ಕರ್ನಾಟಕ

karnataka

ETV Bharat / state

ಆತ್ಮ ನಿರ್ಭರ್​ ಯೋಜನೆಯಡಿ ಕೆಎಸ್​​ಆರ್​ಟಿಸಿಯಿಂದ 2 ಇಟಿಎಂ ಸ್ಲಿಟಿಂಗ್ ಯಂತ್ರ ಅಳವಡಿಕೆ - Installation of 2 ETM Sliting Machine by KSRTC

ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೇ ಪ್ರಪ್ರಥಮ ಬಾರಿಗೆ ಮಾದರಿಯ 2 ಇಟಿಎಂ ಯಂತ್ರಗಳನ್ನು ಕರಾಸಾ ನಿಗಮವು ಅನುಷ್ಠಾನಗೊಳಿಸಿದೆ. ಆತ್ಮ ನಿರ್ಭರ ಯೋಜನೆಯಡಿ ಯಂತ್ರಗಳು ಸಂಪೂರ್ಣ ದೇಶಿಯ ಯಂತ್ರಗಳಾಗಿದ್ದು, ಯಂತ್ರಗಳಲ್ಲಿನ ಇಟಿಎಂ ರೋಲ್‍ಗಳಲ್ಲಿ ಪ್ಲಾಸ್ಟಿಕ್ ಕೊಳವೆ (ಪೈಪ್) ಯನ್ನು ಉಪಯೋಗಿಸದೆ ತಯಾರಿಸಬಹುದಾಗಿದೆ.

ಕೆಎಸ್​​ಆರ್​ಟಿಸಿಯಿಂದ 2 ಇಟಿಎಂ ಸ್ಲಿಟಿಂಗ್ ಯಂತ್ರ ಅಳವಡಿಕೆ
ಕೆಎಸ್​​ಆರ್​ಟಿಸಿಯಿಂದ 2 ಇಟಿಎಂ ಸ್ಲಿಟಿಂಗ್ ಯಂತ್ರ ಅಳವಡಿಕೆ

By

Published : Sep 14, 2020, 5:08 PM IST

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಮುದ್ರಣಾಲಯದಲ್ಲಿ ಹೊಸದಾಗಿ 2 ಇಟಿಎಂ (Electronic Ticketing Machine) ಸ್ಲಿಟಿಂಗ್ ಯಂತ್ರಗಳನ್ನು ಅಳವಡಿಸಿದ್ದು, ಇದನ್ನು ಇಂದು ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಚಾಲನೆ ನೀಡಿದರು.

ಒಂದು ಯಂತ್ರದ ಬೆಲೆ 10 ಲಕ್ಷ ರೂ. ಇದ್ದು, ಈ ಯಂತ್ರಗಳಲ್ಲಿ ಉತ್ಪಾದಿಸುವ ಥರ್ಮಲ್ ರೋಲ್‍ಗಳನ್ನು ಕಂಡಕ್ಟರ್​ ತಮ್ಮ ಇಟಿಎಂ ಯಂತ್ರಗಳಲ್ಲಿ ಉಪಯೋಗಿಸಿ, ಪ್ರಯಾಣಿಕರಿಗೆ ಬಸ್ ಟಿಕೆಟ್‍ಗಳನ್ನು ವಿತರಿಸುತ್ತಾರೆ. ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೇ ಪ್ರಪ್ರಥಮ ಬಾರಿಗೆ ಮಾದರಿಯ ಯಂತ್ರಗಳನ್ನು ನಿಗಮವು ಅನುಷ್ಠಾನಗೊಳಿಸಿದೆ.

