ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಚ್ಎಎಲ್ ನಡುವೆ ಅಕ್ಟೋಬರ್ 10 ರಿಂದ ಚಾಪರ್ ಸೇವೆ ಪ್ರಾರಂಭವಾಗಲಿದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಇಲ್ಲದೇ ಕೇವಲ 12 ನಿಮಿಷಗಳ ಪ್ರಯಾಣ ಅಷ್ಟೇ.
ಕೆಂಪೇಗೌಡ ಟು ಹೆಚ್ಎಎಲ್ ನಡುವೆ ಹೆಲಿಕ್ಯಾಪ್ಟರ್ ಸೇವೆ: ಟ್ರಾಫಿಕ್ ಕಿರಿಕಿರಿ ಇಲ್ಲದೇ 12 ನಿಮಿಷಗಳ ಪ್ರಯಾಣ - ಹೆಲಿಕ್ಯಾಪ್ಟರ್ ನಲ್ಲಿ 12 ನಿಮಿಷಗಳ ಪ್ರಯಾಣ
ಸೋಮ ದಿಂದ ಶುಕ್ರವಾರದ ವರೆಗೂ ದಿನಕ್ಕೆರಡು ಹೆಲಿಕ್ಯಾಪ್ಟರ್ ಸೇವೆ ಲಭ್ಯವಿದ್ದು, ಮೊದಲ ಹೆಲಿಕ್ಯಾಪ್ಟರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:30ಕ್ಕೆ ಹೊರಟು ಬೆಳಗ್ಗೆ 9:00 ಕ್ಕೆ ಹೆಚ್ ಎಎಲ್ ತಲುಪಲಿದೆ. ಎರಡನೇ ಹೆಲಿಕ್ಯಾಪ್ಟರ್ ಮಧ್ಯಾಹ್ನ 4:15 ಕ್ಕೆ ಹೊರಟು ಮಧ್ಯಾಹ್ನ 4:45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ಬ್ಲೇಡ್ ಇಂಡಿಯಾ ಕಂಪನಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಚ್ ಎಎಲ್ ಏರ್ ಪೋರ್ಟ್ ನಡುವೆ ಹೆಲಿಕ್ಯಾಪ್ಟರ್ ಸೇವೆಯನ್ನು ಆಕ್ಟೋಬರ್ 10 ರಿಂದ ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದ ವರೆಗೂ ದಿನಕ್ಕೆ ಎರಡು ಹೆಲಿಕ್ಯಾಪ್ಟರ್ ಸೇವೆ ಲಭ್ಯವಿದ್ದು, ಮೊದಲ ಹೆಲಿಕ್ಯಾಪ್ಟರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:30ಕ್ಕೆ ಹೊರಟು ಬೆಳಗ್ಗೆ 9:00 ಕ್ಕೆ ಹೆಚ್ ಎಎಲ್ ತಲುಪಲಿದೆ. ಎರಡನೇ ಹೆಲಿಕ್ಯಾಪ್ಟರ್ ಮಧ್ಯಾಹ್ನ 4:15 ಕ್ಕೆ ಹೊರಟು ಮಧ್ಯಾಹ್ನ 4:45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ಇದನ್ನು ಓದಿ:ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್: ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದ ಆಕಾಶ್ ಏರ್