ಬೆಂಗಳೂರು: ಬೆಂಗಳೂರನ್ನು ಡ್ರಗ್ಸ್ ಜಾಲದಿಂದ ಮುಕ್ತಗೊಳಿಸಿ ಎಂದು ವಾಯ್ಸ್ ಆಫ್ ಪಬ್ಲಿಕ್ ಟೀಂ ಸಿಸಿಬಿ ಕಚೇರಿ ಬಳಿ ಆಗ್ರಹಿಸಿದೆ.
ಸಿಸಿಬಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ; ವಕೀಲ ಅಮೃತೇಶ್ ಆಗ್ರಹ - sandalwood drugs case
ಡ್ರಗ್ಸ್ ಜಾಲದಲ್ಲಿ ರಾಜಕಾರಣಿಗಳು, ಕಾರ್ಪೊರೇಟರ್ಗಳು ಸೇರಿದಂತೆ ಸಿನೆಮಾ ರಂಗದವರೂ ಇದ್ದಾರೆ. ಎಲ್ಲರೂ ತಪಾಸಣೆಯ ಜೊತೆಗೆ ತನಿಖೆಗೆ ಒಳಗಾಗಬೇಕು. ತನಿಖೆಗೆ ಯಾವುದೇ ತೊಂದರೆ ಆಗೋದು ಬೇಡ ಎಂದು ಹಿರಿಯ ವಕೀಲ ಅಮೃತೇಶ್ ಹಾಗೂ ತಂಡ ಸಿಸಿಬಿ ಕಚೇರಿ ಎದುರು ಫ್ಲೆಕ್ಸ್ ಹಿಡಿದು ಮನವಿ ಮಾಡಿದ್ದಾರೆ.
ಸಿಸಿಬಿ ಕಚೇರಿಯಲ್ಲಿ ಮಾದಕ ವಸ್ತು ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಹಿರಿಯಾಧಿಕಾರಿಯಾದ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಕೂಡ ಸಿಸಿಬಿ ಕಚೇರಿಯಲ್ಲಿದ್ದಾರೆ. ಇದರ ನಡುವೆ ವಾಯ್ಸ್ ಆಫ್ ಪಬ್ಲಿಕ್ ಟೀಂ ಡ್ರಗ್ಸ್ ಜಾಲ ಬೇಧಿಸುವಲ್ಲಿ ಸಿಸಿಬಿ ಪ್ರಯತ್ನ ಯಶಸ್ವಿಯಾಗಲಿ. ಈ ವಿಚಾರವಾಗಿ ರಾಜಕೀಯ ಮಾಡೋದು ಬೇಡ. ತನಿಖಾಧಿಕಾರಿ ಸಂದೀಪ್ ಪಾಟೀಲ್ರನ್ನು ಬದಲಾಯಿಸಬೇಡಿ. ಡ್ರಗ್ಸ್ ಜಾಲದಲ್ಲಿ ಗೌರವಾನ್ವಿತ ವ್ಯಕ್ತಿಗಳು, ಹೈಫೈ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಾರ್ಪೊರೇಟರ್ಗಳು ಸೇರಿದಂತೆ ಸಿನೆಮಾ ರಂಗದವರೂ ಇದ್ದಾರೆ. ಎಲ್ಲರೂ ತಪಾಸಣೆಯ ಜೊತೆಗೆ ತನಿಖೆಗೆ ಒಳಗಾಗಬೇಕು. ತನಿಖೆಗೆ ಯಾವುದೇ ತೊಂದರೆ ಆಗೋದು ಬೇಡ ಎಂದು ಹಿರಿಯ ವಕೀಲ ಅಮೃತೇಶ್ ಹಾಗೂ ತಂಡ ಸಿಸಿಬಿ ಕಚೇರಿ ಎದುರು ಫ್ಲೆಕ್ಸ್ ಹಿಡಿದು ಮನವಿ ಮಾಡಿದ್ದಾರೆ.