ಕರ್ನಾಟಕ

karnataka

ETV Bharat / state

'ಜೀವ ಉಳಿದರೆ ಜೀವನ ಉಳಿಯುತ್ತೆ, ನೈತಿಕತೆ ಕಳೆದುಕೊಳ್ಳಬೇಡಿ': ವೈದ್ಯರಿಗೆ ಸಿಎಂ ಕರೆ

ಎಥಿಕಲ್ ಕ್ಲಿನಿಕಲ್ ಪ್ರಾಕ್ಟಿಸ್ ಅಗತ್ಯವಿದೆ. ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಮೋಸ ಆಗಬಾರದು. ನೈತಿಕತೆ ಕಳೆದುಕೊಳ್ಳಬಾರದು. ಸತ್ಯ ಮಾರ್ಗದಲ್ಲಿ ಕಸಿ ಕಾರ್ಯ ನಡೆಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ವೈದ್ಯರಿಗೆ ಸಿಎಂ ಕರೆ
ವೈದ್ಯರಿಗೆ ಸಿಎಂ ಕರೆ

By

Published : Oct 10, 2021, 11:27 AM IST

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್​​ನ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಂದು ಉದ್ಘಾಟನೆಗೊಂಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು. ಈ ವೇಳೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್ ಹಾಗು ಸಂಸ್ಥೆಯ ನಿರ್ದೇಶಕ ಡಾ.ನಾಗೇಶ್ ಉಪಸ್ಥಿತರಿದ್ದರು.

ನೂತನ ಆಸ್ಪತ್ರೆ ಉದ್ಘಾಟನೆ

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಯಿ, 'ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಈ ರೀತಿ ಹೈಟೆಕ್ ಗ್ಯಾಸ್ಟ್ರಲ್ ಆಸ್ಪತ್ರೆ ಆಗಲಿದೆ ಅಂತ ಕಲ್ಪನೆ ಮಾಡಿ ಸಂಪೂರ್ಣ ಚಿಂತನೆಯನ್ನು ಅಳವಡಿಸಿದ್ದಾರೆ. ಇದೆಲ್ಲದಕ್ಕೂ ಶಕ್ತಿ ತುಂಬಿದ್ದು ದಾನಿಗಳು. ಇದೀಗ ಇಲ್ಲಿನ ವೈದ್ಯರು ಇದನ್ನು ನಡೆಸಿಕೊಂಡು ಹೋಗಬೇಕಿದೆ. 30 ಕೋಟಿ ರೂ ಸರ್ಕಾರದ ಅನುದಾನದಲ್ಲಿ ಕೆಲಸ ಮಾಡಲಾಗುತ್ತಿದೆ' ಎಂದು ತಿಳಿಸಿದರು.

'ನಮ್ಮ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಯಾವುದೇ ಕೆಲಸ ಹಿಡಿದರೆ ಆಗುವವರೆಗೂ ಬಿಡೋದಿಲ್ಲ. ನಾನು ದೆಹಲಿಗೆ ಹೋದಾಗ, ನಾವು ಕೇಳಿದ್ದಕ್ಕಿಂತ ಹೆಚ್ಚು ಕೊಟ್ಟು ನಮಗೆ ಟಾಸ್ಕ್ ನೀಡುತ್ತಿದ್ದರು. ಉದಾಹರಣೆಗೆ ಲಸಿಕೆ‌ಗೆ ಬೇಡಿಕೆ ಇಟ್ಟಾಗ, ಒಂದು ಕೋಟಿ ಅಲ್ಲ, ಒಂದೂವರೆ ಕೋಟಿ ತಗೋಳಿ. ಆದರೆ, ಪ್ರತೀ ದಿನ ಇಷ್ಟು ಟಾರ್ಗೆಟ್ ಮುಗಿಸಿ ಅಂತ ಹೇಳ್ತಿದ್ದರು. ಇವರು ಒಂಥರಾ ಟಾಸ್ಕ್ ಮಾಸ್ಟರ್' ಎಂದು ಕೇಂದ್ರ ಸಚಿವರನ್ನು ಹೊಗಳಿದರು.

