ಕರ್ನಾಟಕ

karnataka

ETV Bharat / state

ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ : ಪ್ರೀತಿಸುವ ನಾಟಕವಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ - Instagram friendship

ಕಳೆದ ಜೂನ್ 9ರಂದು ವಿಜಯನಗರದ ಗೆಳೆಯನ ಮನೆಗೆ ಆಕೆಯನ್ನು ಕರೆದೊಯ್ದು, ಗೆಳೆಯನ ಮನೆಯಲ್ಲೇ ಒಂದು ದಿನ ಇಟ್ಟುಕೊಂಡು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಮೆಡಿಕಲ್ ಶಾಪ್​ಗೆ ಹೋಗ್ತೀನಿ ಎಂದಿದ್ದವಳು ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು..

Sexual harassment
ಲೈಂಗಿಕ ದೌರ್ಜನ್ಯ

By

Published : Jul 4, 2021, 7:05 PM IST

ಬೆಂಗಳೂರು :ಇನ್‌ಸ್ಟ್ರಾಗಾಮ್​ನಲ್ಲಿ ಪರಿಚಯವಾದ ಬಾಲಕಿಗೆ ಪ್ರೀತಿಸುವ ಸೋಗಿನಲ್ಲಿ ಸ್ನೇಹಿತನ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ನೀಡಿದ‌ ದೂರಿನ ಮೇರೆಗೆ‌ ದರ್ಶನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ : ಬಾಲಕಿಯ‌ ಪೋಷಕರು ಶ್ರೀನಿವಾಸನಗರದವರಾಗಿದ್ದು, ಅವರು ಅನಕ್ಷರಸ್ಥರಾಗಿದ್ದಾರೆ. ಜೀವನ ನಡೆಸಲು ಕೂಲಿ ಮಾಡಿ‌ ಮಗಳನ್ನು ಸಾಕುತ್ತಿದ್ದರು. ಕೊರೊನಾ ಹಿನ್ನೆಲೆ ಶಾಲೆ‌ಗಳು‌‌‌ ಓಪನ್ ಆಗದ ಕಾರಣ, ಆನ್​ಲೈನ್​ನಲ್ಲಿ ನಡೆಯುವ ತರಗತಿಗಳಿಗಾಗಿ ಪೋಷಕರು ಸ್ಮಾರ್ಟ್ ಫೋನ್‌ ಕೊಡಿಸಿದ್ದರು. ಕೆಲ‌ದಿನಗಳ ನಂತರ ಫೇಸ್​ಬುಕ್​​, ಇನ್‌ಸ್ಟಾಗ್ರಾಮ್​ನಲ್ಲಿ ಬಾಲಕಿ ಅಕೌಂಟ್ ಓಪನ್ ಮಾಡಿಕೊಂಡಿದ್ದಳು.‌ ಇದಾದ ನಂತರ ದರ್ಶನ್​ ಎಂಬಾತ ಈಕೆಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದರಿಂದ ಆಕೆ ಅಕ್ಸೆಪ್ಟ್​ ಮಾಡಿಕೊಂಡಿದ್ದಳು.

ಯುವತಿ ಮೇಲೆ ಲೈಂಗಿಕ ದೌರ್ಜನ್ಯ :ಹೀಗೆ ಪರಿಚಯಗೊಂಡ ಇಬ್ಬರು‌ ಸ್ನೇಹ ಬೆಳೆಸಿದ್ದಾರೆ. ಇದಾದ ನಂತರ ಅಪ್ರಾಪ್ತ ಯುವತಿಯನ್ನು ಪ್ರೀತಿಸುವುದಾಗಿ ದರ್ಶನ್ ನಂಬಿಸಿದ್ದಾನೆ. ಹಾಗೆ ನಂಬಿಸಿದವನು ಕಳೆದ ಜೂನ್ 9ರಂದು ವಿಜಯನಗರದ ಗೆಳೆಯನ ಮನೆಗೆ ಆಕೆಯನ್ನು ಕರೆದೊಯ್ದು, ಗೆಳೆಯನ ಮನೆಯಲ್ಲೇ ಒಂದು ದಿನ ಇಟ್ಟುಕೊಂಡು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಮೆಡಿಕಲ್ ಶಾಪ್​ಗೆ ಹೋಗ್ತೀನಿ ಎಂದಿದ್ದವಳು ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು.

ಪೋಷಕರ ಬಳಿ ಹೇಳಿಕೊಂಡ ಯುವತಿ :ನಂತರ ಮನೆಗೆ ಬಂದಿದ್ದ ಯುವತಿ ಪೋಷಕರ ಬಳಿ ನಡೆದ ಘಟನೆಯನ್ನ ವಿವರಿಸಿದ್ದಾಳೆ. ದರ್ಶನ್ ವಿಜಯನಗರದಲ್ಲಿರುವ ತನ್ನ ಗೆಳೆಯನ ನಿವಾಸಕ್ಕೆ ಕರೆದು ಕೊಂಡು ಹೋಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಪೋಷಕರ ಬಳಿ ಹೇಳಿಕೊಂಡಿದ್ದಾಳೆ‌. ಆರೋಪಿಯನ್ನ ಬಂಧಿಸಿರುವ ಹನುಮಂತನಗರ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.

ಓದಿ :ಬಾಲಕನನ್ನು ತಿಂದು ಹಾಕಿದ ಮೊಸಳೆ.. 10 ದಿನದೊಳಗೆ ಎರಡನೇ ಘಟನೆ !

ABOUT THE AUTHOR

...view details