ಕರ್ನಾಟಕ

karnataka

ETV Bharat / state

ಕೋವಿಡ್ ಮುನ್ನೆಚ್ಚರಿಕೆ: ಈ ಮಾನದಂಡಗಳನ್ನು ಕಡ್ಡಾಯ ಪಾಲಿಸುವಂತೆ ಸೂಚನೆ - ಕೋವಿಡ್ ಮುನ್ನೆಚ್ಚರಿಕೆ

ರಾಜ್ಯದಲ್ಲಿ ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕೋವಿಡ್ ಮುನ್ನೆಚ್ಚರಿಕೆ:  ಈ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ
ಕೋವಿಡ್ ಮುನ್ನೆಚ್ಚರಿಕೆ: ಈ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ

By

Published : Aug 29, 2022, 10:29 PM IST

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಸೋಂಕು ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೀಡಲಾಗಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

1. ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯ

• ಎಲ್ಲಾ ILI & SARI ಪ್ರಕರಣಗಳು.

• ಸೋಂಕಿನ ಲಕ್ಷಣಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರು.

• ಸೋಂಕು ಲಕ್ಷಣ ಹೊಂದಿರುವ ಪ್ರಾಥಮಿಕ ಸಂಪರ್ಕಿತರು. ಸೋಂಕಿನ ಲಕ್ಷಣಗಳಿಲ್ಲದ, 60 ವರ್ಷ ಮೀರಿದ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು.

2. ಪರೀಕ್ಷಾ ಕ್ರಮಗಳು (ರ್ಯಾಪಿಡ್/ಆರ್‌ಟಿ-ಪಿಸಿಆರ್ ಪರೀಕ್ಷೆ)

• ಸೋಂಕಿನ ಲಕ್ಷಣಗಳನ್ನು ಹೊಂದಿದವರಿಗೆ ರ್ಯಾಪಿಡ್ ಪರೀಕ್ಷೆ ಮಾಡುವುದು ಹಾಗೂ ನೆಗೆಟಿವ್ ಫಲಿತಾಂಶ ಬಂದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು.

• ಸೋಂಕಿನ ಲಕ್ಷಣಗಳಿಲ್ಲದವರಿಗೆ ರಾಪಿಡ್ ಪರೀಕ್ಷೆ ನಡೆಸುವಂತಿಲ್ಲ. ಕಡ್ಡಾಯವಾಗಿ ಆರ್‌ಟಿ -ಪಿಸಿಆರ್ ಪರೀಕ್ಷೆಯನ್ನೇ ನಡೆಸಬೇಕು.

• ರಾಪಿಡ್ ಪರೀಕ್ಷೆಯು ಒಟ್ಟು ಪರೀಕ್ಷೆಯ ಪ್ರಮಾಣದಲ್ಲಿ ಶೇ30 ರಷ್ಟನ್ನು ಮೀರುವಂತಿಲ್ಲ.

3. ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸುವ ಮಾನದಂಡಗಳು

• ಕೋವಿಡ್ ಸೋಂಕಿತರಲ್ಲಿ- ಸೋಂಕಿನ ಲಕ್ಷಣಗಳನ್ನು ಹೊಂದಿದವರು, ಅಂತಾರಾಷ್ಟ್ರೀಯ ಪ್ರಯಾಣಿಕರು, ಆಸ್ಪತ್ರೆಗೆ ದಾಖಲಾದವರು, ಕ್ಲಸ್ಟರ್ ಮಾದರಿಗಳು (5 or more cases) ಹಾಗೂ ಔಟ್ ಬ್ರೇಕ್ ಸಂದರ್ಭ(15 or more cases) ಗಳಲ್ಲಿ Ct value 25 ಕ್ಕಿಂತ ಕಡಿಮೆ ಇರುವ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸುವುದು ಕಡ್ಡಾಯ.

4. ಕಡ್ಡಾಯ ಆಸ್ಪತ್ರೆಯಲ್ಲಿ ಆರೈಕೆ (ಮನೆಯಲ್ಲಿಯೇ ಪ್ರತ್ಯೇಕವಾಗಿರುವುದರ ಬದಲು)

• ವೃದ್ಧರು, ಅಂದರೆ 60 ವರ್ಷ ಮೇಲ್ಪಟ್ಟಿರುವವರು.

ಇದನ್ನೂ ಓದಿ:ರಾಜ್ಯದಲ್ಲಿ 659 ಮಂದಿಗೆ ಕೋವಿಡ್ ದೃಢ, ಇಬ್ಬರು ಸಾವು

ABOUT THE AUTHOR

...view details