ಚಾಲನೆ ನೀಡಿ ಮಾತಾನಾಡಿದ ಇಲಾಖೆಯ ಅಧ್ಯಕ್ಷ ಚಂದ್ರಪ್ಪ, ಆತ್ಮ ನಿರ್ಭರ್​ ಯೋಜನೆಯಡಿ ಯಂತ್ರಗಳು ಸಂಪೂರ್ಣ ದೇಶಿಯ ಯಂತ್ರಗಳಾಗಿದ್ದು, ಯಂತ್ರಗಳಲ್ಲಿನ ಇಟಿಎಂ ರೋಲ್‍ಗಳಲ್ಲಿ ಪ್ಲಾಸ್ಟಿಕ್ ಕೊಳವೆ (ಪೈಪ್) ಯನ್ನು ಉಪಯೋಗಿಸದೆ ತಯಾರಿಸಬಹುದಾಗಿದೆ. ಪ್ಲಾಸ್ಟಿಕ್ ಹೊರತಾದ ಟಿಕೆಟ್ ಇದಾಗಿದ್ದು, ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿರುತ್ತದೆ ಎಂದರು.

ಕೆಎಸ್​​ಆರ್​ಟಿಸಿಯಿಂದ 2 ಇಟಿಎಂ ಸ್ಲಿಟಿಂಗ್ ಯಂತ್ರ ಅಳವಡಿಕೆ

ಈ ರೀತಿಯ ಪ್ಲಾಸ್ಟಿಕ್ ಕೊಳವೆ ರಹಿತ ಇಟಿಎಂ ರೋಲ್‍ಗಳನ್ನು ಉಪಯೋಗಿಸುತ್ತಿರುವುದು ದೇಶದಲ್ಲಿಯೇ ಪ್ರಥಮ ರಸ್ತೆ ಸಾರಿಗೆ ನಿಗಮವಾಗಿರುತ್ತದೆ. ಕರಾಸಾ ನಿಗಮ ಮತ್ತು ಅದರ ಅಂಗ ಸಂಸ್ಥೆಗಳಿಗೆ ಪ್ರತಿ ವರ್ಷ 1.50 ಕೋಟಿಯಷ್ಟು ಇಟಿಎಂ ರೋಲ್‍ಗಳು ಖಾಸಗಿಯವರಿಂದ ಸರಬರಾಜಾಗುತ್ತಿದ್ದು, ಸದ್ಯ ಪ್ಲಾಸ್ಟಿಕ್ ಕೊಳವೆಗೆ ಪ್ರತಿಯೊಂದಕ್ಕೆ 50 ಪೈಸೆಯಂತೆ, ಅಂದಾಜು ಪ್ರತಿ ವರ್ಷ 75 ಲಕ್ಷ ರೂಪಾಯಿಗಳ ಉಳಿತಾಯವಾಗುತ್ತದೆ ಎಂದರು.

ಇನ್ನು ಯಂತ್ರಗಳಿಂದ ಪ್ರತಿದಿನ 16,000 ರೋಲ್‍ಗಳನ್ನು ತಯಾರಿಸಬಹುದಾಗಿದ್ದು, ಇದರಿಂದ ಸಂಸ್ಥೆಗೆ ವಾರ್ಷಿಕ ರೂ.4.80 ಕೋಟಿ ಆದಾಯವನ್ನು ನಿರೀಕ್ಷಿಸಬಹುದಾಗಿದೆ. ಯಂತ್ರಗಳಿಂದ ಉತ್ಪಾದಿಸುವ ಇಟಿಎಂ ರೋಲ್‍ಗಳನ್ನು ಕರಾಸಾ ನಿಗಮದ ಎಲ್ಲಾ ವಿಭಾಗಗಳಿಗೆ ಸರಬರಾಜು ಮಾಡಬಹುದಾಗಿದ್ದು, ನಿಗಮಕ್ಕೆ ಖಾಸಗಿಯವರ ಮೇಲೆ ಅವಲಂಬಿತವಾಗುವುದು ತಪ್ಪಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಇತರೆ ಮೂರು ನಿಗಮಗಳಿಗೂ ಕೂಡ ಇಟಿಎಂ ರೋಲ್‍ಗಳನ್ನು ಸರಬರಾಜು ಮಾಡಬಹುದಾಗಿದೆ.‌

ABOUT THE AUTHOR

...view details