ಬೆಂಗಳೂರು: ಕೆಲ ದಿನಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಮಹಿಳೆ ಕುಡಿಯಲು ನೀರು ಕೇಳಿದಾಗ, ಮನೆಯ ಹೆಂಗಸು ದೂರ ಹೋಗಿ ಎಂದು ನೀರನ್ನು ರಸ್ತೆಯಲ್ಲಿಟ್ಟ ಪ್ರಕರಣಕ್ಕೆ ಸ್ಪಷ್ಟನೆ ಕೊಡುವಂತೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ಗೆ ಪತ್ರ ಬರೆದಿದ್ದಾರೆ.
ಪೌರಕಾರ್ಮಿಕರಿಗೆ ನೀರು ಕೊಡಲು ಅವಮಾನ ಮಾಡಿದ ಘಟನೆ: ಕ್ರಮಕ್ಕೆ ಸರ್ಕಾರದ ಸೂಚನೆ
ಪೌರಕಾರ್ಮಿಕ ಮಹಿಳೆ ಕುಡಿಯಲು ನೀರು ಕೇಳಿದಾಗ ನೀರನ್ನು ರಸ್ತೆಯಲ್ಲಿಟ್ಟ ಪ್ರಕರಣಕ್ಕೆ ಸ್ಪಷ್ಟನೆ ಕೊಡುವಂತೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ಗೆ ಪತ್ರ ಬರೆದಿದ್ದಾರೆ.
ಪೌರಕಾರ್ಮಿಕರಿಗೆ ಕೊರೊನಾ ನೆಪದಲ್ಲಿ ಹತ್ತಿರ ಸೇರಿಸದೆ ನೀರನ್ನು ಕಾಂಪೌಂಡ್ನಲ್ಲೂ ಇಡದೆ ರಸ್ತೆಯಲ್ಲಿ ಇಟ್ಟು ಅವಮಾನ ಮಾಡಿದ ವಿಡಿಯೋ ವೈರಲ್ ಆಗಿತ್ತು. ನಂತರ ಅದೇ ದಿನ ಸಂಜೆ ಅದೇ ಪೌರಕಾರ್ಮಿಕರು ನೀರು ನಿರಾಕರಣೆ ಏನೂ ಆಗಿಲ್ಲ. ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಮತ್ತೊಂದು ವಿಡಿಯೋ ಮಾಡಿದ್ದರು. ಈ ಘಟನೆ ತಿರುಚಿರುವ ಬಗ್ಗೆ ಹಾಸನದ ಸಾಮಾಜಿಕ ಹೋರಾಟಗಾರರು ದೂರು ಸಹ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳ ತನಿಖೆ ನಡೆಸಿ, ಸಂಬಂಧಿಸಿದವರ ಹೇಳಿಕೆ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು. ಹಾಗೂ ಪೌರಕಾರ್ಮಿಕರ ಕೆಲಸ ನಡೆಸುವ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಮತ್ತಿತರ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ.