ಕರ್ನಾಟಕ

karnataka

ETV Bharat / state

15 ದಿನಗಳಲ್ಲಿ ನಗರದ ರಸ್ತೆ ಗುಂಡಿಗಳನ್ನ ಮುಚ್ಚುವಂತೆ ಬಿಬಿಎಂಪಿ ಆಯುಕ್ತರ ಸೂಚನೆ - ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ

ಮುಂದಿನ 15 ದಿನಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ವಲಯ ಮುಖ್ಯ ಇಂಜಿನಿಯರ್​​ಗಳಿಗೆ ಸೂಚನೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Road damage
Road damage

By

Published : Aug 16, 2020, 4:08 PM IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ನಿಗದಿತ ಸಮಯದಲ್ಲಿ ದುರಸ್ತಿ ಪಡಿಸಲು ನಗರದ ಬೆಂಗಳೂರು ಪೂರ್ವ, ಕಣ್ಣೂರು ಬಳಿ ಪಾಲಿಕೆಯ 4.5 ಎಕರೆ ಜಾಗದಲ್ಲಿ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ಡಾಂಬರು ಮಿಶ್ರಣ ಘಟಕವನ್ನು ನಿರ್ಮಿಸಲಾಗಿದ್ದು, ಇಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಯಾವುದೇ ರಸ್ತೆಯಲ್ಲಿ ಗುಂಡಿಗಳು ಇರಬಾರದು. ಈ ಸಂಬಂಧ ಮುಂದಿನ 15 ದಿನಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ವಲಯ ಮುಖ್ಯ ಇಂಜಿನಿಯರ್‌ ಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳ ಸಮಸ್ಯೆಯನ್ನು ನಿವಾರಿಸಲು ಪಾಲಿಕೆಯು ಡಾಂಬರು ಮಿಶ್ರಣ ಘಟಕ ಸ್ಥಾಪಿಸಿದ್ದು, ಇದರಿಂದ ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದ ಹಾಗೂ ಉತ್ತಮ ಪ್ರಮಾಣದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಸಾಧ್ಯವಾಗಲಿದೆ ಎಂದು ಆಯುಕ್ತರು ತಿಳಿಸಿದರು.

ಪಾಲಿಕೆಯ 4.5 ಎಕರೆ ಜಾಗದಲ್ಲಿ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ಡಾಂಬರು ಮಿಶ್ರಣ ಘಟಕನ್ನು ಸ್ಥಾಪಿಸಿದ್ದು, ಒಂದು ಗಂಟೆಗೆ 100/120 ಟಿಪಿಹೆಚ್ ಸಾಮರ್ಥ್ಯವುಳ್ಳ ಡಾಂಬರ್ ಅನ್ನು ತಯಾರಿಸಬಹುದಾಗಿದ್ದು, ದಿನಕ್ಕೆ 50 ರಿಂದ 60 ಟ್ರಕ್ ಡಾಂಬರ್ ತಯಾರಿಸಬಹುದಾಗಿದೆ. ಇದರಿಂದ ನಗರದಾದ್ಯಂತ ತ್ವರಿತ ಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬಹುದಾಗಿದೆ. ಪಾಲಿಕೆಯಿಂದಲೇ ಡಾಂಬರ್ ತಯಾರಿಸುತ್ತಿರುವುದರಿಂದ ವೆಚ್ಚ ಕಡಿಮೆಯಾಗಲಿದ್ದು, ಗುಣಮಟ್ಟ ಕಾಪಾಡಿಕೊಳ್ಳಬಹುದಾಗಿದೆ. ಯಾವುದೇ ಗುತ್ತಿಗೆದಾರರ ಮೇಲೆ ಅವಲಂಬಿತವಾಗುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ಇನ್ನು ಬಿಬಿಎಂಪಿಯಿಂದ ನಿರ್ಮಿಸಿರುವ ಡಾಂಬರು ಮಿಶ್ರಣ ಘಟಕವು ಸಂಪೂರ್ಣ ಸ್ವಯಂ ಚಾಲಿತವಾಗಿದ್ದು, ಘಟಕದಲ್ಲಿ ತಯಾರಾಗುವ ಡಾಂಬರಿನ ಉಷ್ಣಾಂಶವು 150 ರಿಂದ 160 ಇರಲಿದ್ದು, ಗುಂಡಿಗಳು ಮುಚ್ಚುವ ಸ್ಥಳಕ್ಕೆ ಹೋಗುವ ವೇಳೆಗೆ 120 ಉಷ್ಣಾಂಶವಿದ್ದರೆ ಉತ್ತಮ ಗುಣಮಟ್ಟದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಜೊತೆಗೆ ಹೆಚ್ಚುದಿನಗಳ‌ ಕಾಲ ಬಾಳಿಕೆ ಬರಲಿದೆ ಎಂದರು.

ರಸ್ತೆಗುಂಡಿಗಳನ್ನು ಮುಚ್ಚಲು ಎಲ್ಲಾ ವಾರ್ಡ್ ವ್ಯಾಪ್ತಿಯಲ್ಲಿ ಗುತ್ತಿಗೆದಾರರನ್ನು ನಿಯೋಜನೆ ಮಾಡಿದ್ದು, ಅವಶ್ಯಕವಿರುವ ಡಾಂಬರನ್ನು, ಪಾಲಿಕೆಯ ಡಾಂಬರು ಮಿಶ್ರಣ ಘಟಕದದಿಂದ ಕಳುಹಿಸಲಾಗುವುದು. ಗುತ್ತಿಗೆದಾರರು ಅಗತ್ಯ ಸಿಬ್ಬಂದಿ ಸಹಯೋಗದಲ್ಲಿ ರಸ್ತೆ ಗುಂಡಿ ಸ್ವಚ್ಛಗೊಳಿಸಿ, ಗುಂಡಿಗೆ ಹಾಟ್ ಮಿಕ್ಸ್ ಡಾಂಬರ್ ಹಾಕಿ ರೋರಲ್ ಸಹಯೋಗದಲ್ಲಿ ಡಾಂಬರ್ ಅಳವಡಿಸಲಾಗುವುದು ಎಂದರು.

ABOUT THE AUTHOR

...view details