ಕರ್ನಾಟಕ

karnataka

ETV Bharat / state

ಅನಾಥ 'ಭೀಮ'ನ ಉಸಿರಾಗಿದ್ದ ಇನ್ಸ್​ಪೆಕ್ಟರ್ ಮಹಮ್ಮದ್​​ ರಫೀಕ್​ ನಿಧನ - ಹೃದಯಾಘಾತದಿಂದ ಇನ್​​ಪೆಕ್ಟರ್​​​​​ ಮಹಮ್ಮದ್ ರಫಿಕ್ ನಿಧನ

ಜಾನುವಾರುಗಳಿಗೆ ಆಸರೆಯಾಗಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಇನ್ಸ್​​ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

Inspector Mohammad Rafiq died
ಇನ್ಸ್​​ಪೆಕ್ಟರ್ ಮಹಮ್ಮದ್ ರಫಿಕ್ ನಿಧನ

By

Published : Oct 21, 2021, 5:24 PM IST

Updated : Oct 21, 2021, 6:29 PM IST

ಬೆಂಗಳೂರು:ಕೋವಿಡ್ ಸಮಯದಲ್ಲಿ ಜಾನುವಾರುಗಳಿಗೆ ಆಸರೆಯಾಗಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಮತ್ತು ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಖ್ಯಾತಿಯಾಗಿದ್ದ ಇನ್ಸ್​​ಪೆಕ್ಟರ್​​​​​ ಮಹಮ್ಮದ್​ ರಫೀಕ್​ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇನ್ಸ್​​ಪೆಕ್ಟರ್​​​​​ ರಫಿಕ್​​​ ಇಂದು ಬೆಳಗ್ಗೆ ಸ್ನಾನಕ್ಕೆ ತೆರಳಿದ್ದ ವೇಳೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೇ ಕುಟುಂಬಸ್ಥರು ವೈದ್ಯರನ್ನು ಕರೆಸಿದರಾದರೂ ಅದಾಗಲೇ ರಫೀಕ್ ಸಾವನ್ನಪ್ಪಿದ್ದರು ಎನ್ನಲಾಗಿದೆ.

ಜಾನುವಾರುಗಳ ಬಗೆಗೆ ಅಪಾರ ಪ್ರೀತಿ, ಕಾಳಜಿ ಹೊಂದಿದ್ದ ಅಧಿಕಾರಿ

ಸರಿಗಮಪದಲ್ಲಿ ಹಾಡು:

ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮಹಮ್ಮದ್ ರಫೀಕ್​​, ಇತ್ತೀಚೆಗೆ ಖಾಸಗಿ ಚಾನೆಲ್​ನಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಕಾರ್ಯಕ್ರಮದಲ್ಲಿ ಪೊಲೀಸ್​ ಕಾನ್ಸ್​​​ಟೇಬಲ್​​​ ಸುಬ್ರಮಣಿ ಜೊತೆ ಭಾಗವಹಿಸಿದ್ದರು. ಈ ಮೂಲಕ ಬಿಂದಾಸಾಗಿ ಹಾಡು ಹಾಡಿ ಜನರ ಮೆಚ್ಚುಗೆ ಪಡೆದಿದ್ದರು.

ಇನ್ಸ್​​ಪೆಕ್ಟರ್ ಮಹಮ್ಮದ್ ರಫಿಕ್

ಇದನ್ನೂ ಓದಿ:ಲಾಕ್​ಡೌನ್​ ವೇಳೆ ಭೀಮನ ಕಾಪಾಡಿದ ರಫಿ... ಇದೀಗ ಈತ ಎಲ್ಲರ ಮುದ್ದಿನ ಕಣ್ಮಣಿ!

ಕರುವನ್ನು ಜೊತೆಯಲ್ಲೇ ಕರೆದೊಯ್ಯುತ್ತಿದ್ದ ರಫೀಕ್:

ಲಾಕ್​​​ಡೌನ್ ಸಮಯದಲ್ಲಿ ಗೋವುಗಳಿಗೆ ರಕ್ಷಣೆ ನೀಡಿ ಮಹಮ್ಮದ್ ರಫೀಕ್ ಆಹಾರ ನೀಡುತ್ತಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರುವನ್ನು ಸಾಕುತ್ತಿದ್ದರು. ಅವರು ಬೇರೆಡೆ ವರ್ಗಾವಣೆಗೊಂಡರೂ ಕರುವನ್ನು ಜೊತೆಯಲ್ಲೇ ಕರೆದೊಯ್ಯುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Oct 21, 2021, 6:29 PM IST

ABOUT THE AUTHOR

...view details