ಕರ್ನಾಟಕ

karnataka

ETV Bharat / state

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಮನಸೆಳೆದ ಸಿರಿಧಾನ್ಯ ಮಾರಾಟ, ಬಹುವಿಧದ ಭಕ್ಷ್ಯ ಖಾದ್ಯದ ಮಳಿಗೆಗಳು..! - ಸಿರಿಧಾನ್ಯ ಸಿರಿವಂತರ ಆಹಾರ

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ 2023 - ಸಿರಿಧಾನ್ಯ ಮೇಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ - ಮನಸೆಳೆದ ಸಿರಿಧಾನ್ಯದಿಂದ ತಯಾರಿಸಿದ ಬಹುವಿಧದ ಭಕ್ಷ್ಯ

international cereal fair
ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ

By

Published : Jan 20, 2023, 5:57 PM IST

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ

ಬೆಂಗಳೂರು: ಸಿರಿಧಾನ್ಯ ಆರೋಗ್ಯವಂತ ಸಮಾಜದ ಆಧಾರ ಸ್ತಂಭ. ಇನ್ನು ರೈತರಿಗೆ ಮಾರುಕಟ್ಟೆ ಕಲ್ಪಿಸಲು, ಸಾವಯವ ಮತ್ತು ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಇಂದಿನಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ -2023 ರನ್ನೂ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸನಿಯಲ್ಲಿ ಕೃಷಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಸಿರಿಧಾನ್ಯದ ಬಹುವಿಧದ ಭಕ್ಷ್ಯ:ಪ್ರತಿದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯವನ್ನು ಸೇರಿಸಿಕೊಳ್ಳುವ ನಿರ್ಣಯದೊಡನೆ ಈ ವರ್ಷವನ್ನೂ ಪ್ರಾರಂಭಿಸಿ. ಸಿರಿಧಾನ್ಯ ಮತ್ತು ಸಾವಯವ 2023 ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಭೇಟಿ ನೀಡಿ, ಸಿರಿಧಾನ್ಯಗಳಿಂದ ತಯಾರಿಸಲಾಗಿರುವ ಬಹುವಿಧದ ಭಕ್ಷ್ಯಗಳನ್ನು ವೀಕ್ಷಿಸಿ, ಖರೀದಿಸಬಹುದು.

ಸಿರಿಧಾನ್ಯ ಮಳಿಗೆ ಆಕರ್ಷಣೆ:ನವೋದ್ಯಮಗಳಿಗೆ ಸಿರಿಧಾನ್ಯದ ಉಪ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ. ರಾಜ್ಯದ ಪ್ರಮುಖ ತೃಣಧಾನ್ಯ ಉತ್ಪನ್ನಗಳ ಮಾರಾಟ ಮತ್ತಿತರ ವಿಶೇಷತೆಗಳು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ರಾಜ್ಯದ ಹಲವೆಡೆ ಬೆಳೆಯುತ್ತಿರುವ ಹಾರಕ. ಸಾಮೆ, ಊದಲು, ಕೊರಲು, ಬರಗು, ನವಣೆಯಂತಹ ವೈವಿಧ್ಯಮಯ ಸಿರಿಧಾನ್ಯಗಳ ಮಾರಾಟ ಮತ್ತು ಖಾದ್ಯ ಮಳಿಗೆಗಳನ್ನು ಆಕರ್ಷಣೀಯವಾಗಿ ರೂಪಿಸಲಾಗಿದೆ.

ಸಿರಿಧಾನ್ಯ ಸಿರಿವಂತರ ಆಹಾರ: ಹಿಂದೆ ಸಿರಿಧಾನ್ಯ ಬಡವರ ಆಹಾರ ಎಂದಾಗಿತ್ತು. ಈಗ ಸಿರಿಧಾನ್ಯ ಎನ್ನುವುದು ಸಿರಿವಂತರ ಆಹಾರವಾಗಿದೆ. ಇದಕ್ಕೆ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ಪ್ರಮುಖ ಕಾರಣವಾಗಿದೆ. ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರತಿ ಹೆಕ್ಟೇರ್​ಗೆ 10 ಸಾವಿರ ಪ್ರೋತ್ಸಾಹ ಧನ ಸರ್ಕಾರ ನೀಡುತ್ತಿದೆ. ಸಿರಿಧಾನ್ಯ ಬಳಕೆ ಹೆಚ್ಚುತ್ತಿದ್ದು, ಒಂದು ಕಾಲದಲ್ಲಿ ಫುಡ್ ಸೆಕ್ಯೂರಿಟಿ ಬಗ್ಗೆ ಗಮನಕೊಡುತ್ತಿದ್ದೆವು. ಈಗ ನ್ಯೂಟ್ರಿಷಿಯನ್ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಪ್ರಸಕ್ತ ಬೆಂಗಳೂರಿನ 80 ಹೊಟೇಲ್​ಗಳಲ್ಲಿ ಸಿರಿಧಾನ್ಯ ಪೂರೈಕೆ ಆಗುತ್ತಿದೆ. ರೈತ ಮಕ್ಕಳ ಶಿಕ್ಷಣ ಕಲಿಕೆಗೆ ವಿಶ್ವವಿದ್ಯಾಲಯದಲ್ಲಿ ರಿಸರ್ವೇಶನ್ ಏರಿಕೆಯಾಗಿದೆ.

