ಕರ್ನಾಟಕ

karnataka

ETV Bharat / state

ದುಷ್ಟ ಶಕ್ತಿಗಳ‌ ಮಟ್ಟಹಾಕುವ ಐಎಸ್​ಡಿ ತಂಡ ಪರಿಶೀಲಿಸಿದ ಎಡಿಜಿಪಿ ಭಾಸ್ಕರ್​ರಾವ್ - Bangaluru latest news

ಸದ್ಯ ನಂದಿ ಬೆಟ್ಟದ ಬಳಿಯಿರುವ ಮೈಗಾನಹಳ್ಳಿ ಬಳಿ ಇರುವ ಕೈಗಾರಿಕಾ ಭದ್ರತಾ ಪಡೆ ಹಾಗೂ ಕೌಂಟರ್ ಟೆರರಿಸಂ ವಿಭಾಗದ ಬಗ್ಗೆ ಪರಿಶೀಲನೆ ನಡೆಸಿರುವ ಭಾಸ್ಕರ್ ರಾವ್ ಸದ್ಯ ಇರುವ ಶಸ್ತ್ರಾಸ್ತ್ರಗಳು, ಸಿಬ್ಬಂದಿ ಎಷ್ಟಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Internal Security Force From Inactive Commissioner Bhaskar Rao
ಇಂಟರ್ನಲ್​ ಸೆಕ್ಯೂರಿಟಿ ಡಿವಿಜನ್​ಗೆ ಭೇಟಿ ನೀಡಿದ ನಿರ್ಗಮಿತ ಕಮಿಷನರ್ ಭಾಸ್ಕರ್​ರಾವ್

By

Published : Aug 11, 2020, 4:44 PM IST

ಬೆಂಗಳೂರು: ಸಮಾಜದಲ್ಲಿ ನಡೆಯುವ ದುಷ್ಟ ಶಕ್ತಿಗಳ‌ ಮಟ್ಟ ಹಾಕಲೆಂದೇ ಇರುವ ಆಂತರಿಕ ಭದ್ರತಾ ವಿಭಾಗಕ್ಕೆ ಸದ್ಯ ಭಾಸ್ಕರ್​ರಾವ್ ಅವರು ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರ ಸ್ವೀಕರಿಸಿದ ಮರುದಿನವೇ ಭಾಸ್ಕರ್​ರಾವ್ ಇಂಟರ್ನಲ್​ ಸೆಕ್ಯೂರಿಟಿ ಡಿವಿಜನ್​ನಲ್ಲಿರುವ ಎಲ್ಲಾ ವಿಂಗ್​ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇಂಟರ್ನಲ್​ ಸೆಕ್ಯೂರಿಟಿ ಡಿವಿಜನ್​ಗೆ ಭೇಟಿ ನೀಡಿದ ಎಡಿಜಿಪಿ ಭಾಸ್ಕರ್​ರಾವ್

ದೇಶ ಹಾಗೂ ರಾಜ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಆಂತರಿಕಾ ಭದ್ರತಾ ಪಡೆಯನ್ನ 2008ರಲ್ಲಿ ಸ್ಥಾಪಿಸಿ ರಾಜ್ಯ ಸರ್ಕಾರ ಅದಕ್ಕೆ ಬೇಕಾದ ವಿಂಗ್ಸ್ ರಚಿಸಲು ಅನುಮತಿ ಕೊಟ್ಟಿತ್ತು. ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್, ಭಯೋತ್ಪಾದಕ ನಿಗ್ರಹ ದಳ, ಕೌಂಟರ್ ಟೆರರಿಸಂ, ಆಂತರಿಕ ಭದ್ರತೆ, ಕೈಗಾರಿಕಾ ಭದ್ರತಾ ಪಡೆ ಹೀಗೆ ಒಟ್ಟು 6 ವಿಂಗ್​ಗಳಿವೆ. ಈ ವಿಂಗ್ ವಿಮಾನ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣ ಕೆಲ ಸೂಕ್ಷ್ಮ ಪ್ರದೇಶಗಳ ಭದ್ರತೆ ಜೊತೆಗೆ ರಾಜ್ಯದಲ್ಲಿ ಯಾವುದೇ ಸಮಾಜಘಾತುಕ ಘಟನೆ ಸಂಭವಿಸದಂತೆ ನೋಡಿಕೊಳ್ಳುವುದು ಈ ವಿಭಾಗದ ಜವಾಬ್ದಾರಿಯಾಗಿದೆ. ಸದ್ಯ ಅಧಿಕಾರ ವಹಿಸಿಕೊಂಡ ಭಾಸ್ಕರ್​ರಾವ್​ಗೆ ಆಂತರಿಕಾ ಭದ್ರತಾ ವಿಭಾಗ ಹೊಸದೇನಲ್ಲ. ಸುಮಾರು ವರ್ಷಗಳ ಹಿಂದೆ ಐಜಿಯಾಗಿ ಕಾರ್ಯ ನಿರ್ವಹಿಸಿರುವ ಅವರಿಗೆ ಈ ಬಗ್ಗೆ ಮಾಹಿತಿ ಇದೆ.

