ಕರ್ನಾಟಕ

karnataka

ETV Bharat / state

ಫೆಬ್ರವರಿ 10 ರಿಂದ 19ರವರೆಗೆ ಇವಿಎಂಗಳ ಪರಿಶೀಲನೆ ಕಾರ್ಯ: ಪಾಲಿಕೆ ಮುಖ್ಯ ಆಯುಕ್ತ - ಇವಿಎಂಗಳ ಪರಿಶೀಲನೆ ಕಾರ್ಯ

ರಾಜಕೀಯ ಪಕ್ಷಗಳ ಮುಖಂಡರು ಸ್ಥಳಕ್ಕೆ ಆಗಮಿಸಿ ಇವಿಎಂಗಳ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಬಿಬಿಎಂಪಿ ತಿಳಿಸಿದೆ.

inspection-of-evms-from-february-corporation-chief-commissioner-tushar-girinath
ಫೆಬ್ರವರಿ 10 ರಿಂದ 19ರವರೆಗೆ ಇವಿಎಂಗಳ ಪರಿಶೀಲನೆ ಕಾರ್ಯ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

By

Published : Feb 2, 2023, 10:39 PM IST

Updated : Feb 2, 2023, 10:48 PM IST

ಫೆಬ್ರವರಿ 10 ರಿಂದ 19ರವರೆಗೆ ಇವಿಎಂಗಳ ಪರಿಶೀಲನೆ ಕಾರ್ಯ

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಳಸುವ ಇವಿಎಂಗಳು ನಗರಕ್ಕೆ ಆಗಮಿಸಿದ್ದು, ಫೆಬ್ರವರಿ 10 ರಿಂದ 19ರವರೆಗೆ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ದಾಸನಪುರ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ 5,10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಹಾಗೂ ವಿವಿಪ್ಯಾಟ್ (ಮತದಾರರ ಪರಿಶೀಲಿಸಿದ ಕಾಗದ) ಸಂಗ್ರಹಗಾರ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಸೂಚನೆಯಂತೆ ನಾವು ಇಲ್ಲಿ ಇವಿಎಂ ಸಂಗ್ರಹಗಾರ ಸ್ಥಾಪನೆ ಮಾಡಿದ್ದೇವೆ. ಇಲ್ಲಿ 7 ವಿಧಾನಸಭಾ ಕ್ಷೇತ್ರಗಳ ಇವಿಎಂ ಹಾಗೂ ವಿವಿಪ್ಯಾಟ್ ಸಂಗ್ರಹ ಮಾಡಿದ್ದೇವೆ, ಅದೇ ರೀತಿ ನಗರದ ಇತರ ಮೂರು ಕಡೆಗಳಲ್ಲಿ ಶೀಘ್ರವೇ ಸಂಗ್ರಹಗಾರಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.

7 ವಿಧಾನಸಭಾ ಕ್ಷೇತ್ರಗಳ ಇವಿಎಂಗಳು ಆಗಮಿಸಿವೆ. ಈ ಯಂತ್ರಗಳ ತಪಾಸಣೆಗೆಂದು ಚುನಾವಣಾ ಆಯೋಗ 80 ಎಂಜಿನಿಯ‌ರ್​ಗಳನ್ನು ನಿಯೋಜಿಸಿದೆ. ಫೆಬ್ರವರಿ 10 ರಿ೦ದ ರಾಜಕೀಯ ಪಕ್ಷಗಳ ಮುಖಂಡರು ಸ್ಥಳಕ್ಕೆ ಆಗಮಿಸಿ ಇವಿಎಂಗಳ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಸ್ಥಳದಲ್ಲಿರುವ ಎಂಜಿನಿಯರ್‌ಗಳು ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಲಿದ್ದಾರೆ ಎಂದು ತಿಳಿಸಿದರು.

ನಗರದಲ್ಲಿ 3083 ಮತಗಟ್ಟೆಗಳು:ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 3083 ಮತಗಟ್ಟೆಗಳಿರಲಿವೆ. ಈಗಾಗಲೇ ಚುನಾವಣಾ ಆಯೋಗದಿಂದ ಶೇಕಡಾ 125ರಷ್ಟು ಇವಿಎಂಗಳು ಬಂದಿವೆ. ಶೇಕಡಾ 135ರಷ್ಟು ವಿವಿ ಪ್ಯಾಟ್‌ಗಳ ಅವಶ್ಯಕತೆ ಇದ್ದು, ಫೆಬ್ರವರಿ 6ರಂದು ವಿವಿಪ್ಯಾಟ್‌ಗಳು ಬರಲಿವೆ ಎಂದು ನಗರ ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದರು.

ಪೊಲೀಸ್ ಇಲಾಖೆಗೆ ಮನವಿ:ಚುನಾವಣಾ ಆಯೋಗದ ಸೂಚನೆ ಮೇರೆಗೆ ನಿರ್ಮಿಸಲಾಗಿರುವ ಇವಿಎಂ ಸಂಗ್ರಹಗಾರದಲ್ಲಿ ಸಂಗ್ರಹಿಸಿಡಲಾಗುವ ಯಂತ್ರಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದ್ದು, ಪೊಲೀಸರು ಸಕಲ ಭದ್ರತೆ ಒದಗಿಸಿದ್ದಾರೆ ಎಂದು ತಿಳಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜು ಹಾಗೂ ಸಂಭಂಧಪಟ್ಟ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಶರಾವತಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಕೇಂದ್ರಕ್ಕೆ ಇಂದೇ ಪ್ತಸ್ತಾವನೆ: ಬಿಎಸ್‌ವೈ

Last Updated : Feb 2, 2023, 10:48 PM IST

ABOUT THE AUTHOR

...view details