ಬೆಂಗಳೂರು:ಮಹಿಳೆಯರ ಹಿತ ದೃಷ್ಟಿಯಿಂದ ನಗರದ ಪೊಲೀಸರು ಬಹಳಷ್ಟು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆ ಮೇರೆಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರು ಮಹಿಳೆಯರಿಗೆ ಸಮಸ್ಯೆ ಆದಾಗ ತಕ್ಷಣ ಸ್ಥಳಕ್ಕೆ ಚೀತಾ ಬೈಕ್ ಹಾಗೂ ಹೊಯ್ಸಳ ವಾಹನಗಳೇ ತೆರಳಬೇಕು. ಹಾಗಾಗಿ ಈ ಹಿನ್ನೆಲೆಯಲ್ಲೇ ವಾಹನಗಳನ್ನ ಖುದ್ದಾಗಿ ತಪಾಸಣೆ ನಡೆಸಿದ್ದಾರೆ.
ಮಹಿಳೆಯರ ರಕ್ಷಣೆಗೆ ದಿಟ್ಟ ಹೆಜ್ಜೆ.. ಪೊಲೀಸ್ ಸಿಬ್ಬಂದಿ ಉಪಯೋಗಿಸುವ ವಾಹನಗಳ ತಪಾಸಣೆ..
ಬೆಂಗಳೂರು ನಗರ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆ ಮೇರೆಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರು ಮಹಿಳೆಯರಿಗೆ ಸಮಸ್ಯೆ ಆದಾಗ ತಕ್ಷಣ ಸ್ಥಳಕ್ಕೆ ಚೀತಾ ಬೈಕ್ ಹಾಗೂ ಹೊಯ್ಸಳ ಗಾಡಿ ಹೋಗುವ ಹಿನ್ನೆಲೆ ಖುದ್ದಾಗಿ ತಪಾಸಣೆ ನಡೆಸಿದ್ದಾರೆ.
ವಾಹನಗಳ ತಪಾಸಣೆ
ಮಹಿಳೆಯ ಸುರಕ್ಷತೆಗೆ ಇತ್ತೀಚೆಗೆ ಸುರಕ್ಷಾ ಆ್ಯಪ್ ಪರಿಚಯ ಮಾಡಿದ್ದು, ಮಹಿಳೆಯರಿಗೆ ಸಮಸ್ಯೆಯಾದಾಗ ತಕ್ಷಣ 100ಕ್ಕೆ ಕರೆ ಮಾಡಿದಾಗ ಚೀತಾ ಬೈಕ್ ಹಾಗೂ ಹೊಯ್ಸಳ ಗಾಡಿ ಹೇಗೆ ಸ್ಪಾಟ್ ರೀಚ್ ಆಗಬೇಕು, ಅಲ್ಲದೆ ವಾಹನದ ಕಂಡೀಷನ್ ಹೇಗಿದೆ ಎಂದು ಕಾರ್ಯಾಚರಣೆ ಮಾಡಿದ್ದಾರೆ.
ಸಾರ್ವಜನಿಕರ ರಕ್ಷಣೆಗೆ ಪೂರ್ವ ವಿಭಾಗ ಡಿಸಿಪಿ ಈ ರೀತಿಯ ಕ್ರಮ ಕೈಗೊಂಡಿದ್ದಾರೆ.