ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಇನ್‌ಸ್ಪೆಕ್ಟರ್ ಮೀರ್ ಗೌಸ್ (55) ಅವರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಇಂದು ಕೊನೆಯುಸಿರೆಳೆದಿದ್ದಾರೆ.
ಕೊರೊನಾ ಸೋಂಕಿಗೆ ಇನ್‌ಸ್ಪೆಕ್ಟರ್ ಬಲಿ - bangalore latest news
ಬೆಂಗಳೂರಿನ ವಿಲ್ಸನ್ ಗಾರ್ಡನ್ನ ಇನ್‌ಸ್ಪೆಕ್ಟರ್ ಮೀರ್ ಗೌಸ್ ಎಂಬುವವರು ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದಾರೆ.
![ಕೊರೊನಾ ಸೋಂಕಿಗೆ ಇನ್‌ಸ್ಪೆಕ್ಟರ್ ಬಲಿ inspector died due to corona](https://etvbharatimages.akamaized.net/etvbharat/prod-images/768-512-8809924-465-8809924-1600167450599.jpg)
ಮೃತ ಇನ್‌ಸ್ಪೆಕ್ಟರ್ ಮೀರ್ ಗೌಸ್
ವಿಲ್ಸನ್ ಗಾರ್ಡನ್ನ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಾರ ಕೊರೊನಾ ಪರೀಕ್ಷೆಗೆ ಮಾಡಿದಾಗ, ಸೋಂಕು ತಗುಲಿರುವುದು ದೃಢಪಟ್ಟಿತ್ತು.
ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೀರ್ ಗೌಸ್ ಅವರು ಪೊಲೀಸರು, ಆಪ್ತರು, ಅಪಾರ ಬಂಧುಗಳನ್ನು ಹೊಂದಿದ್ದರು.