ಕರ್ನಾಟಕ

karnataka

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ; ದಾಖಲೆ ಮಟ್ಟದ ಮಾದಕ ವಸ್ತು ನಾಶ

ರಾಜ್ಯದ ವಿವಿಧೆಡೆ ಸ್ಥಳೀಯ ಪೊಲೀಸರೊಂದಿಗೆ ಡ್ರಗ್ ತಯಾರಿಕೆ ಅಡ್ಡೆ ಮೇಲೆ ದಾಳಿ ಮಾಡಿದ ಎಸ್​ಸಿಬಿ ಅಧಿಕಾರಿಗಳು ಎನ್‌ಡಿಪಿಎಸ್ ಕಾಯ್ದೆಯಡಿ ಅಪಾರ ಪ್ರಮಾಣದ ಗಾಂಜಾ ಹಾಗೂ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ‌ ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ಅಲ್ಲಲ್ಲಿ ನಾಶಗೊಳಿಸಲಾಯಿತು‌..

By

Published : Jun 26, 2021, 8:38 PM IST

Published : Jun 26, 2021, 8:38 PM IST

International Anti Drug Day; NCB Officers Attack On Drug Industry
ದಾಖಲೆ ಮಟ್ಟದ ಮಾದಕ ವಸ್ತು ನಾಶ

ಇಂದು ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ (International Anti Drug Day 2021). ಹೀಗಾಗಿ, ಕಳೆದ 12 ತಿಂಗಳಲ್ಲಿ ಸೀಜ್​ ಮಾಡಿರುವ 50 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಮಾದಕ ವಸ್ತು ನಾಶ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿ ಬಸವರಾಜ್​ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಹಲವಡೆ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ವಿವಿಧ ಅಧಿಕಾರಿಗಳ ಸಮಕ್ಷಮ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ವತಿಯಿಂದ ನಾಶಗೊಳಿಸಲಾಯಿತು‌.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಬೆಂಗಳೂರು : ಆಲ್ಪಾಜೋಲಮ್ ಡ್ರಗ್ ತಯಾರಿಕಾ ಅಡ್ಡೆ ಮೇಲೆ ಬೆಂಗಳೂರು ವಲಯ ಎಸ್​ಸಿಬಿ ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಎಸ್​ಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ 91 ಕೆಜಿ ಆಲ್ಪಾಜೋಲಮ್ ಹಾಗೂ ₹62 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

ಆಲ್ಪಾಜೋಲಮ್ ನಿಷೇಧಿತ ಮಾದಕ ವಸ್ತುವಾಗಿದೆ. ಕೋಲಾರ ಕೈಗಾರಿಕ ಪ್ರದೇಶದಲ್ಲೂ ಕೂಡ ಎಸ್​ಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಕೋಲಾರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಬೀದರ್ ಎರಡು ಕಡೆಗಳಲ್ಲಿ ಎಸ್​ಸಿಬಿ ದಾಳಿ ನಡೆಸಿದೆ. ಆಲ್ಪಾಜೋಲಮ್ ಪೌಡರ್‌ನ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೈದರಾಬಾದ್‌ನ ಎನ್ ವಿ ರೆಡ್ಡಿ ಎಂಬಾತ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ. ಇನ್ನು, ಕಾರ್ಖಾನೆ ಮೇಲೆಯೂ ದಾಳಿ ನಡೆದಿದೆ.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಬೀದರ್ ಫ್ಯಾಕ್ಟರಿಯಲ್ಲಿ ಡ್ರಗ್ ಉತ್ಪಾದನೆಯಾಗ್ತಿತ್ತು. ಜೊತೆಗೆ ಎನ್ ವಿ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ, ಈ ವೇಳೆ 62 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಎಸ್.ಭಾಸ್ಕರ್ ಹಾಗೂ ರೆಡ್ಡಿ ಡ್ರಗ್ಸ್​ನಲ್ಲಿ ಆಲ್ಪಾಜೋಲಮ್ ಡ್ರಗ್ ಮ್ಯಾನುಫ್ಯಾಕ್ಟರ್ ಮಾಡುತ್ತಿದ್ದರು. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈ ವಿ ರೆಡ್ಡಿ, ಎಸ್.ಮೆನನ್, ಎನ್ ವಿ ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವರನ್ನ ವಶಕ್ಕೆ ಪಡೆಯಲಾಗಿದೆ.‌