2023 ಸಿರಿಧಾನ್ಯ ವರ್ಷ: 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದ್ದಾರೆ.

ಸಿರಿಧಾನ್ಯ ಮಹತ್ವ ಸಾರುವ ಚರ್ಚಾಗೋಷ್ಠಿಗಳು: ಮೇಳದಲ್ಲಿ ಚರ್ಚಾಗೋಷ್ಠಿಗಳು, ಸಾವಯವ ಮತ್ತು ಸಿರಿಧಾನ್ಯಗಳ ಪ್ರದರ್ಶನ ಮಳಿಗೆಗಳು, ಸಿರಿಧಾನ್ಯ ಉತ್ಪನ್ನಗಳು, ಸಭೆ, ಕಾರ್ಯಾಗಾರಗಳು ನಡೆಯಲಿವೆ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಮೇಳಕ್ಕೆ ಭೇಟಿ ನೀಡಿದರೆ, ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳು ಭವಿಷ್ಯದ ಪ್ರಜ್ಞಾವಂತ ಆಹಾರ, ಆರೋಗ್ಯಕರ ಜೀವನಶೈಲಿಗೆ ಸಿರಿಧಾನ್ಯಗಳು ಅತ್ಯುಪಯುಕ್ತ ಆಹಾರವಾಗಿ ರೂಪಿಸಿಕೊಳ್ಳಬಹುದು.

ಸಿರಿಧಾನ್ಯ ಪೌಷ್ಟಿಕದ ಕಣಜ:: ಪೌಷ್ಟಿಕಾಂಶಗಳಾದ ಕಬ್ಬಿಣ, ಸತು, ಪೋಲಿಕ್ ಆಮ್ಲ, ಕ್ಯಾಲ್ಸಿಯಂ ಇತ್ಯಾದಿ ಕೊರತೆಯನ್ನು ಹಾಗೆಯೇ ಮಧುಮೇಹ, ಹೃದ್ರೋಗ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿರುತ್ತವೆ. ಒಟ್ಟು ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಸೇರಿದಂತೆ 300 ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ರೈತರು ಮತ್ತು ಸಾರ್ವಜನಿಕರನ್ನು ಆಕರ್ಷಿಸಲಿವೆ. ವಿಶೇಷವಾಗಿ ಮೇಳದಲ್ಲಿ ಸಿರಿಧಾನ್ಯ ಬೆಳೆಗಾರರು, ಗ್ರಾಹಕರು, ರಫ್ತುದಾರರು, ಸಂಪರ್ಕ ಕಲ್ಪಿಸುವ ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಸಿರಿಧಾನ್ಯ ಸಾವಯವ ಆಹಾರ: ಸಿರಿಧಾನ್ಯಗಳು ಮಣ್ಣು ಮತ್ತು ನೀರನ್ನು ಕಡಿಮೆ ಬೇಡುವುದರಿಂದಾಗಿ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ಇವುಗಳಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಗ್ಲುಟಿನಸ್ ಮತ್ತು ಆಮ್ಲಕಾರಕವಲ್ಲದ ಧಾನ್ಯಗಳಾಗಿವೆ. ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ಅಗತ್ಯವಾದ ಅಮೈನೋ ಆಸಿಡ್ಗಳು, ವಿಟಮಿನ್​ಗಳು ಮತ್ತು ಮಿನರಲ್​ಗಳು, ನೈಸರ್ಗಿಕವಾಗಿವೆ. ಇವು ಗ್ಲುಟೆನ್ಮುಕ್ತ, ಕ್ಷಾರೀಯ, ಅಲರ್ಜಿನ್ ರಹಿತವಾಗಿದ್ದು ಸುಲಭವಾಗಿ ಜೀರ್ಣವಾಗುತ್ತವೆ. ಕೊಲೆಸ್ಟ್ರಾಲ್​, ಮಧುಮೇಹ ಮತ್ತು ತೂಕ ಇಳಿಕೆಗೆ ಸಿರಿಧಾನ್ಯಗಳು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.

ಇದನ್ನೂಓದಿ:ಬಜೆಟ್ ಅಧಿವೇಶನ ದಿನಾಂಕ ನಿಗದಿ: ಫೆ. 17ಗೆ ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ

ABOUT THE AUTHOR

...view details