ಕರ್ನಾಟಕ

karnataka

ETV Bharat / state

ಗಾಳಿ ಆಂಜನೇಯ ದೇವಸ್ಥಾನ ಬಳಿಯ ಪಾದಚಾರಿ ಮೇಲ್ಸೇತುವೆ ತೆರವಿಗೆ ಸೂಚನೆ - DRR Out Door Media Agency

ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಹಾಗೂ ಬಾಪೂಜಿ ನಗರದ ಪ್ರವೇಶ ದ್ವಾರದ ಬಳಿ ಪಾದಚಾರಿ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು, ಇದನ್ನು ತೆರವು ಮಾಡುವಂತೆ ಸ್ಥಳೀಯ ಟಿಇಸಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಡಿಆರ್​ಆರ್ ಔಟ್ ಡೋರ್ ಮೀಡಿಯಾ ಸಂಸ್ಥೆಗೆ ಪತ್ರ ಬರೆದಿದ್ದಾರೆ.

instruction-to-clear-the-pedestrian-overpass-near-the-anjaneya-temple
ಗಾಳಿ ಆಂಜನೇಯ ದೇವಸ್ಥಾನ ಬಳಿಯ ಪಾದಾಚಾರಿ ಮೇಲ್ಸೇತುವೆ ತೆರವಿಗೆ ಸೂಚನೆ

By

Published : Oct 23, 2020, 7:48 AM IST

ಬೆಂಗಳೂರು:ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಹಾಗೂ ಬಾಪೂಜಿ ನಗರದ ಪ್ರವೇಶ ದ್ವಾರದ ಬಳಿ ಪಾದಚಾರಿ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು, ಇದನ್ನು ತೆರವು ಮಾಡುವಂತೆ ಸ್ಥಳೀಯ ಟಿಇಸಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಡಿಆರ್​ಆರ್ ಔಟ್ ಡೋರ್ ಮೀಡಿಯಾ ಸಂಸ್ಥೆಗೆ ಪತ್ರ ಬರೆದಿದ್ದಾರೆ.

ಗಾಳಿ ಆಂಜನೇಯ ದೇವಸ್ಥಾನ ಬಳಿಯ ಪಾದಚಾರಿ ಮೇಲ್ಸೇತುವೆ ತೆರವಿಗೆ ಸೂಚನೆ
ಗಾಳಿ ಆಂಜನೇಯ ದೇವಸ್ಥಾನ ಬಳಿಯ ಪಾದಚಾರಿ ಮೇಲ್ಸೇತುವೆ ತೆರವಿಗೆ ಸೂಚನೆ

ಪಾದಚಾರಿ ಮೇಲ್ಸೇತುವೆಯ ಕಾಮಗಾರಿ ಪಿಪಿಪಿ ಮಾದರಿಯಲ್ಲಿ ಆರಂಭವಾಗಿತ್ತು. ಆದ್ರೆ ಬಾಪೂಜಿ ನಗರ ಮುಖ್ಯ ದ್ವಾರದ ಎದುರು ರಸ್ತೆ ಕಿರಿದಾಗಿದ್ದು, ಪಾದಾಚರಿ ಮೇಲ್ಸೇತುವೆ ನಿರ್ಮಾಣದಿಂದ ಆಟೋ ನಿಲ್ದಾಣಕ್ಕೆ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು.

ಈ ಸಂಬಂಧ ಕುರುಬರ ಸಂಘ ಕೂಡ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ವಿಜಯನಗರ ಶಾಸಕರಿಗೆ ಪತ್ರ ಬರೆದಿದ್ದು, ಮೇಲ್ಸೇತುವೆ ತೆರವು ಮಾಡುವಂತೆ ಕೋರಿಕೊಂಡಿದ್ದಾರೆ.

ABOUT THE AUTHOR

...view details