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಬೆಳಗಾವಿ ಜಿಲ್ಲೆಯಲ್ಲಿ 61 ಲಕ್ಷ ‌ಮೌಲ್ಯದ ಮಾದಕ ವಸ್ತು ನಾಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಪ್ತಿ ಪಡಿಸಿಕೊಳ್ಳಲಾಗಿದ್ದ ₹61 ಲಕ್ಷ ‌ಮೌಲ್ಯದ ಮಾದಕವಸ್ತುಗಳನ್ನು ಇಂದು ನಾಶ ಪಡಿಸಲಾಯಿತು. ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ‌ ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ವತಿಯಿಂದ ನಾಶಗೊಳಿಸಲಾಯಿತು‌. ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದಲ್ಲಿರುವ ಗ್ರೀಮ್ ಮ್ಯಾನೇಜ್ಮೆಂಟ್ ಪ್ರೈ.ಲಿ‌ ಕಾರ್ಖಾನೆ ಸ್ಥಳದಲ್ಲಿ ನಿಯಮಾನುಸಾರ ಮಾದಕ ವಸ್ತುವನ್ನು ನಾಶಪಡಿಸಲಾಯಿತು.

ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆಯುತ್ತಿದ್ದ ಹಾಗೂ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡಿದ್ದ ಗಾಂಜಾವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿಯ ಅನುಮತಿ ಪಡೆದು ಇಂದು ಮುರಗೋಡ ಮೊಲೀಸ್ ಠಾಣಾ ವ್ಯಾಪಿಯಲ್ಲಿ ನಾಶ ಮಾಡಲಾಯಿತು.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಒಟ್ಟೂ 126 ಪ್ರಕರಣಗಳಲ್ಲಿ 755 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 58.28 ಲಕ್ಷ ರೂ., 3 ಪ್ರಕರಣಗಳಲ್ಲಿ 31.4 ಕಿಲೋ ಪಾಪ್ಪಿ ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 2.73 ಲಕ್ಷ ರೂ., ಒಟ್ಟು 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ 637 ಕೆಜಿ ಗಾಂಜಾ ಭಸ್ಮ

ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ವಿವಿಧ ಪೊಲೀಸ್ ಠಾಣೆಗಳ ಪ್ರಕರಣಗಳಲ್ಲಿ ವಶಪಡಿಸಿಕೊಂಡ ರೂ. 29,30,310/- ಅಂದಾಜು ಮೌಲ್ಯದ ಒಟ್ಟು 637 ಕೆಜಿ ಮಾದಕ ವಸ್ತು ಗಾಂಜಾವನ್ನು ಇಂದು ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು, ಪರಿಸರ ಅಧಿಕಾರಿಗಳ ಸಮಕ್ಷಮ ಮಾಚೇನಹಳ್ಳಿಯ M/s Shushruta Bio-Medical Waste Management Societyಯ Common Bio-Medical Waste Treatment and Disposal Facilityಯಲ್ಲಿ ಗಾಂಜಾವನ್ನು ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಡಿವೈಎಸ್ಪಿ ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಕೊಪ್ಪಳ ಜಿಲ್ಲೆಯಲ್ಲಿಯೂ ವಿಲೇವಾರಿ

