ಕರ್ನಾಟಕ

karnataka

ETV Bharat / state

ಪ್ರವಾಹ ಸಂತ್ರಸ್ತರಿಗೆ ಎಸ್​​ಸಿಪಿ‌-ಟಿಎಸ್‌ಪಿ ಯೋಜನೆ ಹಣ; ಮನೆ ನಿರ್ಮಾಣಕ್ಕೆ ಬಳಸಲು ಸೂಚನೆ - Instructions to use the SCP-TSP project

ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಭಾರಿ ಪ್ರವಾಹ ಲಕ್ಷಾಂತರ ಜನರ ಬದುಕನ್ನು ಬೀದಿಗೆ ತಳ್ಳಿದೆ. ಹೀಗಾಗಿ ನೆರೆ‌ಪೀಡಿತ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಎಸ್​​ಸಿಪಿ‌- ಟಿಎಸ್‌ಪಿ ಯೋಜನೆ ಹಣವನ್ನು ಬಳಸುವಂತೆ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ

By

Published : Sep 13, 2019, 9:03 PM IST

ಬೆಂಗಳೂರು:ನಗರಾಭಿವೃದ್ಧಿ ಇಲಾಖೆಯು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನದಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿ ಶೇ. 50 ರಷ್ಟು ಅನುದಾನವನ್ನು ಮನೆ ನಿರ್ಮಾಣ ಹಾಗೂ ಉಳಿದ ಅನುದಾನವನ್ನು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸುವಂತೆ ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಸೂಚನೆ‌ ಕೊಟ್ಟರು.

ಎಸ್‌ಟಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಈ ಯೋಜನೆಯ ಅನುದಾನವನ್ನು ನೆರೆಪೀಡಿತ ಪ್ರದೇಶಗಳಲ್ಲಿರುವ ಪರಿಶಿಷ್ಟರ ಪುನರ್ವಸತಿಗೆ ಬಳಕೆ ಮಾಡಬೇಕು. ಸಹಕಾರ ಇಲಾಖೆಯು ಪರಿಶಿಷ್ಟರನ್ನು ಪಿಕೆಪಿಎಸ್ ಸಂಘಗಳ ಸದಸ್ಯರನ್ನಾಗಿಸಬೇಕು. ಕಂದಾಯ ಇಲಾಖೆಯಿಂದ ದಾಖಲಾತಿ ಪಡೆದು ಎಲ್ಲರನ್ನೂ ಸದಸ್ಯರನ್ನಾಗಿಸಿ, ಹಮಾಲಿಗಳಿಗೆ ಮನೆ ನಿರ್ಮಿಸಿ ಕೊಡಬೇಕು ಎಂದು ನಿರ್ದೇಶನ ನೀಡಿದ್ರು.

ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ

ಪ್ರವಾಹ ಸಂತ್ರಸ್ತರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳೂ ಎಸ್‌ಟಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಕ್ರಿಯಾಯೋಜನೆ ಮಾರ್ಪಡಿಸಿ ಆದ್ಯತೆಯ ಮೇರೆಗೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹದಿಂದ 32ಸಾವಿರ ಕೋಟಿ ರೂ ನಷ್ಟ ಸಂಭವಿಸಿದೆ. ಸಾರ್ವಜನಿಕ ಆಸ್ತಿ, ರಸ್ತೆ, ಸೇತುವೆ, ರೈತರ ಬೆಳೆ ಹಾನಿ, ತಗ್ಗು ಪ್ರದೇಶದಲ್ಲಿ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ ಕಳೆದುಕೊಂಡಿದ್ದಾರೆ. ಸುಮಾರು 2.35 ಲಕ್ಷ ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ‌ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಪುನರ್ವಸತಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಆರ್‌ಡಿಸಿಎಲ್ ಮೂಲಕ ಕೈಗೊಳ್ಳುತ್ತಿರುವ ಇಎಲ್‌ಸಿ ಯೋಜನೆಯಲ್ಲಿ ಅಕ್ರಮವಾಗಿದ್ದರೆ, ತನಿಖೆಯಾಗಲಿ. ಈಗಾಗಲೇ ದೂರು ಕೊಟ್ಟಿದ್ದರೆ ಒಳ್ಳೆಯದು. ನನಗೆ ಮಾಹಿತಿ ಇಲ್ಲ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details