ಇಂಟರ್ನಲ್​ ಸೆಕ್ಯೂರಿಟಿ ಡಿವಿಜನ್​ಗೆ ಭೇಟಿ ನೀಡಿದ ಎಡಿಜಿಪಿ ಭಾಸ್ಕರ್​ರಾವ್

ಆಗಿನ್ನೂ ಇಂಟರ್ನಲ್ ಸೆಕ್ಯೂರಿಟಿ ಸಿಬ್ಬಂದಿ ಕೊರತೆ ಹಾಗೂ ಶಸ್ತ್ರಾಸ್ತ್ರಗಳು ತೀರಾ ಕಡಿಮೆಯಿದ್ದವು. ಆದ್ರೆ ಕಾಲ ಬದಲಾಗ್ತಿದ್ದಂತೆ ವಿಭಾಗಗಳ ಬಲವರ್ಧನೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನ ನೀಡಲಾಗಿತ್ತು. ಸದ್ಯ ನಂದಿ ಬೆಟ್ಟದ ಸಮೀಪ ಮೈಗಾನಹಳ್ಳಿ ಬಳಿ ಇರುವ ಕೈಗಾರಿಕಾ ಭದ್ರತಾ ಪಡೆ ಹಾಗೂ ಕೌಂಟರ್ ಟೆರರಿಸಂ ವಿಭಾಗದ ಬಗ್ಗೆ ಪರಿಶೀಲನೆ ನಡೆಸಿರುವ ಭಾಸ್ಕರ್ ರಾವ್ ಅಲ್ಲಿರುವ ಶಸ್ತ್ರಾಸ್ತ್ರಗಳು, ಸಿಬ್ಬಂದಿ ಎಷ್ಟಿದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇಂಟರ್ನಲ್​ ಸೆಕ್ಯೂರಿಟಿ ಡಿವಿಜನ್​ಗೆ ಭೇಟಿ ನೀಡಿದ ಎಡಿಜಿಪಿ ಭಾಸ್ಕರ್​ರಾವ್

ಸದ್ಯ198 ಅಧಿಕಾರಿಗಳನ್ನ ಒಳಗೊಂಡಂತೆ 2 ಸಾವಿರ ಸಿಬ್ಬಂದಿ ಆಂತರಿಕ ಭದ್ರತಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಆಂತರಿಕ ಭದ್ರತಾ ಪಡೆ ಪಾತ್ರ ಬಹಳ ಪ್ರಮುಖವಾಗಿದೆ. ಯಾಕಂದ್ರೆ ಸ್ವಾತಂತ್ರ್ಯ ದಿನಾಚರಣೆ, ರಾಮ ಮಂದಿರ ನಿರ್ಮಾಣ ಹೀಗೆ.. ಬೇರೆ ಬೇರೆ ರೀತಿಯ ಚಟುವಟಿಕೆಯಿಂದಾಗಿ ಭಯೋತ್ಪಾದಕ, ಉಗ್ರರ ತಂಡ ನಮ್ಮ ರಾಜ್ಯದ ಮೇಲೆ ಕರಿನೆರಳು ಬೀರುವ ಕಾರಣ ಸದ್ಯ ಬಂದೂಕನ್ನು ಹೇಗೆ ಉಪಯೋಗಿಸಬೇಕು, ಏನೆಲ್ಲಾ ಅವಶ್ಯಕತೆ ಇದೆ ಅನ್ನೋದ್ರ ಪಟ್ಟಿ ಸಿದ್ಧಪಡಿಸಿ ಅಲರ್ಟ್ ಆಗಿರುವಂತೆ ಎಡಿಜಿಪಿ ಭಾಸ್ಕರ್​ ರಾವ್​ ಸೂಚಿಸಿದ್ದಾರೆ.

ಇಂಟರ್ನಲ್​ ಸೆಕ್ಯೂರಿಟಿ ಡಿವಿಜನ್​ಗೆ ಭೇಟಿ ನೀಡಿದ ಎಡಿಜಿಪಿ ಭಾಸ್ಕರ್​ರಾವ್

ABOUT THE AUTHOR

...view details