ಜಿಲ್ಲೆಯಲ್ಲಿಯೂ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಮಾದಕ ವಸ್ತುಗಳನ್ನು ತಾಲೂಕಿನ ಹಳೇ ಕುಮ್ಮಟ ಗ್ರಾಮದ ಬಳಿ ಇರುವ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿಯಮಾನುಸಾರ ಇಂದು ವಿಲೇವಾರಿ ಮಾಡಲಾಯಿತು. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್, ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಿನ್ನೆಲೆ ಇಂದು ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳೇ ಕುಮ್ಮಟ ಗ್ರಾಮದ ಬಳಿ ಇರುವ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇಂದು 118 ಕೆಜಿ ಗಾಂಜಾ ಮತ್ತು ಅಫೀಮ್​ಅನ್ನು ನಿಯಮಾನುಸಾರ ವಿಲೇವಾರಿ ಮಾಡಲಾಯಿತು. ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 4 ವರ್ಷದಲ್ಲಿನ ಒಟ್ಟು 14 ಪ್ರಕರಣಗಳಿಗೆ ಸಂಬಂಧಿಸಿದ 118 ಕೆಜಿ ಗಾಂಜಾ, ಅಫೀಮ್​ಅನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಬೀದರ್: 62 ಲಕ್ಷ ನಗದು, 91 ಕೆ.ಜಿ ಡ್ರಗ್ಸ್ ಪತ್ತೆ

ಬೀದರ್​ನಕೈಗಾರಿಕಾ ವಲಯದಲ್ಲಿ ಅಕ್ರಮವಾಗಿ ಡ್ರಗ್ಸ್ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಎಸ್​ಸಿಬಿಯ ಬೆಂಗಳೂರು ವಿಭಾಗದ ತಂಡ ದಾಳಿ ನಡೆಸಿದೆ. ನಗರದ ಕೊಳಾರ ಕೈಗಾರಿಕಾ ಪ್ರದೇಶದ ಎನ್.ವಿ ರೆಡ್ಡಿ ಮಾಲೀಕತ್ವದ ಡ್ರಗ್ ಪ್ರೈ.ಲಿ ಕಂಪನಿ ಮೇಲೆ ದಾಳಿ ನಡೆಸಿದ ತಂಡ 91 ಕೆಜಿ ಆಲ್ಪಾಜೋಲಮ್ ಡ್ರಗ್ಸ್ ಹಾಗೂ 62 ಲಕ್ಷ ರೂ. ನಗದು ಜಪ್ತಿ ಮಾಡಡಿಕೊಂಡಿದೆ. ಎಸ್​ಸಿಬಿ ವಲಯಾಧಿಕಾರಿ ಅಮೀತ್ ಗವಾಟೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ನ್ಯೂಟೌನ್ ಪೊಲೀಸರು ಜತೆಯಲ್ಲಿದ್ದರು.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಡ್ರಗ್ಸ್ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು 23.5 ಲಕ್ಷ ಮೌಲ್ಯದ ಸುಮಾರು 157 ಕೆಜಿ ಗಾಂಜಾ ಸೊಪ್ಪನ್ನು ನಾಶ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆಯ ಅಂಗವಾಗಿ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ. ಜಿಲ್ಲಾ ಎಸ್ಪಿ ಅಕ್ಷಯ್ ಅವರ ನೇತೃತ್ವದಲ್ಲಿ ಈ ಎಲ್ಲ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ. ಹಾಸನ ಜಿಲ್ಲೆಯ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವಂತಹ ಎಲ್ಲ ಪೊಲೀಸ್ ಠಾಣೆಯ ವಿವಿಧ ಭಾಗದಲ್ಲಿ ಇದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಎಲ್ಲಾ ಮಾದಕ ವಸ್ತುಗಳನ್ನು ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನಾಶ ಮಾಡಲಾಗಿದೆ. ಈ ವೇಳೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಹುಬ್ಬಳ್ಳಿ: ಜಪ್ತಿ ಮಾಡಿದ್ದ ಗಾಂಜಾ ಹಾಗೂ ಮಾದಕ ವಸ್ತು ನಾಶ

