ಬೆಂಗಳೂರು: ಒಂದೆಡೆ ಸಿಸಿಬಿ ಕಚೇರಿಯಲ್ಲಿ ಸಂಜನಾ ಗಲ್ರಾನಿ ತನಿಖೆ ನಡೆಯುತ್ತಿರುವ ಕಾರಣ ಸದ್ಯ ನಟಿ ರಾಗಿಣಿಯ ತನಿಖೆಯನ್ನ ಶಿವಾಜಿನಗರ ಮಹಿಳಾ ಇನ್ಸ್ಪೆಕ್ಟರ್ ಕಾತ್ಯಾಯಿನಿ ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಾಗಿಣಿಯವರನ್ನ ವಶಕ್ಕೆ ಪಡೆದ ದಿನದಿಂದ ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲಾ ಹಾಗೂ ಪೂರ್ಣಿಮಾ ತನಿಖೆ ನಡೆಸುತ್ತಿದ್ದರು. ಆದರೆ ಸದ್ಯ ನಟಿ ಸಂಜನಾ ಗಲ್ರಾನಿ ತನಿಖೆಯನ್ನ ಮಹಿಳಾಧಿಕಾರಿ ಅಂಜುಮಾಲಾ ಹಾಗೂ ಪೂರ್ಣಿಮಾ ಸಿಸಿಬಿಯಲ್ಲಿ ನಡೆಸುತ್ತಿರುವ ಕಾರಣ ಸದ್ಯ ಮಹಿಳಾ ತನಿಖಾಧಿಕಾರಿಯಾಗಿ ಇನ್ಸ್ಪೆಕ್ಟರ್ ಕಾತ್ಯಾಯಿನಿ ಅವರು ರಾಗಿಣಿ ತನಿಖೆ ನಡೆಸಲು ಎಂಟ್ರಿ ಕೊಟ್ಟಿದ್ದಾರೆ.