು ಕಾಣಿಸದಂತಾಗುತ್ತದೆ.

ಹೆಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ. ಇಂತೇಜಾರ್ ಮೆಹದಿ ಮಾತನಾಡಿದ್ದು, ಮಕ್ಕಳಿಗೆ ಕ್ಯಾನ್ಸರ್ ಅಂದಕ್ಷಣ ಅವರಿಗೂ ಬರುತ್ತಾ ಅಂತ ಅನ್ನಿಸುತ್ತೆ. ಮಕ್ಕಳಲ್ಲಿ ಕ್ಯಾನ್ಸರ್ ಕಂಡು ಬಂದರೆ ಮೇಜರಿಟಿ ಗುಣಮುಖ ಮಾಡಬಹುದು. ಪರಿಹರಿಸಲಾಗದ ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳನ್ನು ಯಾವಾಗಲೂ ಮಕ್ಕಳ ವೈದ್ಯರು ತಪಾಸಿಸಬೇಕು ಮತ್ತು ಆರಂಭಿಕ ಹಂತದಲ್ಲಿ ಮೌಲ್ಯಮಾಪನ ಮಾಡಬೇಕು.

ಯಾವುದೇ ಶಂಕಿತ ಕ್ಯಾನ್ಸರ್ ಗೆಡ್ಡೆ ಇದ್ದರೆ, ತಕ್ಷಣವೇ, ತಡಮಾಡದೇ ಮಕ್ಕಳ ಕ್ಯಾನ್ಸರ್‌ ಕೇಂದ್ರಕ್ಕೆ (ಪೀಡಿಯಾಟ್ರಿಕ್ ಅಂಕಾಲಾಜಿ ಸೆಂಟರ್‌) ಹೋಗಿ ತೋರಿಸುವಂತೆ ಶಿಫಾರಸು ಮಾಡಿ ಕಳುಹಿಸಬೇಕು.‌ ಪರಿಸ್ಥಿತಿಯು ಗಂಭೀರವಾಗಿದ್ದಾಗ ಶಿಫಾರಸು ಮಾಡಿ ಬೇರೆಡೆಗೆ ಕಳುಹಿಸುವ ಮುನ್ನ ಮಗುವಿನ ಪರಿಸ್ಥಿತಿಯನ್ನು ಮೊದಲು ಸ್ಥಿರವಾಗಿಸಬೇಕು ಎಂದು ತಿಳಿಸಿದರು.

ಓದಿ:ರಸ್ತೆ ಗುಂಡಿ ಪ್ರಕರಣದ ವಿಚಾರಣೆಗೆ ಗೈರಾದ ಬಿಬಿಎಂಪಿ ಎಂಜಿನಿಯರ್; ವಾರಂಟ್ ಹೊರಡಿಸಿದ ಹೈಕೋರ್ಟ್

Last Updated : Feb 15, 2022, 7:36 PM IST

ABOUT THE AUTHOR

...view details