ಕರ್ನಾಟಕ

karnataka

ETV Bharat / state

ಮಾದಕ ವಸ್ತು ಜಾಲ ಪತ್ತೆಗೆ ಮುಂದಾದ ಐಎಸ್​ಡಿ: ಇಂದು 12 ಜನರ ವಿಚಾರಣೆ ಸಾಧ್ಯತೆ ​

ಆಂತರಿಕ ಭದ್ರತಾ ವಿಭಾಗ ಮಾದಕ ವಸ್ತು ಜಾಲ ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದು, ಈಗಾಗಲೇ 12 ಜನರಿಗೆ ನೋಟಿಸ್ ನೀಡಿದೆ. ಇಂದು ಬ್ರಹ್ಮಗಂಟು ಧಾರಾವಾಹಿಯ ಗೀತಾ ಭಟ್, ಗಟ್ಟಿಮೇಳ ಧಾರಾವಾಹಿಯ ಅಭಿಷೇಕ್, ಬಿಜೆಪಿ ಸಂಸದ ಶಿವರಾಮೇಗೌಡರ ಪುತ್ರ, ಖಾಸಗಿ ಚಾನೆಲ್ ಉದ್ಯೋಗಿ ಸೇರಿದಂತೆ 12 ಜನರ ವಿಚಾರಣೆಯನ್ನ ಅಧಿಕಾರಿಗಳು ನಡೆಸಲಿದ್ದಾರೆ.

ಭಾಸ್ಕರ್ ರಾವ್,  ರಾಜ್ಯ ಆಂತರಿಕ ಭದ್ರತಾ ವಿಭಾಗ ಮುಖ್ಯಸ್ಥ
ಭಾಸ್ಕರ್ ರಾವ್, ರಾಜ್ಯ ಆಂತರಿಕ ಭದ್ರತಾ ವಿಭಾಗ ಮುಖ್ಯಸ್ಥ

By

Published : Sep 22, 2020, 7:43 AM IST

ಬೆಂಗಳೂರು: ಮಾದಕ ವಸ್ತು ಜಾಲ ಪತ್ತೆ ಹಚ್ಚಲು ಮತ್ತು ತಡೆಯಲು‌ ಸರ್ಕಾರ ಪಣ ತೊಟ್ಟಿರುವ ಬೆನ್ನಲ್ಲೇ ತನಿಖಾ ತಂಡಗಳು ಸಹ ಜಾಲವನ್ನು ಬೇರು ಸಮೇತ ಕಿತ್ತೊಗೆಯಲು‌ ಮುಂದಾಗಿವೆ. ಸಿಸಿಬಿ ಒಂದೆಡೆ ನಟಿಮಣಿಯರಿಗೆ ಬಿಸಿ ಮುಟ್ಟಿಸುತ್ತಿದ್ರೆ, ಮತ್ತೊಂದೆಡೆ ಸದ್ದಿಲ್ಲದೆ ಆಂತರಿಕ ಭದ್ರತಾ ವಿಭಾಗ ಕೂಡ ಕಾರ್ಯಾಚರಣೆ ಶುರು ಮಾಡಿದೆ. ಈಗಾಗಲೇ ಒಟ್ಟು 12 ಜನರಿಗೆ ನೋಟಿಸ್ ನೀಡಲಾಗಿದೆ.

ನಿನ್ನೆ ನಟ ಯೋಗೇಶ್​ ಹಾಗೂ ಮಾಜಿ ಕ್ರಿಕೆಟಿಗ ಅಯ್ಯಪ್ಪ ವಿಚಾರಣೆ ನಡೆಸಿದ ಬೆನ್ನಲ್ಲೇ ಇಂದು ಬ್ರಹ್ಮಗಂಟು ಧಾರಾವಾಹಿಯ ಗೀತಾ ಭಟ್, ಗಟ್ಟಿಮೇಳ ಧಾರಾವಾಹಿಯ ಅಭಿಷೇಕ್, ಬಿಜೆಪಿ ಸಂಸದ ಶಿವರಾಮೇಗೌಡರ ಪುತ್ರ, ಖಾಸಗಿ ಚಾನೆಲ್ ಉದ್ಯೋಗಿ ಸೇರಿದಂತೆ 12 ಜನರ ವಿಚಾರಣೆಯನ್ನ ಅಧಿಕಾರಿಗಳು ನಡೆಸಲಿದ್ದಾರೆ.

ಈ ಹಿಂದೆ ನಗರ ಪೊಲೀಸ್​​ ಆಯುಕ್ತರಾಗಿದ್ದ ಭಾಸ್ಕರ್ ರಾವ್​ ಅವರು ರಾಜ್ಯ ಆಂತರಿಕ ಭದ್ರತಾ ವಿಭಾಗ ಮುಖ್ಯಸ್ಥರಾಗಿದ್ದು, ಇವರು ಅಧಿಕಾರ ಸ್ವೀಕಾರ ಮಾಡಿದ ತಕ್ಷಣ ಮಾದಕ ವಸ್ತು ಜಾಲ ಸಂಬಂಧ ಮೊದಲ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಡ್ರಗ್ಸ್​​​ ಪೆಡ್ಲರ್​ಗಳನ್ನು ಬಂಧಿಸಿ ತನಿಖೆ ನಡೆಸಿದಾಗ ಹಲವಾರು ಮಂದಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸದ್ಯ ಪೆಡ್ಲರ್​ಗಳು ನೀಡಿದ ಮಾಹಿತಿಯಾಧಾರದ ಮೇರೆಗೆ ತನಿಖೆಗೆ ನಡೆಯುತ್ತಿದ್ದು, ಪ್ರಾಥಮಿಕವಾಗಿ ನಟ ಯೋಗೇಶ್​, ಮಾಜಿ ಕ್ರಿಕೆಟಿಗ ಅಯ್ಯಪ್ಪ ಹಾಗು ರಶ್ಮಿತಾರನ್ನು ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ABOUT THE AUTHOR

...view details