ಆಸ್ಪತ್ರೆ ಉದ್ಘಾಟಿಸಿದ ಕೇಂದ್ರ ಸಚಿವ ಹಾಗು ಸಿಎಂ

'ನಮ್ಮ ಧೀಮಂತ ನಾಯಕ ಪ್ರಧಾನಿ ಮೋದಿ ಎರಡು ಗುರುತರ ಜವಾಬ್ದಾರಿಯನ್ನು ಇವರಿಗೆ ನೀಡಿದ್ದಾರೆ. ಒಂದು ಆರೋಗ್ಯ ಕಾಪಾಡೋದು ಹಾಗೂ ರೈತರು ಬೆಳೆಯೋ ಬೆಳೆಗೆ ವಿಟಮಿನ್ ನೀಡುವುದು. ಎರಡೂ ರೀತಿಯ ಮೌಲ್ಯಯುತ ಕೆಲಸ ನೀಡಿದ್ದು, ಎರಡು ಮೂರು ತಿಂಗಳಲ್ಲಿ ಈ ರೀತಿಯ ಸೇವೆ ಮಾಡಿದ್ದಾರೆ. ಎಲ್ಲಿಯೂ ವ್ಯಾಕ್ಸಿನ್ ಕೊರತೆಯಾಗಲಿ, ಗೊಬ್ಬರದಲ್ಲಿ ಯೂರಿಯಾ ಕೊರತೆಯೂ ಆಗಿಲ್ಲ' ಎಂದು ಕೊಂಡಾಡಿದರು.

'ಸುಧಾಕರ್ ಹಾಗೂ ಎಲ್ಲಾ ಶಾಸಕರು, ಸಂಸದರು ಈ ಮಹತ್ವದ ಕಾರ್ಯಕ್ಕೆ ಕೆಲಸ ಮಾಡಿದ್ದಾರೆ. ಇದರಿಂದ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೋ ಉತ್ತಮವಾಗಿ ಬೆಳೆಯುತ್ತಿದೆ. ನಮ್ಮ ಸರ್ಕಾರ ಆರೋಗ್ಯ ಕರ್ನಾಟಕ ಮಾಡಲು ಸಂಕಲ್ಪ ಮಾಡಿದ್ದು, ಇದಕ್ಕಾಗಿ ಬರುವ ದಿನಗಳಲ್ಲಿ ಹೆಲ್ತ್ ವಿಷನ್ ಮಾಡಲಿದೆ' ಎಂದು ಹೇಳಿದರು.

'ಅಂಗಾಂಗ ಕಸಿಯಲ್ಲಿ ಮೋಸ ಆಗಬಾರದು'

ಎಥಿಕಲ್ ಕ್ಲಿನಿಕಲ್ ಪ್ರಾಕ್ಟಿಸ್ ಅಗತ್ಯವಿದ್ದು, ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಮೋಸ ಆಗಬಾರದು. ನೈತಿಕತೆ ಕಳೆದುಕೊಳ್ಳಬಾರದು. ಸತ್ಯಮಾರ್ಗದಲ್ಲಿ ಕಸಿ ಕಾರ್ಯ ನಡೆಯಬೇಕು. ಕಿಡ್ನಿ ಕಸಿ, ಹೃದಯ ಕಸಿಗಾಗಿ ಬಡವರು ಕ್ಯೂ ನಿಲ್ಲುತ್ತಿದ್ದಾರೆ. ಯಾವ ಬಡವನೂ ಈ ಸಮಸ್ಯೆಯಿಂದ ಸಾಯಬಾರದು, ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು' ಎಂದು ವೈದ್ಯರಿಗೆ ಈ ವೇಳೆ ಸೂಚಿಸಿದರು.

ABOUT THE AUTHOR

...view details