ನ್ಯಾಯಾಲಯದ ಆದೇಶದ ಮೇರೆಗೆ 2020-21ರಲ್ಲಿ ಜಪ್ತಿ ಮಾಡಿದ್ದ ಗಾಂಜಾ ಹಾಗೂ ಮಾದಕ ವಸ್ತುಗಳನ್ನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಇಂದು ತಾರಿಹಾಳದ ಹೊರವಲಯದಲ್ಲಿ ನಾಶಪಡಿಸಿದರು‌‌‌. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 2 ಕ್ವಿಂಟಾಲ್ 34 ಕೆಜಿ 750 ಗ್ರಾಂ ಗಾಂಜಾ ಮತ್ತು ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿತ್ತು. ಜೊತೆಗೆ ಇಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆಯ ಅಂಗವಾಗಿ ಡಿಸಿಪಿ ಕೆ.ರಾಮರಾಜನ್ ಹಾಗೂ ಡಿಸಿಪಿ ಆರ್ ಬಿ ಬಸರಗಿ ಸಮ್ಮುಖದಲ್ಲಿ ನಾಶಪಡಿಸುವ ಮೂಲಕ ಯುವಕರಿಗೆ ಜಾಗೃತಿ ಜೊತೆಗೆ ತಿಳಿ ಹೇಳುವ ಉದ್ದೇಶದಿಂದ ನಾಶ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ನೆಲಮಂಗಲ: 50 ಕೋಟಿ ಮೌಲ್ಯದ ಮಾದಕ ವಸ್ತು ನಾಶ

ನೆಲಮಂಗಲದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆಯ ಅಂಗವಾಗಿ ರಾಜ್ಯ ಪೊಲೀಸರು ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ರಾಜ್ಯದಲ್ಲಿ ಕಳೆದೆರಡು ವರ್ಷದಿಂದ ವಶಪಡಿಸಿಕೊಂಡ ಬರೋಬ್ಬರಿ 50 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶಕ್ಕೆ ಮುಂದಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಬೆಂಗಳೂರು ನಗರ ಮತ್ತು ಜಿಲ್ಲೆ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಕೆಜಿಎಫ್ ಜಿಲ್ಲೆಗಳ ವ್ಯಾಪ್ತಿಗೆ ಬರುವ ಪೊಲೀಸ್ ಇಲಾಖೆಯಿಂದ NDPS ಕಾಯ್ದೆ ಅಡಿಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಸುಮಾರು 50.23 ಕೋಟಿ ಮೌಲ್ಯದ 7 ಟನ್‌ನಷ್ಟು ತೂಕದ ಗಾಂಜಾ, ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, ಕೊಕೇನ್‌ನಂತಹ ಒಟ್ಟು 12 ಪ್ರಕಾರದ ಮಾದಕ ವಸ್ತುಗಳನ್ನ ವಿಲೇವಾರಿ ಮಾಡಿ ನಾಶ ಪಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ದಾಖಲೆ ಮಟ್ಟದ ಮಾದಕ ವಸ್ತು ನಾಶ

ಅತಿ ಹೆಚ್ಚು ಡ್ರಗ್ ಸೀಜ್ ಮಾಡಿದ ಪಟ್ಟಿ

ಎಲ್ಲ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಡ್ರಗ್ ಸೀಜ್ ಮಾಡಿದ ಪಟ್ಟಿಯಲ್ಲಿದೆ. ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳ ವಿರುದ್ಧದ ಹೋರಾಟ ಇನ್ನಷ್ಟು ತೀವ್ರ ಸ್ವರೂಪದಲ್ಲಿ ನಡೆಯಲಿದೆ ಎಂದು ರಾಜ್ಯ ಗೃಹ ಸಚಿವರಾಗಿರುವ ಬಸವರಾಜ್​ ಬೊಮ್ಮಾಯಿ ಸ್ಪಷ್ಟಪಡಿಸಿದರು.

ABOUT THE AUTHOR

...view details