ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕೆ ಇಂದು ತೆರೆಬಿದ್ದಿದೆ. ಮೇಳದಲ್ಲಿ ಒಟ್ಟು ಮೂರು ದಿನ ಬಿ2ಬಿ ಅಡಿ 139 ಸಭೆ ನಡೆದಿದ್ದು, ಒಟ್ಟು 68 ಮಾರುಕಟ್ಟೆದಾರರು ಹಾಗೂ 59 ಉತ್ಪಾದಕರು ಭಾಗವಹಿಸಿದ್ದರು. 201.91 ಕೋಟಿ ವೆಚ್ಚದಲ್ಲಿ ಒಟ್ಟು 43 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.
201 ಕೋಟಿ ರೂ, 43 ಒಡಂಬಡಿಕೆ: ಬಿ2ಬಿ ಸಭೆಯ ಭಾಗವಾಗಿ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಿಗೆ 100 ಕ್ಕೂ ಅಧಿಕ ಮಾರುಕಟ್ಟೆದಾರರು ನೋಂದಾಯಿಸಿದ್ದರು. ಮೇಳದ ಮೊದಲನೇ ದಿನ 27 ಬಿ2ಬಿ ಸಭೆಗಳನ್ನು ಆಯೋಜಿಸಲಾಗಿತ್ತು. ಇಲ್ಲಿ ಒಟ್ಟು 35.39 ಕೋಟಿಗಳಷ್ಟು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೇಳದ ಎರಡನೇ ದಿನ 86 ಸಭೆಗಳು ಜರುಗಿದ್ದು, ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಸಂಬಂಧಿಸಿದ 140.60 ಕೋಟಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೂರನೇ ದಿನ 22 ಸಭೆಗಳು ನಡೆದಿದ್ದು, ಒಟ್ಟು 25.89 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಒಟ್ಟು ಮೂರು ದಿನ ಬಿ2ಬಿ ಅಡಿ 139 ಸಭೆ ನಡೆದಿದ್ದು, 68 ಮಾರುಕಟ್ಟೆದಾರರು 59 ಉತ್ಪಾದಕರು ಭಾಗವಹಿಸಿದ್ದರು. ಒಟ್ಟು 201.91 ಕೋಟಿ ವೆಚ್ಚದಲ್ಲಿ 43 ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಟಾಪ್ 5 ಒಡಂಬಡಿಕೆ ವಿವರ : ದಾವಣಗೆರೆ ಒಕ್ಕೂಟ ಮತ್ತು ಸ್ವಯಂಬು ಇಂಪೆಕ್ಸ್ ನಡುವೆ 15 ಕೋಟಿ, ಧರ್ಮಸ್ಥಳ ಟ್ರಸ್ಟ್ ಮತ್ತು ಸಹಜ ಸಮೃದ್ಧ ಸಾವಯವ ಉತ್ಪನ್ನ ಸಂಸ್ಥೆ ನಡುವೆ 15 ಕೋಟಿ, ಹಾಸನದ ಅವನಿ ಆರ್ಗ್ಯಾನಿಕ್ ಮತ್ತು ಹೈದರಾಬಾದ್ ನ ಲಿಂಕ್ ಆರ್ಗ್ಯಾನಿಕ್ ನಡುವೆ 10 ಕೋಟಿ, ಬೆಂಗಳೂರಿನ ಸನ್ ಅಗ್ರಿ ಡೆವೆಲಪ್ಮೆಂಟ್ ಮತ್ತು ಇಟಲಿಯ ವಿಎಂಪೈರ್ ಓವರ್‌ಸೀಸ್ ನಡುವೆ 7 ಕೋಟಿ, ವಿಜಯಪುರ ಒಕ್ಕೂಟ ಮತ್ತು ಬೆಂಗಳೂರಿನ ಅಮನಿ ಗ್ರೂಪ್ ನಡುವೆ 5 ಕೋಟಿ ಒಡಂಬಡಿಕೆ ನಡೆದಿದೆ.