ಕರ್ನಾಟಕ

karnataka

ETV Bharat / state

ಮಿನಿ ವಿಧಾನಸೌಧದ ಹೆಸರನ್ನು 'ತಾಲೂಕು ಆಡಳಿತ ಸೌಧ' ಎಂದು ನಾಮಾಂಕಿತಗೊಳಿಸಲು ಸೂಚನೆ - Mini vidhansoudha

ಕರ್ನಾಟಕದ ಎಲ್ಲಾ ತಾಲೂಕುಗಳ ಮಿನಿ ವಿಧಾನಸೌಧ(Mini Vidhansoudha) ಹೆಸರನ್ನು ಇನ್ನು ಮುಂದೆ 'ತಾಲೂಕು ಆಡಳಿತ ಸೌಧ'(Taluk administration building) ಎಂದು ನಾಮಾಂಕಿತಗೊಳಿಸಲು ಸೂಚನೆ ನೀಡಲಾಗಿದೆ.

Instructions to change Mini vidhansoudhas names as Taluk Administration building
ಮಿನಿ ವಿಧಾನಸೌಧ

By

Published : Nov 16, 2021, 4:41 PM IST

ಬೆಂಗಳೂರು:ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ ಮಿನಿ ವಿಧಾನಸೌಧ(Mini Vidhansoudha) ಹೆಸರನ್ನು ಇನ್ನು ಮುಂದೆ 'ತಾಲೂಕು ಆಡಳಿತ ಸೌಧ' (Taluk administration building) ಎಂದು ನಾಮಾಂಕಿತಗೊಳಿಸಲು ಸೂಚನೆ ನೀಡಲಾಗಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಕಂದಾಯ ಇಲಾಖೆ, ಹೆಸರು ಬದಲಾಯಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿನ ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯನ್ನೊಳಗೊಂಡಂತೆ ಇತರೆ ಸರ್ಕಾರಿ ಕಚೇರಿಗಳು ಮಿನಿವಿಧಾನಸೌಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ ತಾಲೂಕು ಆಡಳಿತ ಕಚೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ, ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ ತಾಲೂಕು ಆಡಳಿತ ಸೌಧ ಎಂದು ಬದಲಿಸುವುದು ಸೂಕ್ತವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿತ್ತು.

ಪ್ರಸ್ತುತ ಇರುವ ಮಿನಿ ಎಂಬ ಪದ ಆಂಗ್ಲಭಾಷೆಯಾಗಿದ್ದು, ತಾಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಲಿ, ಕಾಯ್ದೆ-ಕಾನೂನುಗಳನ್ನಾಗಲೀ ರೂಪಿಸುವ ಶಕ್ತಿಕೇಂದ್ರಗಳಲ್ಲದ ಕಾರಣ 'ಮಿನಿ ವಿಧಾನಸೌಧ' ಎಂಬುದರ ಬದಲಾಗಿ 'ತಾಲೂಕು ಆಡಳಿತ ಸೌಧ' ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಸಾರ್ವಜನಿಕರು ಕೋರಿದ್ದರು.

ABOUT THE AUTHOR

...view details