ಕರ್ನಾಟಕ

karnataka

ನೇಕಾರ ಅಭಿವೃದ್ಧಿ ನಿಗಮ ಸ್ಥಾಪಸಿ, ಅನುದಾನ ಮೀಸಲಿಡಿ: ನೇಕಾರ ಸ್ವಾಮೀಜಿ, ಮುಖಂಡರ ಒತ್ತಾಯ

By

Published : Nov 27, 2020, 3:18 PM IST

ನೇಕಾರ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚಿಸಿ ಅನುದಾನ ಮೀಸಲಿರಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ನೇಕಾರ ಸ್ವಾಮೀಜಿಗಳು ಹಾಗೂ ಸಮುದಾಯದ ಮುಖಂಡರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿತು.

ನೇಕಾರ ಅಭಿವೃದ್ಧಿ ನಿಗಮ ಸ್ಥಾಪಸಿ
ನೇಕಾರ ಅಭಿವೃದ್ಧಿ ನಿಗಮ ಸ್ಥಾಪಸಿ

ಬೆಂಗಳೂರು:ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ನೇಕಾರ ಸ್ವಾಮೀಜಿಗಳು ಹಾಗೂ ಸಮುದಾಯದ ಮುಖಂಡರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿತು.

ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ನಿಯೋಗ, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ನೇಕಾರ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚಿಸಿ ಅನುದಾನ ಮೀಸಲಿರಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಮಾಜಿ ಉಪ ಮೇಯರ್ ಹರೀಶ್, ರಾಜ್ಯದಲ್ಲಿ 60-70 ಲಕ್ಷ ನೇಕಾರರಿದ್ದೇವೆ. ನಾವು ಬಿಜೆಪಿಗೆ ಬೆಂಬಲ ನೀಡಿಕೊಂಡೇ ಬಂದಿದ್ದೇವೆ. ಹಾಗಾಗಿ ನಮ್ಮ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ನೇಕಾರ ಅಭಿವೃದ್ಧಿ ನಿಗಮ‌ ರಚನೆ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ ಎಂದರು.

ನೇಕಾರರಿಗೆ ಸಂಬಂಧಿಸಿದ ಮೂರು ನಿಗಮಗಳಿದ್ದು, ಅದಕ್ಕೆ ನೇಕಾರರು ಅಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ನೇಕಾರಿಕೆ ನಮ್ಮ ಕುಲ ಕಸುಬು. ಹಾಗಾಗಿ ನೇಕಾರ ಸಮುದಾಯದವರಿಗೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಜೊತೆಗೆ ಪ್ರವಾಹದ ವೇಳೆ ಕೈಮಗ್ಗಗಳು ನೀರುಪಾಲಾಗಿವೆ. ಅವರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದು, ಅಧಿಕಾರಿಗಳ ಜೊತೆ ಮಾತುಕತೆ ನಡೆಸುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಹೇಳಿದರು.

ರೈತ ಹಾಗೂ ನೇಕಾರ ರಾಜ್ಯದ ಎರಡು ಕಣ್ಣು ಎಂದು ಸಿಎಂ ಯಡಿಯೂರಪ್ಪ ಯಾವಾಗಲೂ ಹೇಳುತ್ತಾರೆ. ಆದರೆ ಕೊರೊನಾ ಸಂಕಷ್ಟದಲ್ಲಿ ನೇಕಾರರ ಎಲ್ಲಾ ಉತ್ಪನ್ನ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದರೂ ಕೆಲ ಅಧಿಕಾರಿಗಳಿಂದಾಗಿ ಯಾವ ಜಿಲ್ಲೆಯಲ್ಲೂ ಒಂದೇ ಒಂದು ಬಟ್ಟೆಯನ್ನೂ ತೆದುಕೊಂಡಿಲ್ಲ. ಇದನ್ನು ಸಿಎಂ ಗಮನಕ್ಕೆ ತರಲಾಗಿದ್ದು, ಖರೀದಿಗೆ ಸೂಚನೆ ನೀಡಿವಂತೆ ಮನವಿ ಮಾಡಿದ್ದೇವೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details